ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ಶಿಪ್ 2025 ಪ್ರಶಸ್ತಿ ಮೂಡಿಗೇರಿಸಿಕೊಂಡ ಜಾಹ್ನವಿ ಎಂ ಆರ್;ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ....

 ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ಶಿಪ್ 2025 ಪ್ರಶಸ್ತಿ ಮೂಡಿಗೇರಿಸಿಕೊಂಡ ಜಾಹ್ನವಿ ಎಂ ಆರ್;ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ....



ದೊಡ್ಡಬಳ್ಳಾಪುರ: ಕರ್ನಾಟಕ ಸ್ಟೇಟ್ ಅಮೆಚೂರ್ ಯೋಗ  ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜನೆ ಮಾಡಿದ ಕರ್ನಾಟಕ ರಾಜ್ಯ ಯೋಗಾಸನ ಚಾಂಪಿಯನ್ಶಿಪ್ 2025



ಶಿವಮೊಗ್ಗ ಜಿಲ್ಲೆ ಈಡಿಗರ ಸಮುದಾಯ ಭವನ ಸಾಗರದಲ್ಲಿ ದಿನಾಂಕ 7 ಮತ್ತು 8ನೇ ತಾ. ಆಯೋಜನೆ ಮಾಡಲಾಗಿತ್ತು, ಈ ಪಂದ್ಯಾವಳಿಯಲ್ಲಿ ನಿಸರ್ಗ ಯೋಗ ಕೇಂದ್ರ ಹಾಗೂ ಯಲಹಂಕದ ನಾಗಾರ್ಜುನ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕುಮಾರಿ ಜಾಹ್ನವಿ ಎಂ ಆರ್  16 ರಿಂದ 18 ವರ್ಷದ ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.


ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ  ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊಫೆಸರ್ ಎಂಜಿ ಅಮರ್ನಾಥ್ ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿಯಾದ ಎ  ನಟರಾಜ್ ಖಜಾಂಚಿಯಾದ ಶಾಮ್ ಸುಂದರ್ ಹಾಗೂ ಯೋಗ ಶಿಕ್ಷಕರು ಯೋಗ ಕೇಂದ್ರದ ವಿದ್ಯಾರ್ಥಿಗಳು ಪೋಷಕರು ಅಭಿನಂದನೆ ಸಲ್ಲಿಸಿದರು...

Comments