ಸಾಲದ ಬಾಧೆ ಶಂಕೆ ; ಮಹಿಳೆ ಆತ್ಮಹತ್ಯೆ...!!

ಸಾಲದ ಬಾಧೆ ಶಂಕೆ ; ಮಹಿಳೆ ಆತ್ಮಹತ್ಯೆ...!!


ಮಡಿಕೇರಿ: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರಸಂತೆಯಲ್ಲಿ ಸಂಭವಿಸಿದೆ.


ಶನಿವಾರ ಸಂತೆಯ ಗುಂಡೂರಾವ್‌ ಬಡಾವಣೆಯ ನಿವಾಸಿಯಾಗಿದ್ದ ಹಸೀನಾ (50) ಮೃತಪಟ್ಟ ಮಹಿಳೆಯಾಗಿದ್ದಾರೆ. ಸಾಲದ ಬಾಧೆ ತಾಳಲಾರದೆ ಸಾವಿಗೆ ಶರಣಾಗಿರುವುದಾಗಿ ಆರೋಪಿಸಲಾಗಿದೆ.


ಕೂಲಿ ಕೆಲಸ ಮಾಡುತ್ತಿದ್ದ ಹಸೀನಾ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಬುಧವಾರ ಪತಿ ಗಾರೆ ಕೆಲಸಕ್ಕೆ ತೆರಳಿದ ಬಳಿಕ ಮನೆಯ ಬಾತ್‌ ರೂಮ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments