ಕೆಲತಿಂಗಳ ಹಿಂದೆ ಮೃತನ ತಾಯಿ‌ ನೇಣಿಗೆ ಶರಣು; ಇಂದು ಬೆಳ್ಳಂಬೆಳಗ್ಗೆ ಯುವಕನೋರ್ವ ನೇಣಿಗೆ ಶರಣು...!!

ಕೆಲತಿಂಗಳ ಹಿಂದೆ ಮೃತನ ತಾಯಿ‌ ನೇಣಿಗೆ ಶರಣು; ಇಂದು ಬೆಳ್ಳಂಬೆಳಗ್ಗೆ ಯುವಕನೋರ್ವ ನೇಣಿಗೆ ಶರಣು...!!



ದೊಡ್ಡಬಳ್ಳಾಪುರ : ಇಂದು ಬೆಳ್ಳಂಬೆಳಗ್ಗೆ ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ನಂದಿ ಮೋರಿ ಸಮೀಪದಲ್ಲಿ ನಡೆದಿದೆ.


ಮೃತ ದುರ್ದೈವಿಯನ್ನು ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು(26) ಎಂದು ಗುರುತಿಸಲಾಗಿದೆ.


ದೊಡ್ಡಬಳ್ಳಾಪುರ‌ ಹೊರವಲಯದ ಮಾರಸಂದ್ರದ ಬಳಿ ಇರುವ ಫೈವ್ ಸ್ಟಾರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮೂರು ತಿಂಗಳಿಂದಷ್ಟೇ ಮೃತನ ತಾಯಿ‌ ಕೂಡ ನೇಣಿಗೆ ಶರಣಾಗಿದ್ದರು. ಇದೀಗ ಮಗ ಕೂಡ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾನೆ.


ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ...



ಸುದ್ದಿ ಮತ್ತು ಜಾಹೀರಾತು ಮಾಹಿತಿಗೆ ಸಂಪರ್ಕಿಸಿ 9620268771

Comments