ಯಲಹಂಕ ತಾಲ್ಲೂಕಿನ ಚಲ್ಲಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ಶಿಲಾವಿಗ್ರಹ ಪ್ರತಿಷ್ಠಾಪನೆ ; ದೇವರ ಕೃಪೆಗೆ ಪಾತ್ರರಾದ ಗ್ರಾಮಸ್ಥರು...

ಯಲಹಂಕ ತಾಲ್ಲೂಕಿನ ಚಲ್ಲಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ಶಿಲಾವಿಗ್ರಹ ಪ್ರತಿಷ್ಠಾಪನೆ ; ದೇವರ ಕೃಪೆಗೆ ಪಾತ್ರರಾದ ಗ್ರಾಮಸ್ಥರು...


ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವಷರ್ಂಗಳು 1946ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರದ ಉತ್ತರಾಯಣಿ ಶಿಶಿರ ಋತು ಫಾಲ್ಗುಣ ಮಾಸ ಶುಕ್ಲಪಕ್ಷ ದಿನಾಂಕ 06-03-2025ನೇ ಗುರುವಾರ ಮತ್ತು 07-03-2025ನೇ ಶುಕ್ರವಾರ ಎರಡು ದಿನಗಳ ಕಾಲ ಶಿಲಾ ವಿಗ್ರಹ ಪ್ರತಿಷ್ಠಾಪನೆಯನ್ನು ಏರ್ಪಡಿಸಲಾಗಿತ್ತು. ಭಕ್ತಾದಿಗಳು ಆಗಮಿಸಿ ತಮ್ಮ ತನು ಮನ ಧನ ಧಾನ್ಯದಿಗಳನ್ನು ಅರ್ಪಿಸಿ ಶ್ರೀ ಅಭಯ ಆಂಜನೇಯಸ್ವಾಮಿ ಕೃಪೆಗೆ ಪಾತ್ರರಾಗಿ ಪ್ರಾರ್ಥನೆ ಮಾಡಿದರು.





ದಿನಾಂಕ 05-03-2025ನೇ ಬುಧವಾರ ಬೆಳಗ್ಗೆ 11:30ಕ್ಕೆ ಧ್ವಜಾರೋಹಣ ಮಾಡುವುದರ ಮೂಲಕ ಪ್ರಾರಂಭವಾಗಿ ಗುರುವಾರ ಸಂಜೆ 6 ಗಂಟೆಗೆ ಶ್ರೀ ವಿಕ್ಯಾಸೇನಾ ಆರಾಧನೆ, ಗಂಗೆಪೂಜೆ, ಸ್ವಸ್ತಿ ಪುಣ್ಯಾಹ ವಾಚನೆ, ಪಂಚಗವ್ಯ ಆರಾಧನೆ, ಋತ್ವಿಕ ವರ್ಣ ನವಗ್ರಹ ಆರಾಧನೆ, ಕಳಸಾರಧನೆ, ಶ್ರೀ ಅಭಯ ಆಂಜನೇಯಸ್ವಾಮಿಯ ಆರಾಧನೆ, ಅಗ್ನಿ ಪ್ರತಿಷ್ಠೆ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಾಸ್ತು ಹೋಮ, ರಾಕ್ಷೆಘ್ನ ಹೋಮ, ಕ್ಷೀರಾಧಿವಾಸ, ಪುಷ್ಟಿದಿವಾಸ, ರತ್ನನಾಧಿವಾಸ, ಶ್ಯಾಯಾಧಿವಾಸ ಮತ್ತು ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಗಿದೆ.



ಮತ್ತು ಇಂದು ಬೆಳಗಿನ ಜಾವ 4:30ಕ್ಕೆ ಅಷ್ಟಬಂಧನ, ಪೂರ್ವಾಕ ಶ್ರೀ ಅಭಯ ಆಂಜನೇಯಸ್ವಾಮಿ ಶಿಲಾ ವಿಗ್ರಹ ಪ್ರತಿಷ್ಠಾಪನೆ, ಕಳಾಹೋಮ, ಶ್ರೀ ಅಭಯ ಆಂಜನೇಯಸ್ವಾಮಿ ಹೋಮ, ಶ್ರೀರಾಮತಾರಕ ಹೋಮ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ನೇತ್ರೋಮಿಲನ ಅಲಂಕಾರ, ಅನ್ನಬಲಿ,ಕೂಷಾಂಡ ವಿದ್ರಿ, ನಿಂಬುಬಲಿ ಕದಳಿ, ವೃಷ ಛೇದನ, ಮಹಾಪೂರ್ಣಾಹುತಿ, ರಾಷ್ಟ್ರಾಶೀರ್ವಾದ, ಪ್ರಜಾಆಶೀರ್ವಾಚನ, ಮತ್ತು ಮಹಾಮಂಗಳಾರತಿ ಹಾಗೂ ಪ್ರಸಾಹ ವಿನಿಯೋಗ ಹಾಗೂ ಮಧ್ಯಾಹ್ನದ ನಂತರ  ಅನ್ನಸಂತರ್ಪಣೆ ನಡೆಯಿತು.


ಇನ್ನು ದೇವರ ಕೃಪೆಗೆ ಚಲಹಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾತ್ರರಾದರು.

Comments