ಎರಡು ದ್ವಿಚಕ್ರ ವಾಹನಗಳ‌ ನಡುವೆ ಮುಖಾಮುಖಿ ಡಿಕ್ಕಿ;ಡಿಕ್ಕಿಯ ರಭಸಕ್ಕೆ ಮೂವರಿಗೆ ಗಂಭೀರ ಗಾಯ,ಓರ್ವ ಯುವಕನ ಕಾಲು ಮುರಿತ ಆಸ್ಪತ್ರೆಗೆ ದಾಖಲು..

 ಎರಡು ದ್ವಿಚಕ್ರ ವಾಹನಗಳ‌ ನಡುವೆ ಮುಖಾಮುಖಿ ಡಿಕ್ಕಿ;ಡಿಕ್ಕಿಯ ರಭಸಕ್ಕೆ ಮೂವರಿಗೆ ಗಂಭೀರ ಗಾಯ,ಓರ್ವ ಯುವಕನ ಕಾಲು ಮುರಿತ ಆಸ್ಪತ್ರೆಗೆ ದಾಖಲು..

ದೊಡ್ಡಬಳ್ಳಾಪುರ:ಕುರುಬರಹಳ್ಳಿ ಬಳಿ ಎರಡು ಬೈಕ್ ಗಳ ನಡುವೆ ಅಪಘಾತವಾಗಿದ್ದು ಮೂರು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಡಿಕ್ಕಿಯ ರಭಸಕ್ಕೆ ಓರ್ವ ಯುವಕನ ಕಾಲು ಮುರಿತವಾಗಿದೆ. ಮತ್ತೊಬ್ಬ ಯುವಕ ಸ್ಥಿತಿ ಗಂಭೀರವಾಗಿದೆ.

ದೊಡ್ಡಬಳ್ಳಾಪುರ ಮತ್ತು ದಾಬಸ್ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕುರುಬರಹಳ್ಳಿ ಬಳಿ‌ ಇಂದು ಸಂಜೆ ನಡೆದಿದೆ.

ಅಪಘಾತ ಹಿನ್ನಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸದ್ಯ ಗಾಯಾಳುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ದೊಡ್ಡಬಳ್ಳಾಪುರ ‌ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments