Abu Dhabi Open Masters Games ನಲ್ಲಿ ಡಾ. ಮಲತೇಶ್ ಎಚ್ ಅವರಿಗೆ ಎರಡು ಚಿನ್ನ, ಒಂದು ಬೆಳ್ಳಿ...

Abu Dhabi Open Masters Games ನಲ್ಲಿ ಡಾ. ಮಲತೇಶ್ ಎಚ್ ಅವರಿಗೆ ಎರಡು ಚಿನ್ನ, ಒಂದು ಬೆಳ್ಳಿ...


ಯಲಹಂಕ: ಅಬುಧಾಬಿಯಲ್ಲಿ ನಡೆದ ಪ್ರತಿಷ್ಠಿತ Abu Dhabi Open Masters Games ಕ್ರೀಡಾಕೂಟದಲ್ಲಿ ಡಾ. ಮಲತೇಶ್ ಎಚ್ ಅವರು ಕರಾಟೆ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. ಫೆಬ್ರವರಿ 6ರಿಂದ 15ರವರೆಗೆ ನಡೆದ ಈ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.



ಕರಾಟೆ ವಿಭಾಗದ ವಿವಿಧ ಇವೆಂಟ್‌ಗಳಲ್ಲಿ ಸ್ಪರ್ಧಿಸಿದ ಅವರು ಕಠಿಣ ಪೈಪೋಟಿಯ ನಡುವೆ ಶ್ರೇಷ್ಠ ಕೌಶಲ್ಯ ಪ್ರದರ್ಶಿಸಿ ಎರಡು ಗೋಲ್ಡ್ ಮತ್ತು ಒಂದು ಸಿಲ್ವರ್ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಡಾ. ಮಲತೇಶ್ ಎಚ್ ಅವರು ಪ್ರಸ್ತುತ ಸಿಆರ್‌ಪಿಎಫ್ ಕರಾಟೆ ತಂಡದ ಮ್ಯಾನೇಜರ್ ಹಾಗೂ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕರ್ನಾಟಕ ಪೊಲೀಸ್ ಕರಾಟೆ ತಂಡದ ಕೋಚ್ ಹಾಗೂ ವರ್ಲ್ಡ್ ಪೊಲೀಸ್ ಕರಾಟೆ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2023ರ ಏಷಿಯನ್ ಗೇಮ್ಸ್ ಸಮಿತಿಯ ಸದಸ್ಯರಾಗಿಯೂ ಅವರು ತಮ್ಮ ಸೇವೆ ಸಲ್ಲಿಸಿದ್ದಾರೆ.


ಡಾ. ಮಲತೇಶ್ ಎಚ್ ಅವರ ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಮಹತ್ವದ ಪ್ರೇರಣೆಯಾಗಲಿದೆ. ಯಲಹಂಕ ಕ್ಷೇತ್ರದ ಜನಪ್ರಿಯ ನಾಯಕರಾದ ಶಾಸಕರು S. R. Vishwanath ಅವರು ನೀಡುತ್ತಿರುವ ನಿರಂತರ ಪ್ರೋತ್ಸಾಹಕ್ಕೂ, ಜಾನಕಿ ಅವರ ಹಾಗೆಯೇ MLA Martial Arts and Fitness Academy ವತಿಯಿಂದ ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದರು...



ಈ ಸಾಧನೆಗೆ ಬೆಂಬಲ ನೀಡಿದ ಕೋಚ್‌ಗಳು, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಅವರು ಹೃತ್ತೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.



ಅವರ ಧರ್ಮಪತ್ನಿ ಲಕ್ಷ್ಮೀ ಮಾತನಾಡಿ ಅವರು 2 ಚಿನ್ನ 1 ಬೆಳ್ಳಿ ಪದಕ ತಂದಿರುವುದು ಖುಷಿ ತಂದಿದ್ದಾರೆ ಇನ್ನೂ ಹೆಚ್ಚಿನ ಚಿನ್ನದ ಪದಕಗಳನ್ನು ಗೆಲಬೇಕು ಎಂದು ಆಶಿಸುತ್ತೇನೆ ಎಂದರು.




"ನನ್ನ ಮೇಲೆ ವಿಶ್ವಾಸ ಇಟ್ಟು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞನು,'' ಎಂದು ಅವರು ಹೇಳಿದ್ದರು.

Comments