ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಪಲ್ಟಿ; ರೈತ ಸಾವು..||

 ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಪಲ್ಟಿ: ರೈತ ಸಾವು..!!

ಉಳುಮೆ ಮಾಡುವ ವೇಳೆ ಟ್ರಾಕ್ಟರ್ ಮುಗುಚಿಬಿದ್ದ ಪರಿಣಾಮ ರೈತ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ತಾಲೂಕಿನ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾಪುರದಲ್ಲಿ ನಡೆದಿದೆ.


ಮೃತರನ್ನು ಚೆನ್ನಾಪುರ ಗ್ರಾಮದ ನಿವಾಸಿ 50 ವರ್ಷದ ಚಂದ್ರಪ್ಪ (ಹೈಟೆಕ್‌ ಚಂದ್ರು) ಎಂದು ಗುರುತಿಸಲಾಗಿದೆ.

ಮುಂಗಾರು ಪ್ರಾರಂಭವಾಗಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಇಂದು ಸ್ವಂತ ಜಮೀನಿನಲ್ಲಿ ಉಳುಮೆ ಮಾಡುವಾಗ ನಿಯಂತ್ರಣ ತಪ್ಪಿದ ಟ್ರಾಕ್ಟ‌ರ್ ಪಲ್ಟಿಯಾಗಿದೆ. ಘಟನೆಯಲ್ಲಿ ಚಂದ್ರಪ್ಪ ಟ್ರಾಕ್ಟ‌ರ್ ಕೆಳಗೆ ಸಿಲುಕಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೃತರು ಮಡದಿ ಹಾಗೂ ಓರ್ವ ಮಗನನ್ನು ಅಗಲಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments