ಬಾಮೈದನಿಂದಲ್ಲೇ ಬಾವನ ಕೊಲೆ...
ಚಿಕ್ಕಬಳ್ಳಾಪುರ: ಸಹೋದರಿಗೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಬಾಮೈದನೋರ್ವ ಬಾವನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿರುವ ಘಟನೆ ತಾಲೂಕಿನ ಮೊಟ್ಟೂರು ಕ್ರಾಸ್ ಬಳಿ ನಡೆದಿದೆ.
ಗೌಚೇನಹಳ್ಳಿ ಗ್ರಾಮದ ನಿವಾಸಿ ಸುಭಾಷ್ (35 ವರ್ಷ) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅನೈತಿಕ ಸಂಬಂಧ ಇಟ್ಟುಕೊಂಡು ಪತ್ನಿಗೆ ಕಿರುಕುಳ ಹಿನ್ನೆಲೆಯಲ್ಲಿ ಕೆರಳಿದ ಆಕೆಯ ಸಹೋದರ, 5 ಜನ ಸ್ನೇಹಿತರ ಜೊತೆಗೂಡಿ ಬಾವ ಸುಭಾಷ್‌ನನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಮಚ್ಚು ಹಾಗೂ ಚಾಕುವಿನಿಂದ ತಿವಿದು ಭಾವನನ್ನು ಕೊಲೆ ಮಾಡಲಾಗಿದೆ ಏನಲಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಷೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
Comments