ಹಕ್ಕಿ ಜ್ವರದ ಶಂಕೆ ; ಚಿಕನ್ (Chicken) ತಿನ್ನುವುದು ಸುರಕ್ಷಿತವೇ ? ತಜ್ಞರ ಮಾರ್ಗಸೂಚಿ ತಿಳಿದುಕೊಳ್ಳಿ......

ಹಕ್ಕಿ ಜ್ವರದ ಶಂಕೆ ; ಚಿಕನ್ (Chicken) ತಿನ್ನುವುದು ಸುರಕ್ಷಿತವೇ ? ತಜ್ಞರ ಮಾರ್ಗಸೂಚಿ ತಿಳಿದುಕೊಳ್ಳಿ......



ಚಿಕನ್ (Chicken) ತಿನ್ನಲು ಸುರಕ್ಷಿತವೇ? : 

ಹಕ್ಕಿ ಜ್ವರದ ಶಂಕೆ ಇರುವ ಸಂದರ್ಭಗಳಲ್ಲಿ ತಜ್ಞರು ಕೊಟ್ಟಿರುವ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವುದು ಉತ್ತಮ: 

ಕೋಳಿ ಮಾಂಸವನ್ನು 75°C (167°F) ಅಥವಾ ಅದಕ್ಕಿಂತ ಹೆಚ್ಚು ತಾಪಮಾನದಲ್ಲಿ ಚೆನ್ನಾಗಿ ಬೇಯಿಸಿ ತಿನ್ನುವುದು. 

ಹಸಿ ಕೋಳಿ ಮಾಂಸದೊಂದಿಗೆ (Raw Chicken) ನೇರ ಸಂಪರ್ಕ ತಪ್ಪಿಸುವುದು. 

ಹಕ್ಕಿ ಉತ್ಪನ್ನಗಳನ್ನು ಬಳಸಿದ ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು.        



ಅಧಿಕ ಜ್ವರದ ಲಕ್ಷಣಗಳು:

ತುಂಬಾ ಜ್ವರ ಸಾಮಾನ್ಯವಾಗಿ ಇತರ ರೋಗಲಕ್ಷಣಗಳ ಸಮೂಹದೊಂದಿಗೆ ಪ್ರಕಟವಾಗುತ್ತದೆ. ಇವುಗಳನ್ನು ಗುರುತಿಸುವುದು ಮೂಲ ಕಾರಣದ ಒಳನೋಟಗಳನ್ನು ಒದಗಿಸುತ್ತದೆ ಮತ್ತು ಸಮಯೋಚಿತ ಕ್ರಮವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.   ಸ್ಟ್ರೀಟ್ ಫುಡ್ ಅಥವಾ ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ಮಾಂಸಾಹಾರ ಸೇವನೆಯನ್ನು ಮಾಡಬಾರದು. 



ಚಳಿ ಮತ್ತು ನಡುಕ :

ಹೆಚ್ಚಿನ ಜ್ವರದೊಂದಿಗೆ ಸಾಮಾನ್ಯವಾಗಿ ಕಂಡುಬರುವ ಮೊದಲ ರೋಗಲಕ್ಷಣಗಳಲ್ಲಿ ಒಂದಾಗಿದೆ ಶೀತ ಮತ್ತು ನಡುಗುವುದು. ಸೋಂಕನ್ನು ಎದುರಿಸಲು ನಿಮ್ಮ ದೇಹವು ತನ್ನ ತಾಪಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವಾಗ ಇದು ಸಂಭವಿಸುತ್ತದೆ. ಸ್ನಾಯುಗಳು ವೇಗವಾಗಿ ಸಂಕುಚಿತಗೊಳ್ಳುತ್ತವೆ ಮತ್ತು ವಿಶ್ರಾಂತಿ ಪಡೆಯುತ್ತವೆ, ಶಾಖವನ್ನು ಉತ್ಪತ್ತಿ ಮಾಡುತ್ತವೆ, ಇದು ನಡುಗುವಿಕೆಯಿಂದ ವ್ಯಕ್ತವಾಗುತ್ತದೆ.


ಇತ್ತೀಚೆಗೆ ಹಕ್ಕಿಜ್ವರ (Bird Flu) ಮತ್ತೆ ಕಾಣಿಸಿಕೊಂಡಿದ್ದು ಕರ್ನಾಟಕ ಸೇರಿದಂತೆ ಹಲವೆಡೆ ಜನರಲ್ಲಿ ಆತಂಕ ಮೂಡಿಸಿದೆ. ಹಕ್ಕಿ ಜ್ವರವು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ (Andrapradesh and Thelangana) ಈಗಾಗಲೇ ಪತ್ತೆಯಾಗಿದ್ದು, ಅದರ ಪ್ರಭಾವ ಕರ್ನಾಟಕದ ಗಡಿಭಾಗಕ್ಕೂ ತಲುಪಿದೆ. ಈ ಹಿನ್ನೆಲೆಯಲ್ಲಿ ಕೋಳಿ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳಾಗಿದ್ದು, ಜನರು ಚಿಕನ್ ಹಾಗೂ ಮೊಟ್ಟೆ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ. 



ಮೇಲ್ನೋಟಕ್ಕೆ ಸಾಮಾನ್ಯ ವೈರಲ್ ಇನ್ಸೆಕ್ಷನ್ (Normal Virul Infection) ಆಗಿರಬಹುದು ಎನಿಸುವ ಹಕ್ಕಿ ಜ್ವರ, ಇದುವರೆಗೆ ಹಲವು ಬಾರಿ ಪ್ರಾಣಿಗಳಿಗೂ, ಕೆಲವೊಮ್ಮೆ ಮನುಷ್ಯರಿಗೂ ತೊಂದರೆ ತಂದಿದೆ. ಹಕ್ಕಿಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಭಯ ಹೆಚ್ಚುತ್ತಿರುವಾಗ, ಅದರ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ವಿಶೇಷವಾಗಿ, ಇಂತಹ ಸಂದರ್ಭಗಳಲ್ಲಿ ಮೊಟ್ಟೆ ಸೇವನೆ ಸುರಕ್ಷಿತವೇ? ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ಹಾಗಿದ್ದರೆ ಮೊಟ್ಟೆ ಸೇವನೆ ಸುರಕ್ಷಿತವೇ ಅಲ್ಲವೇ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.



ಹಕ್ಕಿ ಜ್ವರ ಎಂದರೇನು? : 

ಹಕ್ಕಿ ಜ್ವರ ಅಥವಾ ಏವಿಯನ್ ಇನ್ನುಯೆನ್ಸಾ (Avian Influenza) ಒಂದು ವೈರಲ್ ಸೋಂಕಾಗಿದೆ, ಇದು ಮುಖ್ಯವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ವಿವಿಧ ತಳಿಗಳಿವೆ, ಆದರೆ H5N1 ತಳಿ ಅತ್ಯಂತ ಪ್ರಭಾವಿ ಹಾಗೂ ಕೆಲವೊಮ್ಮೆ ಮನುಷ್ಯರಿಗೂ ಹರಡುವ ಸಾಧ್ಯತೆ ಹೊಂದಿದೆ. ಸಾಮಾನ್ಯವಾಗಿ, ಹಕ್ಕಿ ಜ್ವರವಿರುವ ಕೋಳಿಗಳು (Chickens) ಅಥವಾ ಇತರ ಪಕ್ಷಿಗಳಿಂದಲೇ ಈ ಸೋಂಕು ಹರಡುತ್ತದೆ. ಕೋಳಿಗಳೊಂದಿಗೆ ನೇರ ಸಂಪರ್ಕವಿರುವವರು ಹೆಚ್ಚು ಅಪಾಯದಲ್ಲಿರುತ್ತಾರೆ. 


ಮನುಷ್ಯರಿಗೆ ಹಕ್ಕಿ ಜ್ವರ ಸಾಂಕ್ರಾಮಿಕವಾಗಿ ಹರಡುವಿಕೆ ಅಪರೂಪ, ಆದರೆ ಸೋಂಕಿತ ಪಕ್ಷಿಗಳೊಂದಿಗೆ ನೇರ ಸಂಪರ್ಕವಿದ್ದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿ, ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ. 



ಹಾಗಿದ್ದರೆ ಮೊಟ್ಟೆ ಸೇವನೆ (Egg Consumption) ಸುರಕ್ಷಿತವೇ? 

ತಜ್ಞರ ಪ್ರಕಾರ, ಹಕ್ಕಿ ಜ್ವರ ಹರಡುವ ಸಮಯದಲ್ಲೂ ಸರಿಯಾಗಿ ಬೇಯಿಸಿದ ಮೊಟ್ಟೆಗಳನ್ನು (Boiled eggs) ಸೇವಿಸುವುದು ಸುರಕ್ಷಿತ. ಮೊಟ್ಟೆಯಲ್ಲಿ ಹಕ್ಕಿ ಜ್ವರದ ವೈರಸ್ ಇರಬಹುದು ಎಂಬ ಸಾಧ್ಯತೆ ಇದೆ, ಆದರೆ ಸರಿಯಾದ ಶಾಖದಲ್ಲಿ ಬೇಯಿಸಿದರೆ ಈ ವೈರಸ್ ನಾಶವಾಗುತ್ತದೆ. 



ಮೊಟ್ಟೆಗಳನ್ನು ಸೇವಿಸುವ ಮುನ್ನ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು ಹೀಗಿವೆ: 


ಮೊಟ್ಟೆಗಳನ್ನು ಕನಿಷ್ಠ 70°C (158°F) ತಾಪಮಾನದಲ್ಲಿ ಚೆನ್ನಾಗಿ ಬೇಯಿಸಬೇಕು. 


ಮೊಟ್ಟೆಯ ಬಿಳಿ ಮತ್ತು ಹಳದಿ ಭಾಗ ಎರಡೂ ಸಂಪೂರ್ಣವಾಗಿ ಬೇಯಿಸಬೇಕು. ಅರ್ಧಬೇಯಿಸಿದ ಅಥವಾ ಹಸಿ ಮೊಟ್ಟೆ ಸೇವಿಸಬೇಡಿ. 

ಹಚ್ಚ ಹಸುರಾದ ಹಣ್ಣನ್ನು, ತರಕಾರಿಗಳನ್ನು ಮೊಟ್ಟೆಯ ಸಂಪರ್ಕಕ್ಕೆ ತರುವುದನ್ನು

 ತಪ್ಪಿಸಬೇಕು.



 ಜಾಗತಿಕ ಆರೋಗ್ಯ ಸಂಸ್ಥೆ (WHO) ಮತ್ತು ಭಾರತೀಯ ಆರೋಗ್ಯ ಸಚಿವಾಲಯದ ಪ್ರಕಾರ, ಸರಿಯಾಗಿ ಬೇಯಿಸಿದ ಮೊಟ್ಟೆ ಮತ್ತು ಕೋಳಿ ಮಾಂಸದ ಮೂಲಕ ಹಕ್ಕಿ ಜ್ವರ ಹರಡುವ ಸಂಭವ ಇಲ್ಲ. ಆದ್ದರಿಂದ, ಚಿಂತೆ ಮಾಡುವ ಅವಶ್ಯಕತೆಯಿಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯಕ ಎಂದು ತಿಳಿಸಿದ್ದಾರೆ. 



ಹಕ್ಕಿ ಜ್ವರದ ಭೀತಿ ಸಾಮಾನ್ಯವಾಗಿದ್ದರೂ, ವೈಜ್ಞಾನಿಕ ದೃಷ್ಟಿಕೋನದಿಂದ (scientific point of view)ಸಮರ್ಥಿಸಲ್ಪಟ್ಟ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಾವೇನನ್ನು ಸೇವಿಸುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆಯಿರಬೇಕು. ಮೊಟ್ಟೆ ಅಥವಾ ಕೋಳಿ ಮಾಂಸವನ್ನು ಸೇವಿಸುವ ಮುನ್ನ ಅದನ್ನು ಸರಿಯಾಗಿ ಬೇಯಿಸಿರುವುದನ್ನು ಖಚಿತಪಡಿಸಿಕೊಳ್ಳಿ ಸರ್ಕಾರ ಮತ್ತು ಆರೋಗ್ಯ ಇಲಾಖೆ (Government and Health Department) ನೀಡುವ ಮಾರ್ಗಸೂಚಿಗಳನ್ನು ಪಾಲಿಸಿ, ಆಧಾರರಹಿತ ಭಯಗಳಿಗೆ ಒಳಗಾಗದೆ, ಆರೋಗ್ಯಕರ ಆಹಾರ ಸೇವನೆಗೆ ಆದ್ಯತೆ ನೀಡಿ.


Comments