ರಸ್ತೆಪಕ್ಕದಲ್ಲಿ ಪ್ರಜ್ಞಾ ಹೀನಸ್ಥಿತಿಯಲ್ಲಿದ ಕಾರಿನ ಚಾಲಕ; ಪೊಲೀಸ್ ಅಧಿಕಾರಿಗಳು ಏನು ಮಾಡಿದ್ದರೆ ನೋಡಿ........!!

ರಸ್ತೆಪಕ್ಕದಲ್ಲಿ ಪ್ರಜ್ಞಾ ಹೀನಸ್ಥಿತಿಯಲ್ಲಿದ ಕಾರಿನ ಚಾಲಕ; ಪೊಲೀಸ್ ಅಧಿಕಾರಿಗಳು ಏನು ಮಾಡಿದ್ದರೆ ನೋಡಿ........!!




ದಿನಾಂಕ 25.05.25 ರಂದು ಸಿದ್ದಲಿಂಗಪುರ ಬಳಿ ಸುಮಾರು 45 ವರ್ಷದ ಕಾರಿನ ಚಾಲಕ ಪ್ರಜ್ಞಾ ಹೀನರಾಗಿರುತ್ತಾರೆ. 



 ಆ ಸಮಯದಲ್ಲಿ ಸಾರ್ವಜನಿಕರು ಪೊಲೀಸ್ ಜೀಪು ಗಮನಿಸಿ ಸಹಾಯ ಕೋರಿರುತ್ತಾರೆ. ತಕ್ಷಣವೇ ASI ಶ್ರೀ ಶಿವಮೂರ್ತಿರವರು & ಚಾಲಕ ಶ್ರೀ ಮೈಬುಸಾಬ ಹುದ್ದಾರ ರವರು  "CPR "ಚಿಕಿತ್ಸೆ ನೀಡಿ, ಪೊಲೀಸ್ ಕಂಟ್ರೋಲ್ ರೂಂ ಗೆ ತಿಳಿಸಿ ಸಿಗ್ನಲ್ ಫ್ರೀ ಮಾಡಿಸಿಕೊಂಡು ಪೊಲೀಸ್ ಇಲಾಖಾ ವಾಹನದಲ್ಲಿಯೇ ಆ ವ್ಯಕ್ತಿಯನ್ನು ತುರ್ತಾಗಿ ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಸಕಾಲದಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಿ ಸಮಯ ಪ್ರಜ್ಞೆ ಮೆರೆದು ಅವರ ಜೀವ ಉಳಿಸಿರುತ್ತಾರೆ.




ಸರ್ಕಾರಿ ವಾಹನ ಸ್ವಂತ ಬಳಕೆಗೆಂದು ದುರ್ಬಳಕ್ಕೆ ಮಾಡುವವರ ನಡುವೆ  ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದಗಳು...

Comments