SandeepUnnikrishnan.. Smaranartha.CycleJatha ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ಅಪ್ಪಟ ದೇಶಪ್ರೇಮಿ ಯುವಕರು ಬೆಂಗಳೂರಿನಿಂದ ಬಾಂಬೆಗೆ ಸೈಕಲ್ ಜಾಥಾ ಹೊರಟಿದ್ದಾರೆ..

 



ದೇವನಹಳ್ಳಿ.. ದೇಶಭಕ್ತಿ ಎನ್ನುವ ಅಮೃತ ತನುಮನ ಸೇರಿದರೆ ವ್ಯಕ್ತಿ ಸೈನಿಕನಾಗ್ತಾನೆ. ದೇಶ ಕಾಯ್ತಾನೆ.. ದೇಶಕ್ಕಾಗಿ ಸರ್ವಸ್ವ ನೀಡಿ ಹುತಾತ್ಮನಾಗ್ತಾನೆ.. ದೇಶಕ್ಕಾಗಿ ತನ್ನೆಲ್ಲವನ್ನು ಅರ್ಪಿಸಿ ಕೋಟ್ಯಾಂತರ ಜನರ ಮನಸಿನಲ್ಲಿರ್ತಾನೆ. ಅಂತಹ ಅಪ್ಪಟ ದೇಶಭಕ್ತ ಹುತಾತ್ಮಯೋದ ಮೇಜರ್ ಸಂದೀಪ್ ಉನ್ನಿಕೃಷ್ಣನ್.. ಭಾರತೀಯರ ಹೃದಯಗೆದ್ದ ಸಂದೀಪ್ ಉನ್ನಿಕೃಷ್ಣನ್ ಸ್ಮರಣಾರ್ಥ ಅಪ್ಪಟ ದೇಶಪ್ರೇಮಿ ಯುವಕರು ಬೆಂಗಳೂರಿನಿಂದ ಬಾಂಬೆಗೆ ಸೈಕಲ್ ಜಾಥಾ ಹೊರಟಿದ್ದಾರೆ. ಅದು ಏಕೆ ಗೊತ್ತಾ..!!




ಇಂದು ಬೆಳಗ್ಗೆ ಬೆಂಗಳೂರಿನ ಯಲಹಂಕದ ಚೌಡೇಶ್ವರಿ ವಾರ್ಡ್ಗೆ ಸೇರಿದ ಇಸ್ರೊಅಕಾಶ್ ವಿಹಾರ್ ಬಡಾವಣೆಯಲ್ಲಿ ಇಂದು ದೇಶಭಕ್ತಿಯ ಸಂಭ್ರಮ ಮನೆ ಮಾಡಿತ್ತು.. ಹುತಾತ್ಮ‌ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ 2008ರ ಬಾಂಬೆ ಬಾಂಬ್ ಸ್ಪೋಟ ಕಾರ್ಯಾಚರಣೆ ವೇಳೆ ಜನರ ರಕ್ಷಿಸುತ್ತಾ ಹುತಾತ್ಮರಾದರು. 2008ರ ನವೆಂಬರ್ 26ರಂದು ಬಾಂಬೆಯಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿ ಅನೇಕ ಹುತಾತ್ಮ‌ ವೀರ ಯೋಧರ ಸ್ಮರಣಾರ್ಥ ಗೌರವ ಸಮರ್ಪಿಸಲಾಗುತ್ತದೆ.. ಇದರ ಭಾಗವಾಗಿ ಬೆಂಗಳೂರಿನ "2ಕೆಎಆರ್ ಏರ್ ಸ್ಕ್ವಾಡ್ರನ್" ಬೆಂಗಳೂರಿಗೆ ಸೇರಿದ ಎನ್.ಸಿ.ಸಿ.ಕೆಡೆಟ್ ಗಳು ಬೆಂಗಳೂರಿನ ಯಲಹಂಕದ ಸಂದೀಪ್ ಉನ್ನಿಕೃಷ್ಣನ್ ಮನೆಯಿಂದ ಬಾಂಬೆಗೆ ಸೈಕಲ್ ಜಾಥಾ ಹೊರಟರು.. ಈ ಜಾಥಾಕ್ಕೆ ಸಂದೀಪ್ ಪೋಷಕರಾದ ಉನ್ನಿಕೃಷ್ಣನ್ ಮತ್ತು ಧನಲಕ್ಷ್ಮೀ ದಂಪತಿ ಮತ್ತು ಎನ್.ಸಿ‌.ಸಿ ಆಫೀಸರ್ಸ್ ಮತ್ತು ಮೂರು ಜನ ಎನ್.ಸಿ.ಸಿ ಕೆಡಟ್ಗಳ ಪೋಷಕರು ಹಾಜರಿದ್ದು, ಖುಷಿ ಹಂಚಿಕೊಂಡರು..



Byte:-ಉನ್ನಿಕೃಷ್ಣನ್.ಕೆ, ಸಂದೀಪ್ ಉನ್ನಿಕೃಷ್ಣನ್ ತಂದೆ..

Byte:-ಮೃಧುಲ್ ಮೋಹನ್, ಎನ್.ಸಿ.ಸಿ.ಕೆಡೆಟ್..

"2ಕೆಎಆರ್ ಏರ್ ಸ್ಕ್ವಾಡ್ರನ್" ಬೆಂಗಳೂರಿಗೆ ಸೇರಿದ ಎನ್.ಸಿ.ಸಿ. ಕೆಡೆಟ್ ಗಳಾದ ಇನ್ನು ವಿಧ್ಯಾಭ್ಯಾಸ ಮಾಡುತ್ತಿರುವ ಮೃಧುಲ್ ಮೋಹನ್, ಸೈಯದ್ ಆಸೀಫ್ ಮತ್ತು ಸೂರ್ಯ ಬೆಂಗಳೂರಿನಿಂದ ಬಾಂಬೆಗೆ ಸೈಕಲ್ ಜಾಥಾ ಹೊರಟ ಅಪ್ಪಟ ಯುವ ದೇಶಭಕ್ತರು. ಇವರನ್ನು ಬೀಳ್ಕೊಡಲು ಎನ್‌.ಸಿ‌.ಸಿ ಆಫೀಸರ್ಸ್, ಎನ್.ಸಿ.ಸಿ.ಕೆಡೆಟ್ಗಳು ಮತ್ತು ಪೋಷಕರು ಹಾಜರಿದ್ದು ಚಾಲನೆ ನೀಡಿ ಸಂಭ್ರಮಿಸಿದರು.. ಇದೇ ವೇಳೆ ಸೈಕಲ್ ಜಾಥಾ ಯಶಸ್ಸಿಗೆ ಸಿಹಿ ಹಂಚಿ ಶುಭ ಕೋರಿದರು..

Byte:-ಧನಲಕ್ಷ್ಮೀ, ಮೇಜರ್ ಸಂದೀಪ್ ‌ಇನ್ನಿಕೃಷ್ಣನ್ ತಾಯಿ..

Byte:- ಪ್ರೇಮಾ ಮೋಹನ್, ಮೃದುಲ್ ಎನ್.ಸಿ.ಸಿ.ಕೆಡೆಟ್ ತಾಯಿ..



ದೇಶಕ್ಕೆ ಸೇವೆ ಸಲ್ಲಿಸುವುದೇ ಮಹಾಭಾಗ್ಯ..ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಮ್ಮ ಹೆಮ್ಮೆ.. ಭಾರತೀಯರ, ಕನ್ನಡಿಗರ, ಯಲಹಂಕದ ಜನರ ಸ್ಪೂರ್ತಿ- ಗೌರವ.. ಈಗಿನ ಯುವಜನತೆಗೆ ಮೇಜರ್ ಸಂದೀಪ್ ಆದರ್ಶ ಎಂದು ಎನ್.ಸಿ‌.ಸಿ.ಕೆಡೆಟ್ಗಳು ಸಂತಸ ವ್ಯಕ್ತಪಡಿಸಿದರು..

Byte:-ತನುಶ್ರೀ, ಎನ್.ಸಿ.ಸಿ.ಕೆಡೆಟ್..



ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಮ್ಮನ್ನಗಲಿ 15ವರ್ಷ ಕಳೆದೋಗಿದೆ.‌. ಆದರ ಅವರ ನೆನಪು ಮಾತ್ರ ಅಜರಾಮರ.. ಸದ್ಯ ಸಂದೀಪ್ ಪೋಷಕರು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಮೆಮೋರಿಯಲ್ ಟ್ರಸ್ಟ್ ಮಾಡಿ ದೇಶಸೇವೆ ಮೂಲಕ ಸಂದೀಪ್ ರನ್ನು ಸ್ಮರಿಸೋ ಕಾರ್ಯ ಮಾಡುತ್ತಿದ್ದಾರೆ.. ಯಲಹಂಕದಲ್ಲಿ ಸಂದೀಪ್ ಸ್ಮರಣಾರ್ಥ ಸಂದೀಪ್ ಉನ್ನಿಕೃಷ್ಣನ್ ಸರ್ಕಲ್ ಸಹ ಇದ್ದು ಗೌರವ ಸಲ್ಲಿಸಲಾಗುತ್ತಿದೆ. ಇಂದು ಬೆಂಗಳೂರಿನ ಹೊರಟ ಸೈಕಲ್ ಜಾಥಾ ಯಶಸ್ವಿಯಾಗಲಿಲ್ಲ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹೆಸರು ಅಜರಾಮರವಾಗಲಿ..



Comments