ಯಲಹಂಕ ಆರ್.ಟಿ.ಓ.ಬೈಪಾಸ್ ರಸ್ತೆ ಅಗಲೀಕರಣ ಮತ್ತು‌ ಡಾಂಬರೀಕರಣ.. ಯಲಹಂಕದ ಜನಪ್ರಿಯ ಶಾಸಕ ಎಸ್.ಆರ್.ವಿಶ್ವನಾಥ್ ರಿಂದ ಚಾಲನೆ..!!

ಮಾದರಿ‌ ಕ್ಷೇತ್ರವಾಗುವತ್ತ ದಾಪುಗಾಲಿಡುತ್ತಿರುವ ಯಲಹಂಕ..!!


ರಾಜ್ಯ ರಾಜಧಾನಿ ಬೆಂಗಳೂರಿನ  ಯಲಹಂಕ ವಿಧಾನ ಸಭಾ ಕ್ಷೇತ್ರ ಮಾದರಿ ಕ್ಷೇತ್ರವಾಗುವತ್ತ ಹೆಜ್ಜೆ ಇಡುತ್ತಿದೆ.. ಜನಪ್ರಿಯ ಶಾಸಕರು ಆಧುನಿಕ‌ ಯಲಹಂಕದ ನವನಿರ್ಮಾಪಕ ಎಂದೇ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಚಿರಪರಿಚಿತ.. ತಮ್ಮ ಹದಿನೈದು ವರ್ಷಗಳ ಶಾಸಕರ ಕಾಲಾವಧಿಯಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ‌ಕೋಟಿ‌ ಅನುಧಾನ ತಂದು ಹಾಕಿದ್ದಾರೆ.. ರಸ್ತೆ, ಒಳಚರಂಡಿ, ಕುಡಿಯುವ ನೀರು, ಸಾರಿಗೆ, ಶಿಕ್ಷಣ, ಅರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಅಭಿವೃದ್ಧಿ ಹೊಂದುತ್ತಿದೆ.. ಯಲಹಂಕದ ಆರ್.ಟಿ.ಓ.ಕಚೇರಿ ಇರುವ ಸಿಂಗನಾಯಕನಹಳ್ಳಿ ಬೈಪಾಸ್




ಯುವಕನ ಮೆದುಳು ನಿಶ್ಕ್ರಿಯ, ಅಂಗಾಂಗ ದಾನಕ್ಕೆ ಮುಂದಾದ ಕುಟುಂಬಸ್ಥರು......  

https://sarathitv.blogspot.com/2023/11/blog-post_21.html                                                                            

ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಗೆ ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ರವರು ಚಾಲನೆ ನೀಡಿದರು.. ಪ್ರತಿದಿನ ಸಾವಿರಾರು ಜನ ಆರ್.ಟಿ.ಓ ಕಚೇರಿ ಬಂದು ಹೋಗ್ತಾರೆ.. ಸಿಂಗನಾಯಕನಹಳ್ಳಿ ಗ್ರಾಮಪಂಚಾಯ್ತಿಗೆ ಹೊಂದಿಕೊಂಡ ಆರ್.ಟಿ.ಓ ಕಚೇರಿ ಸುತ್ತಾಮುತ್ತಾ ಪವರ್ ಗ್ರಿಡ್ ಇದೆ, ಪ್ರತಿಷ್ಠಿತ ಖಾಸಗಿ ಶಾಲಾ ಕಾಲೇಜುಗಳಿವೆ.. ವಿಶೇಷವಾಗಿ ಯಲಹಂಕ ಶಾಸಕರ ಸ್ವಗ್ರಾಮ‌ ಸಿಂಗನಾಯಕನಹಳ್ಳಿ ಆಗಿರುವುದರಿಂದ, ಜನರಿಗೆ ಅಗತ್ಯ ಇರುವ ಕಾರಣ ಆರ್.ಟಿ.ಓ.ಬೈಪಾಸ್ ರಸ್ತೆಯ ಅಗಲೀಕರಣ ಅನಿವಾರ್ಯವಾಗಿತ್ತು.. ಆದ್ದರಿಂದ ಬೈಪಾಸ್ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿ ಸುಮಾರು 5ಕೋಟಿ 50ಲಕ್ಷ ವೆಚ್ಚದಲ್ಲಿ ನಡೆಯಲಿದೆ.. ಮೈಲಪನಹಳ್ಳಿ ರಸ್ತೆ ಗಡಿಯಿಂದ ದೊಡ್ಡಬಳ್ಳಾಪುರ-ಯಲಹಂಕ ರಸ್ತೆವರೆಗೂ ಸುಮಾರು 3 ಕಿ.ಮೀ.ಕಾಮಗಾರಿ ನಡೆಯಲಿದೆ.. ಸಿಂಗನಾಯಕನಹಳ್ಳಿ ಗ್ರಾಮದ ಮೇಲೆ ಹಾದುಹೋಗುವ ರಸ್ತೆಯ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಸ್ತೆ ಅಭಿವೃದ್ಧಿ ಕಸಮಗಾರಿ ಶುರುವಾಗಿದೆ..ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ ಅಧಿಕಾರಿಗಳು.. ರಸ್ತೆ ಅಭಿವೃದ್ಧಿ ಕಾಮಗಾರಿಯ ಚಾಲನೆ ವೇಳೆ ಶಾಸಕರಾದ ಎಸ್.ಆರ್.ವಿಶ್ವನಾಥ್ ಮಾತನಾಡಿ ಶೀಘ್ರವಾಗಿ ರಸ್ತೆ ಕಾಮಗಾರಿ ಮುಗಿಯಬೇಕು.. ನಮ್ಮ ಕ್ಷೇತ್ರ ಅಭಿವೃದ್ಧಿಪಥದತ್ತ ಸಾಗಬೇಕೆಂದರು.. 

ಇದೇ ವೇಳೆ ಯಲಹಂಕ ತಾಲ್ಲೂಕು ಬಿಜೆಪಿ ನಾಯಕರು, ಸಿಂಗನಾಯಕನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಅಮರಾವತಮ್ಮ, ಉಪಾಧ್ಯಕ್ಷರಾದ ಸಿಂಗನಾಯಕನಹಳ್ಳಿ ಪ್ರಶಾಂತ್ ರೆಡ್ಡಿರವರು ಮತ್ತು ಸಿಂಗನಾಯಕನಹಳ್ಳಿ ಗ್ರಾ.ಪಂ ಸದಸ್ಯರುಗಳು ಉಪಸ್ಥಿತರಿದ್ದರು.. ಇನ್ನು ಸಿಂಗನಾಯಕನಹಳ್ಳಿ ಪಿ.ಡಿ.ಓ ಮತ್ತು ಪಂಚಾಯ್ತಿ ಸಿಬ್ಬಂದಿ ಸೇರಿ ರಸ್ತೆ ಕಾಮಗಾರಿಯ ಕಾಂಟ್ರಾಕ್ಟರ್ ಸೇರಿದಂತೆ ಸಿಂಗನಾಯಕನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ನೂರಾರು ಜನ ಉಪಸ್ಥಿತರಿದ್ದರು..

Comments