ತಮಿಳುನಾಡಿನಲ್ಲಿ ಕನ್ನಡ ದ್ವಜ, ಚಾಲಕನ ಮೇಲೆ ನೆಡೆದ ಹಲ್ಲೆ, ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಸುವರ್ಣ ಜನಶಕ್ತಿ ವೇದಿಕೆ..

ತಮಿಳುನಾಡಿನಲ್ಲಿ ಕನ್ನಡ ದ್ವಜ, ಚಾಲಕನ ಮೇಲೆ ನೆಡೆದ ಹಲ್ಲೆ, ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ..



ಯಲಹಂಕ : ಕರ್ನಾಟಕ ತಮಿಳುನಾಡು ನಡುವೆ ಸಂಘರ್ಷಕ್ಕೆ ಕಾರಣವಾಗುವ ಸಾಮಾಜಿಕ ಜಾಲತಾಣ ಪೋಸ್ಟ್‌ ಗಳ ಕುರಿತು ಪತ್ರಿಕಾಗೋಷ್ಠಿ


ಕರ್ನಾಟಕ ಮತ್ತು ತಮಿಳುನಾಡು ನಡುವೆ ವೈಷಮ್ಯ ಹಾಗೂ ಸಂಘರ್ಷಕ್ಕೆ ಕಾರಣವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಮಾಡಿದವರನ್ನು ಬಂಧಿಸಿರುವ ತಮಿಳುನಾಡು ಪೊಲೀಸ್ ಇಲಾಖೆಯ ಕ್ರಮವನ್ನು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸ್ವಾಗತಿಸುತ್ತದೆ ಹಾಗೂ ಅಭಿನಂದಿಸುತ್ತದೆ.



ಅದೇ ಸಮಯದಲ್ಲಿ, ಮುಂದಿನ ದಿನಗಳಲ್ಲಿ ಕನ್ನಡಿಗರ ಮೇಲೆ ಕೈ ಮಾಡುವುದು, ಅವಮಾನಿಸುವುದು ಅಥವಾ ಸುಖಾಸುಮ್ಮನೇ ದೌರ್ಜನ್ಯ ನಡೆಸುವಂತಹ ಘಟನೆಗಳು ನಡೆದಲ್ಲಿ, ಅದರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂಬ ಸ್ಪಷ್ಟ ಸಂದೇಶವನ್ನು ಸಾರ್ವಜನಿಕವಾಗಿ ನೀಡುವ ಉದ್ದೇಶದಿಂದ ಪತ್ರಿಕಾಗೋಷ್ಠಿ ನೆಡೆಸಿ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಪರ ಸಂಘಟನೆ.


ಹಲ್ಲೆ ವಿಚಾರ ತಮಿಳು ನಾಡು ಪೊಲೀಸರು ಇಬ್ಬರನ್ನ  ಬಂಧಿಸಿದ್ದಾರೆ ಆದರೆ  ಬರೀ ಬಂದನ ಸಾಲದು ಕೋಮುಗಲಭೆ ವಿಚಾರವಾಗಿ ಕಠಿಣ ಶಿಕ್ಷೆ ಕೊಡಬೇಕು,ಇದೇ ಮುಂದುವರೆದರೆ ರಾಜ್ಯ ಗಡಿ ಭಾಗಗಳಲ್ಲಿ  ಉಗ್ರ ಹೋರಾಟ ಮಾಡ್ತೀವಿ..


ಪ್ರತಿವರ್ಷ ಕರ್ನಾಟಕದ ಮಾಲಾಧಾರಿಗಳ ಮೇಲೆ ಹಲ್ಲೆ ಮಾಡ್ತಿರೋ ವಿಚಾರ ಪರಸ್ಪರ ಸರ್ಕಾರಗಳು ಮಾತನಾಡಬೇಕು.


ಬೆಂಗಳೂರು ಉತ್ತರ ತಾಲೂಕು ಯಲಹಂಕದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಘಟನೆಗಳು.

Comments