ಹೆಂಡತಿ ಮಕ್ಕಳಿಗೆ ವಿಷ ಕೊಟ್ಟು, ತಾನು ನೇಣು ಬಿಗಿದುಕೊಂಡು ಕುಟುಂಬ ಸಮೇತ ಆತ್ಮಹತ್ಯೆ. .......

ಹೆಂಡತಿ ಮಕ್ಕಳಿಗೆ ವಿಷ ಕೊಟ್ಟು, ತಾನು ನೇಣು ಬಿಗಿದುಕೊಂಡು ಕುಟುಂಬ ಸಮೇತ ಆತ್ಮಹತ್ಯೆ.


 ಮನೆಯಲ್ಲಿ ದಂಪತಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ನಡೆದಿದೆ.


ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ ಪಿ ರವಿ.ಪಿ, ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪತಿ ಅವಿನಾಶ್ (38), ಪತ್ನಿ ಮಮತಾ (30) ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.


ಅವಿನಾಶ್ ಮೊದಲಿಗೆ ಮಕ್ಕಳು, ಪತ್ನಿಗೆ ವಿಷ ಕೊಟ್ಟು ಸಾಯಿಸಿ, ಆ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


ಮೃತರು ಮೂಲತಃ ಕಲಬುರಗಿ ಜಿಲ್ಲೆಯವರಾಗಿದ್ದು, ಯಡಿಯೂರಪ್ಪ ನಗರದಲ್ಲಿನ ನರಸಪ್ಪ ಎಂಬುವವರ ಮನೆಯಲ್ಲಿ 5 ವರ್ಷದಿಂದ ಬಾಡಿಗೆಗೆ ಇದ್ದರು ಎನ್ನಲಾಗಿದೆ.


ಆತ್ಮಹತ್ಯೆ ಮಾಡಿಕೊಂಡ ಅವಿನಾಶ್ ಸಹೋದರ ಉದಯ್ ಎಂಬಾತನು ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಜಾಹೀರಾತು 


Comments