ಯಲಹಂಕ ಶಾಸಕ ವಿಶ್ವನಾಥ್ ಬಂಡಾಯ ಹಿನ್ನೆಲೆ,ಅಮಿತ್ ಶಾ ನೇತೃತ್ವದಲ್ಲಿ ನೆನ್ನೆ ಸಭೆ, ಇಂದು ವಿಶ್ವನಾಥ್ ಮನೆಗೆ ಸುಧಾಕರ್ ಬೇಟಿ......!!!

 ಯಲಹಂಕ : ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಗ್ರಾಮದ ಯಲಹಂಕ ಶಾಸಕ ವಿಶ್ವನಾಥ್ ಬಂಡಾಯ ಹಿನ್ನೆಲೆ,ಅಮಿತ್ ಶಾ ನೇತೃತ್ವದಲ್ಲಿ ನೆನ್ನೆ ಸಭೆ, ಇಂದು ವಿಶ್ವನಾಥ್ ಮನೆಗೆ ಸುಧಾಕರ್ ಬೇಟಿ. 


ಯಲಹಂಕದ ಸಿಂಗನಾಯಕನಹಳ್ಳಿ ಮನೆಗೆ ಬೇಟಿ ನೀಡಿ ವಿಶ್ವನಾಥ್ ಜೊತೆ ಸುಧಾಕರ್ ಚರ್ಚೆ, ಲೋಕಸಬಾ ಚುನಾವಣೆ ಹಿನ್ನೆಲೆ ಬಂಡಾಯ ಶಮನಕ್ಕೆ ಮುಂದಾಗಿರುವ ಸುಧಾಕರ್ , ವಿಶ್ವನಾಥ್ ಮನೆಯಲ್ಲಿ ತಿಂಡಿ ಮಾಡಿ ವಿಶ್ವನಾಥ್ ಜೊತೆ ಚರ್ಚೆ. 



ಅಭ್ಯರ್ಥಿ ಸುಧಾಕರ್ ಗೆ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು, ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಹಾಗೂ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಸಾಥ್.


ಸುಧಾಕರ್ ವಿರುದ್ದ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದ ವಿಶ್ವನಾಥ್. ಹೀಗಾಗಿ ನೆನ್ನೆ ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ನಡೆಸಿ ಇಂದು ಬೇಟಿಯಾಗಿದ್ದಾರೆ.


ಮಾತುಕತೆ ನಂತರ ಮನೆ ಬಳಿ ಇಬ್ಬರು ಜಂಟಿ ಸುದ್ದಿಗೋಷ್ಟಿ ನಡೆಸಿದ್ದರು

Comments