ದೆಹಲಿಯಲ್ಲಿ ಅಮಿತ್ ಷಾ ಭೇಟಿಗೆ ತೆರಳಿ ಬರಿಗೈಯಲ್ಲಿ ವಾಪಸ್ ಆದ ಈಶ್ವರಪ್ಪ.....

 ದೆಹಲಿಯಲ್ಲಿ ಅಮಿತ್ ಷಾ ಭೇಟಿಗೆ ತೆರಳಿ ಬರಿಗೈಯಲ್ಲಿ ವಾಪಸ್ ಆದ ಈಶ್ವರಪ್ಪ.....



ದೇವನಹಳ್ಳಿ :  ಏರ್ಪೋರ್ಟ್ನಲ್ಲಿ ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಈಸ್ವರಪ್ಪ ಹೇಳಿಕೆ, ಅಮಿತ್ ಷಾ ದೆಹಲಿಯಲ್ಲಿ ಬಂದು ಭೇಟಿಯಾಗಿ ಎಂದು ಕರೆದಿದ್ದರು, ಅಮಿತ್ ಷಾ ಕರೆ ಮೇರೆಗೆ ಹೋಗಿ ಭೇಟಿ ಸಾಧ್ಯವಾಗದೆ ವಾಪಸ್ ಅಗಿದ್ದೇನೆ. 


ಯಲಹಂಕ ಶಾಸಕ ವಿಶ್ವನಾಥ್ ಬಂಡಾಯ ಹಿನ್ನೆಲೆ,ಅಮಿತ್ ಶಾ ನೇತೃತ್ವದಲ್ಲಿ ನೆನ್ನೆ ಸಭೆ, ಇಂದು ವಿಶ್ವನಾಥ್ ಮನೆಗೆ ಸುಧಾಕರ್ ಬೇಟಿ......!!!



ದೆಹಲಿಗೆ ಕರೆದು ಅಮಿತ್ ಷಾ ಭೇಟಿಯಾಗಿಲ್ಲ, ಕರೆದು ಈ ರೀತಿ ಅವಮಾನ ಮಾಡಿದ್ದಾರೆ ಎಂದು ನಾನು ಭಾವಿಸಲ್ಲ, ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೆ. ಹಾಗಾಗಿ ನಮಗೆ ಲೋಕಸಭೆ ಟಿಕೆಟ್ ಸಿಕ್ಕಿಲ್ಲ ಅಗಾಗಿ ನಾನ್ನು ಪಕ್ಷೇತರವಾಗಿ ನಿಂತ ನನಗೆ ಶಿವಮೊಗ್ಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗ್ತಿದೆ.


ದೆಹಲಿಯಲ್ಲಿ ಅಮಿತ್ ಷಾ ಭೇಟಿಗೆ ಸಿಗದೇ ಇದ್ದದ್ದು ನನಗೆ ವರವಾಗಿದೆ, ಭೇಟಿಯಾಗಿ ಸ್ಪರ್ದೆ ವಾಪಸ್ ಪಡೆಯಿರಿ ಎಂದಿದ್ದರೆ ನನಗೆ ಹಿನ್ನಡೆ ಆಗ್ತಿತ್ತು, ಈಗ ಪರೋಕ್ಷವಾಗಿ ನೀವು ಸ್ಪರ್ದೆ ಮಾಡಿ ಎಂಬ ಸಂದೇಶ ಕೊಟ್ಟಂಗಿದೆ. ಆದ್ದರಿಂದ ನಾನು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ತೇನೆ.


ಗೆದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ ಸೂಚಿಸುತ್ತೇನೆ, ರಾಜ್ಯದಲ್ಲಿ ಬಿಜೆಪಿ ಬಹುಸಂಖ್ಯೆಯಲ್ಲಿ ಗೆಲ್ಲಲಿ,ನಾನು ಶಿವಮೊಗ್ಗದಲ್ಲಿ ಗೆದ್ದು ಹಿಂದುತ್ವದ ರಕ್ಷಣೆಗಾಗಿ ಮೋದಿ ಕೈ ಬಲಪಡಿಸುತ್ತೇನೆ ಎಂದರು. 


ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬ ರಾಜಕಾರಣ ಕೊನೆಯಾಗಬೇಕು, ದೇಶದಲ್ಲಿ ನರೇಂದ್ರ ಮೊದಿಯವರ ಕೈ ಬಲಗೊಳ್ಳಬೇಕು, ದೆಹಲಿಯಿಂದ ಏರ್ಪೋರ್ಟ್ ಗೆ ಆಗಮಿಸಿ ಶಿವಮೊಗ್ಗಕ್ಕೆ ತೆರಳವ ವೇಳೆ ಈಶ್ವರಪ್ಪ ಹೇಳಿಕೆ ನೀಡಿದ್ದರೆ 

Comments