ದಿತ್ವಾಹ್ ಸೈಕ್ಲೋನ್: ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ....
ಬೆಂಗಳೂರು : ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಗುರುವಾರ 'ದಿತ್ವಾಹ್' ಚಂಡಮಾರುತ ರೂಪುಗೊಂಡಿದ್ದು, ಇದರ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ನಾಲ್ಕು ದಿನ (ನ.30ರಿಂದ ಡಿ. 3) ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪುದುಚೆರಿಯಿಂದ 640 ಕಿಮೀ, ಚೆನ್ನೈನಿಂದ 730 ಕಿಮೀ ದೂರದಲ್ಲಿರುವ ಸೈಕ್ಲೋನ್, ಬಂಗಾಳಕೊಲ್ಲಿಯ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸಲಿದೆ. ಉತ್ತರ ತಮಿಳುನಾಡು, ಪುದುಚೆರಿ, ಕೇರಳ, ದಕ್ಷಿಣ ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಮುಂದಿನ ನಾಲೈದು ದಿನ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ, . ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಭಾರಿ ಮಳೆ ಚಾಮರಾಜನಗರದಲ್ಲಿ ನ.30ರಂದು ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ..

Comments