ಹೆಚ್ಚುವರಿ ಜಿಲ್ಲಾಧಿಕಾರಿ ಆತ್ಮಹತ್ಯೆ...
ಕಾಸರಗೋಡು: ಕಾಸರಗೋಡಿನಿಂದ ವರ್ಗಾವಣೆಗೊಂಡು, ಕಣ್ಣೂರಿನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ನವೀನ್ ಬಾಬು ಅಲ್ಲಿನ ಪಳ್ಳಿಕುನ್ನು ಎಂಬಲ್ಲಿನ ಅವರ ಮನೆಯಲ್ಲಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹೆಂಡತಿ ಮಕ್ಕಳಿಗೆ ವಿಷ ಕೊಟ್ಟು, ತಾನು ನೇಣು ತೆಗೆದುಕೊಂಡು ಕುಟುಂಬ ಸಮೇತ ಆತ್ಮಹತ್ಯೆ. ......
ಪತ್ತನಂತಿಟ್ಟಕ್ಕೆ ವರ್ಗಾವಣೆಗೊಂಡ ಸಂಬಂಧ ಸೋಮವಾರ ಅವರಿಗೆ ಕಣ್ಣೂರು ಜಿಲ್ಲಾಡಳಿತದಿಂದ ವಿದಾಯಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕಣ್ಣೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರು ಪೆಟ್ರೋಲ್ ಬಂಕ್ ಒಂದಕ್ಕೆ ಸಂಬಂಧಿಸಿ, 'ನವೀನ್ ಬಾಬು ಅವರು ಭ್ರಷ್ಟಾಚಾರ ನಡೆಸಿದ್ದಾರೆ' ಎಂದು ಆರೋಪಿಸಿದ್ದರು.
ಕಾಸರಗೋಡಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಅವರು ಅವರು ಕಳೆದ ಲೋಕಸಭೆ ಚುನಾವಣೆಗೆ ಮುನ್ನ ವರ್ಗಾವಣೆಗೊಂಡು ಕಣ್ಣೂರಿಗೆ ತೆರಳಿದ್ದರು.
Comments