ಬೈಕ್ ವ್ಹೀಲಿಂಗ್ ಪುಂಡರ ವಿರುದ್ಧ ಕೇಸ್ - ಎರಡು ಸ್ಕೂಟರ್ ಜಪ್ತಿ- ನಾಲ್ವರ ವಿರುದ್ಧ ಪ್ರಕರಣ..!!

 ಬೈಕ್ ವ್ಹೀಲಿಂಗ್ ಪುಂಡರ ವಿರುದ್ಧ ಕೇಸ್ -  ಎರಡು ಸ್ಕೂಟರ್ ಜಪ್ತಿ- ನಾಲ್ವರ ವಿರುದ್ಧ ಪ್ರಕರಣ..!!



ರಾಜಾನುಕುಂಟೆ
 : ಕಾಕೋಳು ರಸ್ತೆಯಲ್ಲಿ ಅಪಾಯಕಾರಿಯಾಗಿ ಬೈಕ್ ವಿಲೀಂಗ್ ಮಾಡಿದ ಯುವಕರ ವಿರುದ್ಧ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಸ್ಕೂಟರ್ ಗಳನ್ನ ಜಪ್ತಿ ಮಾಡಲಾಗಿದೆ.





ಯಲಹಂಕ ತಾಲೂಕು ರಾಜಾನುಕುಂಟೆಯ ಮಾದಪ್ಪನಹಳ್ಳಿಯಲ್ಲಿ ಫೆಬ್ರವರಿ 28ರ ಸಂಜೆ ಪೊಲೀಸರು ಗಸ್ತು ಮಾಡುವ ವೇಳೆ, ಮಾದಪ್ಪನಹಳ್ಳಿಯಿಂದ ದಿಬ್ಬೂರು ಕಡೆಗೆ ಡಿಯೋ ಬೈಕ್ ಚಾಲಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಬೈಕ್ ವಿಲೀಂಗ್ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ, ಡಿಯೋ ದ್ವಿಚಕ್ರ ವಾಹನದ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯ ವಾಹನ ಚಾಲನೆ ಹಿನ್ನಲೆ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.



ಬೈಕ್ ವಿಲೀಂಗ್ ಯುವಕರು ಬೆಂಗಳೂರಿನ ಗಂಗಮ್ಮ ಸರ್ಕಲ್ ನ ರಾಮಚಂದ್ರಪುರದ ನಿವಾಸಿಗಳಾಗಿದ್ದು, ರಸ್ತೆಯಲ್ಲಿ ಬೈಕ್ ವಿಲೀಂಗ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎರಡು ಸ್ಕೂಟರ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

Comments