ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂತರಹಳ್ಳಿಯ ಯುವಕ
ದೊಡ್ಡಬಳ್ಳಾಪುರ : ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಮೆದುಳು ನಿಶ್ಕ್ರಿಯಗೊಂಡ ಹಿನ್ನಲೆ, ಯುವಕನ ಅಂಗಾಂಗವನ್ನ ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ, ಹೃದಯ, ಕಿಡ್ನಿ,ಕಣ್ಣ ಮತ್ತು ಶ್ವಾಸಕೋಶನಗಳನ್ನ ದಾನ ಮಾಡುವ ಮೂಲಕ ಮಗನ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿಯ ಮಧುಸೂದನ (26) ಯುವನ ಮೆದುಳು ನಿಶ್ಕ್ರಿಯಗೊಂಡ ಹಿನ್ನಲೆ ವೈದ್ಯರು ಸಾವು ಘೋಷಣೆ ಮಾಡಿದ್ದಾರೆ, ಮೃತ ಯುವಕ ನವೆಂಬರ್ 12ರಂದು ಮೈಸೂರು ಪ್ರವಾಸಕ್ಕೆ ಹೋಗಿದ್ದ, ಈ ವೇಳೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ, ಆತನನ್ನು ಮೈಸೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಲಾಗುತ್ತಿತ್ತು, ಅನಂತರ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದರು.
ಮೆದುಳು ನಿಸ್ಕ್ರಿಯಗೊಂಡ ಹಿನ್ನಲೆ ಚೇತರಿಕೆಯ ಯಾವುದೇ ಸಾಧ್ಯತೆ ಇಲ್ಲದ ಕಾರಣಕ್ಕೆ ವೈದ್ಯರು ಯುವಕನ ಸಾವನ್ನು ಘೋಷಣೆ ಮಾಡಿದ್ದಾರೆ, ಮಗ ಅಂಗಾಂಗವನ್ನ ದಾನ ಮಾಡುವ ಮೂಲಕ ಮೃತ ಯುವಕನ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.
Comments