ಹೋಳಿಯ ಬಣ್ಣದೋಕುಳಿ ನಡುವೆ ಹರಿಯಿತು ಮೂವರ ನೆತ್ತರು: ಮಹಿಳೆ ವಿಚಾರಕ್ಕೆಕಾರ್ಮಿಕರ ನಡುವೆ ಗಲಾಟೆ: ಮೂವರ ಕೊಲೆಯಲ್ಲಿ ಅಂತ್ಯ...!!

 ಹೋಳಿಯ ಬಣ್ಣದೋಕುಳಿ ನಡುವೆ ಹರಿಯಿತು ಮೂವರ ನೆತ್ತರು: ಮಹಿಳೆ ವಿಚಾರಕ್ಕೆಕಾರ್ಮಿಕರ ನಡುವೆ ಗಲಾಟೆ: ಮೂವರ ಕೊಲೆಯಲ್ಲಿ ಅಂತ್ಯ...!!


ಬೆಂಗಳೂರು: ಹೋಳಿ ಗಮ್ಮತ್ತಿನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ನಶೆ ತಲೆಗೇರಿಸಿಕೊಂಡಿದ್ದ ಬಿಹಾರ ಮೂಲದ ಆರು ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಸರ್ಜಾಪುರ - ಬಾಗಲೂರು(ತಮಿಳುನಾಡು) ಮುಖ್ಯ ರಸ್ತೆಯ ತಿಂಡ್ಲು ಅಪಾರ್ಟ್​ಮೆಂಟ್​ವೊಂದರಲ್ಲಿ ಶನಿವಾರ ನಡೆದಿದೆ.



ಮೃತ ದುರ್ದೈವಿಗಳನ್ನು ಬಿಹಾರ ಮೂಲದ ರಾಧೆಶ್ಯಾಮ್, ಕನ್ಸರ್, ದೀಪು ಎಂದು ಗುರುತಿಸಲಾಗಿದೆ.


ಆರೋಗ್ಯ, ಸಬಲೀಕರಣ ಮತ್ತು ಮಹಿಳಾ ಸಹಭಾಗಿತ್ವ ದೇಯೋದ್ದೇಶದಡಿ ವಾಕಥಾನ್;ಚಿತ್ರನಟಿ ಅನುಪ್ರಭಾಕರ್,ನಾಗಲಕ್ಷ್ಮಿ ಚೌದರಿ,ಎಸ್.ಆರ್.ವಿಶ್ವನಾಥ್ ಭಾಗಿ...!!


ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ, ಸರ್ಜಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 



ಹೋಳಿ ಹಬ್ಬದ ರಜೆ ಇದ್ದ ಹಿನ್ನೆಲೆಯಲ್ಲಿ ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದ ಬಿಹಾರದ ಒಂದೇ ಗ್ರಾಮದ ವಾಸಿಗಳು ನಿನ್ನೆ ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಮಹಿಳೆ ವಿಚಾರಕ್ಕೆ ಗಲಾಟೆ ನಡೆದಿದೆ. ಕಂಠಪೂರ್ತಿ ಕುಡಿದು ಕೈಗೆ ಸಿಕ್ಕ ದೊಣ್ಣೆ ಮತ್ತು ರಾಡ್‌ನಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಲ್ಲೆ ವೇಳೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.


ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.


ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ...!!



Comments