ಹ್ಯಾಂಡ್ ಬಾಲ್ ಗೇಮ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದು ಕೊಟ್ಟ ಹೆಡ್ ಕಾನ್ಸ್ಟೇಬಲ್ ಪುತ್ರಿ ಪ್ರೇರಣಾ ಯಾದವ್..
ಹ್ಯಾಂಡ್ ಬಾಲ್ ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಸ್ಕೂಲ್ ಗೇಮ್ ಪ್ರೆಡಿಕ್ಷನ್ ಆಫ್ ಇಂಡಿಯಾ ಗೆ ಪ್ರೇರಣಾ ಯಾದವ್ ಸಿ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
https://sarathitv.blogspot.com/2023/11/sandeepunnikrishnan-smaranarthacyclejat.html
ದೇಶದ ಎಲ್ಲಾ ರಾಜ್ಯಗಳಿಂದ 17 ವರ್ಷದ ಒಳಗಿನ ಬಾಲಕಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದ ಕೂಡ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ಸ್ಪರ್ಧೆಯಲ್ಲಿ ಪ್ರಯಾಣ ಯಾದವ್ ಉತ್ತಮ ಪ್ರದರ್ಶನ ನೀಡಿದರಿಂದ ತಂಡಕ್ಕೆ ಕೀರ್ತಿ ತಂದಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಬಿ ಎಸ್ ಚಂದ್ರಶೇಖರ್ ಪುತ್ರಿ ಯಾದ ಇವರು ಯಲಹಂಕ CRPF ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು ದೆಹಲಿಯಲ್ಲಿ ಅಕ್ಟೋಬರ್ 2023 24 ನೇ ಸಾಲಿನ 17 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ 52ನೇ ಕೆ ವಿ ನ್ಯಾಷನಲ್ ಮತ್ತು ರೀಜಿನಲ್ ಸ್ಪೋರ್ಟ್ಸ್ ಮೀಟ್ ನಲ್ಲಿ ಪ್ರಯಾಣ ಯಾದವ್ ಸಿ ಭಾಗವಹಿಸಿ ಹ್ಯಾಂಡ್ ಬಾಲ್ ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ SGFI ಗೆ ಆಯ್ಕೆಯಾಗಿದ್ದಾರೆ.
Comments