ಉನ್ನತ ತಂತ್ರಜ್ಞಾನಮತ್ತು ತಜ್ಞರ ಆರೈಕೆಯೊಂದಿಗೆ ಕ್ಯಾನ್ಸರ್‌ವಿರುದ್ಧ ಹೋರಾಡಲು ಬದ್ಧವಾಗಿರುವಮಣಿಪಾಲ್ ಆಸ್ಪತ್ರೆ ಯಲಹಂಕ..!!
ಉನ್ನತ ತಂತ್ರಜ್ಞಾನಮತ್ತು ತಜ್ಞರ ಆರೈಕೆಯೊಂದಿಗೆ ಕ್ಯಾನ್ಸರ್‌ವಿರುದ್ಧ ಹೋರಾಡಲು ಬದ್ಧವಾಗಿರುವಮಣಿಪಾಲ್ ಆಸ್ಪತ್ರೆ ಯಲಹಂಕ
ಯಲಹಂಕ: ಕ್ಯಾನ್ಸರ್‌ಬಹುತೇಕ ಸಂದರ್ಭಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಎದುರಾಗುತ್ತದೆ,ಭಾರತದಲ್ಲಿ ಪ್ರತಿವರ್ಷ 15ಲಕ್ಷಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್‌ರೋಗ ಪತ್ತೆಯಾಗುತ್ತಿದ್ದು ಇದರಲ್ಲಿ ಸುಮಾರು 9 ಲಕ್ಷಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಚಿಕಿತ್ಸೆಯು ಲಭ್ಯವಿದ್ದರೂ, ತಡವಾದ ರೋಗನಿರ್ಣಯ ಅಥವಾ ಒಂದೇ ಜಾಗದಲ್ಲಿ ಸಮಗ್ರ ಚಿಕಿತ್ಸೆ ಸಿಗದಿರುವುದು ಮತ್ತು ಬೇರೆ ಬೇರೆ ಕೇಂದ್ರಗಳಿಗೆ ಓಡಾಡಬೇಕಾಗುವ ಪರಿಸ್ಥಿತಿಯೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ ರೋಗಿಗಳು ಹಾಗೂ ಅವರ ಕುಟುಂಬಗಳು ಅನುಭವಿಸುವ ಭಯ, ಗೊಂದಲಮತ್ತು ಅನಿಶ್ಚಿತತೆ ಮತ್ತು ಒತ್ತಡಗಳೂಕೂಡ ಕ್ಯಾನ್ಸರ್‌ಚಿಕಿತ್ಸೆಯಪಯಣವನ್ನು ಇನ್ನಷ್ಟು ಕಠಿಣವಾಗಿಸಿದೆ.
ಇದನ್ನು ಮನಗಂಡು, ಮಣಿಪಾಲ್ ಆಸ್ಪತ್ರೆ ಯಲಹಂಕ, ಉತ್ತರ ಬೆಂಗಳೂರಿನಲ್ಲಿ ಕ್ಯಾನ್ಸರ್ ಚಿಕಿತ್ಸೆಯ ರೀತಿಯನ್ನೇ ಮರುರೂಪಗೊಳಿಸುತ್ತಿದೆ. ಅತ್ಯಾಧುನಿಕ ರೋಗನಿರ್ಣಯ ವ್ಯವಸ್ಥೆಗಳು, ವಿಶೇಷ ಕ್ಯಾನ್ಸರ್ (ಆಂಕಾಲಜಿ) ಸೇವೆಗಳು ಮತ್ತು ನಿರಂತರ ಕಾಳಜಿಯ ಆರೈಕೆಯನ್ನು ಒಂದೇ ಸೂರಿನಲ್ಲಿ ಒದಗಿಸುವ ಮೂಲಕ, ವ್ಯಕ್ತಿಯ ಜೀವನದಲ್ಲೇ ಅತ್ಯಂತ ಸಂಕೀರ್ಣವಾಗಿರುವ ಚಿಕಿತ್ಸೆ ಪಯಣವನ್ನು ಸರಳ ಮತ್ತು ಪರಿಣಾಮಕಾರಿಯಾಗಿಸುವ ಉದ್ದೇಶವನ್ನು ಆಸ್ಪತ್ರೆ ಹೊಂದಿದೆ.
ಈ ವಿಚಾರವನ್ನು ಆಸ್ಪತ್ರೆಯೊಳಗೇ ಸೀಮಿತಗೊಳಿಸದೆ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ, ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಯಲಹಂಕ ಮಾಧ್ಯಮ ಪ್ರತಿನಿಧಿಗಳು ಮತ್ತು ಆರೋಗ್ಯಬರಹಗಾರರಿಗಾಗಿ ಮಾರ್ಗದರ್ಶಿತ ಆಸ್ಪತ್ರೆ ಭೇಟಿ ಹಾಗೂ ಸಂವಾದಾತ್ಮಕ ರೌಂಡ್ ಟೇಬಲ್ ಚರ್ಚೆಯನ್ನು ಆಯೋಜಿಸಿತು. ಆಧುನಿಕ ಕ್ಯಾನ್ಸರ್ ಆರೈಕೆಯ ಕುರಿತ ಮಾಹಿತಿ ವಿನಿಮಯ ಮತ್ತು ಆರಂಭಿಕ ಹಂತದಲ್ಲೇ ರೋಗ ಪತ್ತೆ, ನಿಖರ ಚಿಕಿತ್ಸೆ ಹಾಗೂ ಸಂಯೋಜಿತ ಆರೈಕೆ ಹೇಗೆ ಜೀವನ ಮತ್ತು ಕ್ಯಾನ್ಸರ್ ಚಿಕಿತ್ಸೆಯಫಲಿತಾಂಶಗಳನ್ನು ಬದಲಾಯಿಸಬಲ್ಲದು ಎಂಬುದನ್ನು ತಿಳಿಸುವುದು ಇದರ ಉದ್ದೇಶವಾಗಿತ್ತು.
ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸಾಮಾರ್ಗಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿರುವ ಎರಡು ತಂತ್ರಜ್ಞಾನಗಳ ಬಗ್ಗೆ ಚರ್ಚೆ ದಿನದಮುಖ್ಯಕೇಂದ್ರಬಿಂದುವಾಗಿತ್ತು.
ಮೊದಲನೆಯದು, ಅತ್ಯಾಧುನಿಕ PET-CT ಇಮೇಜಿಂಗ್, ಇದು ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಲು ಹಾಗೂ ಅದರ ಸ್ವಭಾವವನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ.
ಎರಡನೆಯದು, ಭಾರತದಲ್ಲೇ ಮೊದಲನೆಯದಾದ Elekta LINAC, ಇದನ್ನು ಆನ್ ಲೈನ್ ಹೊಂದಾಣಿಕೆಯ ಯೋಜನೆಯಂತಹ ವೈಶಿಷ್ಟ್ಯಗಳೊಂದಿಗೆ ಸಕ್ರಿಯಗೊಳಿಸಲಾಗಿದೆ. ಹಾಗಾಗಿ ಇದು ವಿಕಿರಣ ಚಿಕಿತ್ಸೆವನ್ನು ಅತ್ಯಂತ ನಿಖರತೆಯಿಂದ ನೀಡಲು ಸಾಧ್ಯವಾಗಿಸಿ, ಆರೋಗ್ಯಕರ ಅಂಗಾಂಶಗಳಿಗೆ ಆಗುವ ಹಾನಿಯನ್ನು ಕಡಿಮೆ ಮಾಡುತ್ತಾರೋಗಿಗಳಿಗೆ ಹೆಚ್ಚಿನ ಅರಾಮಒದಗಿಸುತ್ತದೆ.
ಆದರೆ ಈ ದಿನದ ಚರ್ಚೆ ಕೇವಲ ತಂತ್ರಜ್ಞಾನಕ್ಕಷ್ಟೇ ಸೀಮಿತವಾಗಿರಲಿಲ್ಲ. ಕೆಲಸಕ್ಕೆ ಹಿಂತಿರುಗಲು ಬಯಸುವವರು, ತಮ್ಮ ಮಕ್ಕಳ ಭವಿಷ್ಯವನ್ನು ನೋಡಲು ಕನಸು ಕಾಣುವ ಪೋಷಕರು, ಭಯದ ನಡುವೆ ಭರವಸೆಯನ್ನು ಹುಡುಕುವ ಕುಟುಂಬಗಳು, ಹೀಗೆ ಹಲವು ಕ್ಯಾನ್ಸರ್ ಪೀಡಿತ ಜನರ ಜೀವನ ಹಾಗೂ ಅವರ ಜೀವನದ ಗುಣಮಟ್ಟದಲ್ಲಿ ತರುವ ಬದಲಾವಣೆ ಏನು ಎಂಬುವುದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಕೂಡ ಮಾಡಲಾಯಿತು.
ಮಣಿಪಾಲ್ ಆಸ್ಪತ್ರೆ ಯಲಹಂಕದ ಆರು ಖ್ಯಾತ ಆಂಕಾಲಜಿಸ್ಟ್ ಗಳು ತಮ್ಮ ಕ್ಷೇತ್ರಗಳ ಅನುಭವ ಮತ್ತು ಒಳನೋಟಗಳನ್ನು ಹಂಚಿಕೊಂಡು. ಇಂದಿನ ಕ್ಯಾನ್ಸರ್ ಆರೈಕೆ ಪ್ರತ್ಯೇಕ ವಿಭಾಗಗಳಲ್ಲಿ ಸೀಮಿತವಾಗದೆ, ಒಗ್ಗಟ್ಟಿನ ತಂಡದ ಕೆಲಸವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದರು.
ವೈಯಕ್ತಿಕಗೊಳಿಸಿದ ಚಿಕಿತ್ಸೆಯ ಮಹತ್ವದ ಬಗ್ಗೆ ಮಾತನಾಡಿದ ಡಾ. ಪ್ರಸಾದ್ ನಾರಾಯಣನ್, ಲೀಡ್ ಕನ್ಸಲ್ಟಂಟ್ -ಮೆಡಿಕಲ್ ಅಂಕಾಲಜಿ, ಹೀಮ್ಯಾಟೋ-ಆಂಕಾಲಜಿ ಮತ್ತು BMT, " ಇಂದು ಕ್ಯಾನ್ಸರ್ ಚಿಕಿತ್ಸೆ ರೋಗಕ್ಕೆ ಮಾತ್ರವಲ್ಲ ವ್ಯಕ್ತಿಗೆ ಹೊಂದಿಕೊಳ್ಳುವ ರೀತಿಯಲ್ಲಿ ರೂಪುಗೊಳ್ಳುತ್ತಿದೆ. ಪ್ರಿಸಿಷನ್ ಅಂಕಾಲಜಿ, ಇಮ್ಯುನೋಥೆರಪಿ ಮತ್ತು ಸುಧಾರಿತ ಮಾರ್ಗಸೂಚಿಗಳು, ರಿಮಿಷನ್ ಪ್ರಮಾಣ ಮತ್ತು ದೀರ್ಘಕಾಲಿಕ ಬದುಕನ್ನು ಗಮನಾರ್ಹವಾಗಿ ಹೆಚ್ಚಿಸಿವೆ ಇದು ರೋಗಿಗಳಿಗೆ ಹೊಸ ನಿರೀಕ್ಷೆಯನ್ನು ನೀಡುತ್ತಿದೆ' ಎಂದುಹೇಳಿದರು.
ಕ್ಯಾನ್ಸರ್ ದೇಹಕ್ಕಷ್ಟೇ ಸೀಮಿತವಲ್ಲ ಎಂಬ ಸತ್ಯದ ಮೇಲೆ ಬೆಳಕು ಚೆಲ್ಲಿದ ಡಾ. ಹರೀಶ್ ಪಿ, ಕನ್ಸಲ್ಟಂಟ್ - ಮೆಡಿಕಲ್ ಆಂಕಾಲಜಿ, " ಮಾನಸಿಕ ಸುಸ್ಥಿತಿ, ನಿರಂತರ ಆರೈಕೆ ಮತ್ತು ಚಿಕಿತ್ಸೆ ಪೂರ್ತಿ ಬೆಂಬಲ ದೊರೆಯುತ್ತಿದೆ ಎಂಬ ಭರವಸೆ ಇವೆಲ್ಲವೂ ರೋಗಿಗಳು ಚಿಕಿತ್ಸೆಯನ್ನು ಹೇಗೆ ಎದುರಿಸುತ್ತಾರೆ ಮತ್ತು ಚೇತರಿಸಿಕೊಳ್ಳುತ್ತಾರೆ ಎಂಬುದರ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ. ರೋಗ ನಿರ್ಣಯದಿಂದ ಬದುಕಿನ ಮುಂದಿನ ಹಂತವರೆಗೆ ವೈದ್ಯಕೀಯ ತಂಡವು ಜೊತೆಯಾಗಿ ನಡೆಯುತ್ತದೆ. ಇದರಿಂದ ಪ್ರಯಣ ಸುಲಭವಾಗಲಿದೆ' ಎಂದು ಅಭಿಪ್ರಾಯಪಟ್ಟರು.
ಶಸ್ತ್ರಚಿಕಿತ್ಸಾ ದೃಷ್ಟಿಕೋನದಿಂದ ಮಾತನಾಡಿದ ಡಾ. ಏರನ್ ಫರ್ನಾಂಡಿಸ್ ಮತ್ತು ಡಾ. ಜೋಸೆಫ್ ಮ್ಯಾಥಿವ್, ಸಮಗ್ರ ಆರೈಕೆಯ ಸ್ಪಷ್ಟ ಪ್ರಯೋಜನವನ್ನು ವಿವರಿಸಿದರು. ” ಇಮೇಜಿಂಗ್, ಶಸ್ತ್ರಚಿಕಿತ್ಸೆ ಆಂಕಾಲಜಿ ಮತ್ತು ಚೇತರಿಕೆ, ಎಲ್ಲವೂ ಒಂದೇ ಸೂರಿನಡಿ ಕಾರ್ಯನಿರ್ವಹಿಸಿದಾಗ ರೋಗಿಗಳು ಹಲವು ಆಸ್ಪತ್ರೆಗಳ ನಡುವೆ ಸುತ್ತಾಡುವ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ತಪ್ಪಿಸಬಹುದು," ಎಂದು ಕನ್ಸಲೆಂಟ್ - ಸರ್ಜಿಕಲ್ ಅಂಕಾಲಜಿ ಡಾ. ಏರನ್ ಫರ್ನಾಂಡಿಸ್ ಹೇಳಿದರು. ಇನ್ನು ಕನ್ಸಲೆಂಟ್ -ಸರ್ಜಿಕಲ್ ಅಂಕಾಲಜಿಯ ಡಾ.ಜೋಸೆಫ್ ಮ್ಯಾಥಿವ್ ಮಾತನಾಡಿ, ಅಂಗ ಮತ್ತು ಕಾರ್ಯಕ್ಷಮತೆಯನ್ನು ಉಳಿಸುವ ಚಿಕಿತ್ಸೆಯ ಬಗ್ಗೆ ಮಾತನಾಡುತ್ತ, ಕನಿಷ್ಠ ಹಸ್ತಕ್ಷೇಪ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಪ್ರಗತಿಯಿಂದ ಇಂದು ಅಂಗ ರಕ್ಷಣೆ ಸಾಧ್ಯ ಹಾಗಾಗಿ ಕ್ಯಾನ್ಸರ್ ತೆಗೆದುಹಾಕುವುದರ ಜೊತೆಗೆ ರೋಗಿಯ ಜೀವನಮಟ್ಟವನ್ನು ಕಾಪಾಡುವುದಕ್ಕೂ ಗಮನ ನೀಡಲಾಗುವುದು. ಇದರಿಂದ ರೋಗಿಗಳು ಬೇಗ ಚೇತರಿಸಿಕೊಂಡು, ತಮ್ಮ ದಿನನಿತ್ಯದ ಜೀವನಕ್ಕೆ ಶೀಘ್ರವಾಗಿ ಮರಳಬಹುದು," ಎಂದರು.
ರೇಡಿಯೇಷನ್ ಅಂಕಾಲಜಿಯಲ್ಲಿ ಆಗಿರುವ ಪ್ರಗತಿಗಳನ್ನು ವಿವರಿಸಿದ ಡಾ. ವಿಕ್ರಮ್ ಮೈಯ್ಯ, ಲೀಡ್ ಕನ್ಸಲ್ಟಂಟ್ -
ರೇಡಿಯೇಷನ್ ಅಂಕಾಲಜಿ, 'ಭಾರತದ ಮೊದಲ ಎಲೆಕ್ಟ್ರಾ LINAC ನಂತಹ ಮುಂದುವರಿದ ತಂತ್ರಜ್ಞಾನದೊಂದಿಗೆ ಆಧುನಿಕ ವಿಕಿರಣ ಚಿಕಿತ್ಸೆಯು ಆನ್ ಲೈನ್ ಹೊಂದಾಣಿಕೆಯ ಯೋಜನೆಯೊಂದಿಗೆ ಸಕ್ರಿಯಗೊಳಿಸಲ್ಪಟ್ಟಿದೆ. ಹಿಂದೆಂದಿಗಿಂತಲೂ ಹೆಚ್ಚು ನಿಖರ ಮತ್ತು ರೋಗಿ ಸ್ನೇಹಿ ಚಿಕಿತ್ಸೆ ಈಗ ಸಾಧ್ಯವಾಗಿದೆ. ಇದರೊಟ್ಟಿಗೆ ಇದು ಆರೋಗ್ಯಕರ ಜೀವ ಕೋಶಗಳ ರಕ್ಷಣೆ ಮತ್ತು ಕಡಿಮೆ ಅಡ್ಡಪರಿಣಾಮಗಳು ಮತ್ತು ರೋಗಿಗೆ ಆರಾಮದಾಯಕ ಅನುಭವದ ಭರವಸೆಯನ್ನೂ ನೀಡುತ್ತದೆ' ಎಂದು ತಿಳಿಸಿದರು.
ಚರ್ಚೆಗೆ ಪೂರ್ಣತೆ ನೀಡಿದ ಡಾ. ರಾಮ ಮೋಹನ್ ರೆಡ್ಡಿ ಜಿ, ಲೀಡ್ ಕನ್ಸಲ್ಟಂಟ್ - ನ್ಯೂಕ್ಲಿಯರ್ ಮೆಡಿಸಿನ್, "ಮುಂದುವರೆದ ಇಮೇಜಿಂಗ್ ಮತ್ತು ಮೊಲಿಕ್ಯುಲರ್ ಡಯಾಗೋಸ್ಟಿಕ್ಸ್ ತಂತ್ರಜ್ಞಾನಗಳು, ಸ್ಕ್ಯಾನ್ ಗಳಲ್ಲಿ ಕಾಣುವದರ ಮೀರಿದ ಮಾಹಿತಿಯನ್ನು ನೀಡುತ್ತವೆ. ಇದು ಗಡ್ಡೆಯ ಜೀವಶಾಸ್ತ್ರ ಮತ್ತು ವರ್ತನೆಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿ ಇನ್ನಷ್ಟು ನಿಖರ ಮತ್ತು ವೈಯಕ್ತಿಕ ಚಿಕಿತ್ಸೆ ನಿರ್ಧಾರಗಳಿಗೆ ದಾರಿಮಾಡಿಕೊಡುತ್ತದೆ" ಎಂದು ಹೇಳಿದರು.
ಒಟ್ಟಿನಲ್ಲಿ ಈ ಸಂವಾದಗಳು ಕ್ಯಾನ್ಸರ್ ಆರೈಕೆ ಹೇಗೆ ಪ್ರತಿಕ್ರಿಯಾತ್ಮಕದಿಂದ ಮುನ್ನೆಚ್ಚರಿಕೆಯತ್ತ ವಿಭಜಿತದಿಂದ ಒಗ್ಗಟ್ಟಿನತ್ತ ಮತ್ತು ಭಯ ಹುಟ್ಟಿಸುವ ಅನುಭವದಿಂದ ಮಾನವೀಯತೆಯತ್ತ ಸಾಗುತ್ತಿದೆ ಎಂಬ ಸ್ಪಷ್ಟ ಚಿತ್ರಣವನ್ನು ನೀಡಿದವು. ಜಾಗೃತಿ ಹೆಚ್ಚಾಗುತ್ತಿದ್ದಂತೆ ಮತ್ತು ಸಮಗ್ರ ಅರೈಕೆಗೆ ಪ್ರವೇಶ ಸುಲಭವಾಗುತ್ತಿದ್ದಂತೆ, ಸಂದೇಶ ಸ್ಪಷ್ಟವಾಗಿದೆ. ಕ್ಯಾನ್ಸರ್ ನ ಫಲಿತಾಂಶಗಳು ಬದಲಾಗುತ್ತಿವೆ, ಮತ್ತು ಸರಿಯಾದ ದೃಷ್ಟಿಕೋನದೊಂದಿಗೆ ಆರೈಕೆಯ ಅನುಭವವೂ ಬದಲಾಗುತ್ತಿದೆ.



Comments