ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ..

 ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ: ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದ ಘೋರ ದುರಂತ! 


ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಎದೆಗುಂದುವ ದುರಂತವೊಂದು ನಡೆದಿದೆ. ಸಾಲದ ಸುಳಿ ಹಾಗೂ ಐಷಾರಾಮಿ ಜೀವನದ ವ್ಯಾಮೋಹಕ್ಕೆ ಸಿಲುಕಿ ಯುವಕನೊಬ್ಬ ತನ್ನದೇ ಕುಟುಂಬವನ್ನು ಬಲಿಪಡೆದಿದ್ದಾನೆ.


ಘಟನೆಯ ವಿವರ: ಮೋಹನ್ ಗೌಡ (27) ಎಂಬಾತ ತನ್ನ ತಾಯಿ ಆಶಾ (55), ಅಕ್ಕ ವರ್ಷಿತಾ (34) ಹಾಗೂ 11 ವರ್ಷದ ಅಕ್ಕನ ಮಗ ಮಯಾಂಕ್‌ನ ಕತ್ತು ಸೀಳಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದುರದೃಷ್ಟವಶಾತ್ ತಾಯಿ ಮತ್ತು ಅಕ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೋಹನ್ ಹಾಗೂ ಪುಟ್ಟ ಬಾಲಕನ ಸ್ಥಿತಿ ಆಸ್ಪತ್ರೆಯಲ್ಲಿ ಚಿಂತಾಜನಕವಾಗಿದೆ.


ದುರಂತಕ್ಕೆ ಕಾರಣವೇನು?

ಚೀಟಿ ವ್ಯವಹಾರದಲ್ಲಿ ಮಾಡಿಕೊಂಡಿದ್ದ ವಿಪರೀತ ಸಾಲ ಹಾಗೂ ದುಂದುವೆಚ್ಚವೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೃತ್ಯಕ್ಕೂ ಮುನ್ನ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಮೋಹನ್ ತನ್ನ ಸಂಬಂಧಿಕರಿಗೆ ಕಳುಹಿಸಿದ್ದ. ಆತಂಕಗೊಂಡ ಸಂಬಂಧಿಕರು ಧಾವಿಸಿ ಬಂದು ಮನೆ ಬಾಗಿಲು ಒಡೆದು ನೋಡುವಷ್ಟರಲ್ಲಿ ಈ ಘೋರ ದುರಂತ ನಡೆದುಹೋಗಿತ್ತು. ಸದ್ಯ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಾಲ ಎಷ್ಟೇ ಇರಲಿ, ಅದು ನಮ್ಮ ಜೀವಕ್ಕಿಂತ ದೊಡ್ಡದಲ್ಲ. ಸಮಸ್ಯೆಗಳಿಗೆ ಸಾವು ಎಂದಿಗೂ ಪರಿಹಾರವಲ್ಲ. ಮನೋಜ್ ಹನಿಯೂರು 


Comments