ಬೆಂಗಳೂರು ಡೈರಿ ನೂತನ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ರೈತ ಸಂಘದಿಂದ ಸನ್ಮಾನ...!!

ಬೆಂಗಳೂರು ಡೈರಿ ನೂತನ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ರೈತ ಸಂಘದಿಂದ ಸನ್ಮಾನ...!!


ಯಲಹಂಕ : ಬೆಂಗಳೂರು ಡೈರಿ ನೂತನ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆಟ್ಟ ಹಲಸೂರು ನಂಜುಂಡಪ್ಪ ನೇತೃತ್ವದಲ್ಲಿ ರೈತ ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.




ಇದೇ ವೇಳೆ ಬೆಟ್ಟಹಲಸೂರು ನಂಜುಂಡಪ್ಪ ಮಾತನಾಡಿ ಸತೀಶ್ ಕಡತನಮಲೆ ಅವರು ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಯಲಹಂಕ ಮತ್ತು ಸುತ್ತ ಮುತ್ತಲಿನ ರೈತರಿಗೆ ಸಂತೋಷವಾಗಿದ್ದು, ಮೂಲತಃ ರೈತ ಕುಟುಂಬದ ಹಿನ್ನಲೆಯಿಂದ ಬಂದಿರುವ ಸತೀಶ್ ಹಲವಾರು ರೈತಪರ ಹೋರಾಟಗಳಲ್ಲಿ ಭಾಗಿಯಾಗಿ, ಅನೇಕ ರೈತರಿಗೆ ಸರ್ಕಾರಿ ಕಚೇರಿಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಸೂಕ್ತ ನ್ಯಾಯ ದೊರಕಿಸಿಕೊಡುವ ಮೂಲಕ ನೆರವಾಗಿದ್ದಾರೆ, ಇದೀಗ ಬೆಂಗಳೂರು ಡೈರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಸತೀಶ್ ಅವರು ಹಾಲು ಉತ್ಪಾದಕರ ಸಹಕಾರ ಸಂಘಗಳ ಏಳಿಗೆಗೆ ಶ್ರಮಿಸುವಂತಾಗಲಿ ಎಂದು ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ರೈತ ಸಂಘದ ಜಾಲ ಹೋಬಳಿ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಬೆಂಗಳೂರು ಗ್ರಾಮಾಂತರ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸಾಹುಕಾರ್, ಮಹಿಳಾ ಅಧ್ಯಕ್ಷೆ ಸೌಭಾಗ್ಯಮ್ಮ, ಶ್ರೀದೇವಿ, ರತ್ನಮ್ಮ ಅಲುಮೇಲಮ್ಮ ಸೇರಿದಂತೆ ರೈತ ಮುಖಂಡರಿದ್ದರು.

Comments