ರಾಜಾನುಕುಂಟೆ ಪೊಲೀಸರ ಭರ್ಜರಿ ಬೇಟೆ 4.5 ಕೋಟಿ ಮೌಲ್ಯದ ಗಾಂಜಾ ವಶಕ್ಕೆ; ಮೂವರು ವಿದೇಶಿಗರು ಅರೆಸ್ಟ್..!!
ಯಲಹಂಕ : ರಾಜಾನುಕುಂಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4.5 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ರಾಜಾನುಕುಂಟೆ ಠಾಣೆ ಪೊಲೀಸರು ಮೂವರು ವಿದೇಶಿಯರನ್ನು ಬಂಧಿಸಿದ್ದಾರೆ.
ಆರೋಪಿಗಳು ರೆಡಿಮೆಡ್ ಬಟ್ಟೆಗಳ ಪ್ಯಾಕ್‌ಗಳಲ್ಲಿ ತುಂಬಿ ಡ್ರಗ್ ಮಾರಾಟ ಮಾಡ್ತಿದ್ದರು. 2.8kg MDMA ಮಾತ್ರೆ, 2 ಲಕ್ಷ ಹಣ, 7 ಮೊಬೈಲ್‌ಗಳು, ವೇಯಿಂಗ್ ಮಷೀನ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಬೇರೆಯವರ ಹೆಸ್ರಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಮನೆ ಬಳಿ
ಏರ್ಪೋಟ್್ರ ಸೆಕ್ಯುರಿಟಿ ರೀತಿ ಭದ್ರತೆ ಮಾಡಿಕೊಂಡಿದ್ದರು.
ಆರೋಪಿಗಳು ನೈಜೀರಿಯಾ ದೇಶದ ವಾಸಿಗಳಾಗಿದ್ದು ಮಾದಕ ವಸ್ತುಗಳನ್ನು ಸಾರ್ವಜನಿಯಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಆರೋಪಿಗಳನ್ನು ಬಂದಿಸಿ ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ್ದ ಮೊಬೈಲ್ ಪೋನ್ ಗಳು ಮತ್ತು ಮಾದಕ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಆರೋಪಿಗಳನ್ನ ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ರಾಜಾನುಕುಂಟೆ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ...
Comments