ಬೈಕ್ ಮೇಲೆ 1.61 ಲಕ್ಷ ರೂ ಟ್ರಾಫಿಕ್ ದಂಡವಿದ್ದರೂ ಬೆಂಗಳೂರು ರಸ್ತೆಗಳಲ್ಲಿ ಬಿಂದಾಸ್ ಸುತ್ತಾಟ; ಬೆನ್ನು ಬಿದ್ದ ಪೊಲೀಸರಿಗೆ ತಗ್ಲಾಕೊಂಡ ಭೂಪ!
ಬೈಕ್ ಮೇಲೆ 1.61 ಲಕ್ಷ ರೂ ಟ್ರಾಫಿಕ್ ದಂಡವಿದ್ದರೂ ಬೆಂಗಳೂರು ರಸ್ತೆಗಳಲ್ಲಿ ಬಿಂದಾಸ್ ಸುತ್ತಾಟ; ಬೆನ್ನು ಬಿದ್ದ ಪೊಲೀಸರಿಗೆ ತಗ್ಲಾಕೊಂಡ ಭೂಪ!
ಬೆಂಗಳೂರಿನ ದ್ವಿಚಕ್ರ ವಾಹನ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ ಬಿಂದಾಸ್ ಆಗಿ ಬೈಕ್ ಚಲಾಯಿಸುತ್ತಿದ್ದು ಬರೋಬ್ಬರಿ 1.61 ಲಕ್ಷ ರೂಪಾಯಿ ಸಂಚಾರಿ ದಂಡ ಬಿದ್ದಿದೆ. ಹೀಗಿದ್ದರೂ ಬೀದಿಗಳಲ್ಲಿ ರಾಜಾರೋಷವಾಗಿ ಓಡಾಡುತ್ತಲೇ ಇದ್ದ.
ಬೆಂಗಳೂರು: ಬೆಂಗಳೂರಿನ ದ್ವಿಚಕ್ರ ವಾಹನ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ ಬಿಂದಾಸ್ ಆಗಿ ಬೈಕ್ ಚಲಾಯಿಸುತ್ತಿದ್ದು ಬರೋಬ್ಬರಿ 1.61 ಲಕ್ಷ ರೂಪಾಯಿ ಸಂಚಾರಿ ದಂಡ ಬಿದ್ದಿದೆ. ಹೀಗಿದ್ದರೂ ಬೀದಿಗಳಲ್ಲಿ ರಾಜಾರೋಷವಾಗಿ ಓಡಾಡುತ್ತಲೇ ಇದ್ದನು. ವ್ಯಕ್ತಿಯೊಬ್ಬರು ನಾನು ವರ್ಷದಿಂದ ಈ ವ್ಯಕ್ತಿಯನ್ನು ಗಮನಿಸುತ್ತಿದ್ದೇನೆ. ಹೆಲ್ಮೆಟ್ ಇಲ್ಲದೆ ಸುತ್ತಾಡುತ್ತಿದ್ದನು. ಸಂಚಾರಿ ದಂಡ ಒಂದೂವರೆ ಲಕ್ಷ ರೂಪಾಯಿ ದಾಟಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದರು.
ಎಕ್ಸ್ ಬಳಕೆದಾರ ಶಿಬಮ್ ಎನ್ನುವರು ಸಂಚಾರ ನಿಯಮಗಳ ಉಲ್ಲಂಘನೆಯ ಬಗ್ಗೆ ಪೋಸ್ಟ್ ಮಾಡಿದ ನಂತರ ವಾಹನವು ಆನ್‌ಲೈನ್ ಪರಿಶೀಲನೆ ನಡೆಸಿದ್ದಾರೆ. ಕೆಲ ಸಮಯದಿಂದ ವಾಹನದ ದಂಡವನ್ನು ಟ್ರ್ಯಾಕ್ ಮಾಡುತ್ತಿದ್ದ ಬಳಕೆದಾರ ಶಿಬಾಮ್, ದಂಡದ ಮೊತ್ತವು ಕಳೆದ ವರ್ಷ ₹1,05,500 ರಿಂದ ₹1,61,000ಕ್ಕೆ ಏರಿದೆ ಎಂದು ಗಮನಸೆಳೆದರು. ಪೋಸ್ಟ್‌ನಲ್ಲಿ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡುವುದು ಸೇರಿದಂತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಾಹನ ಮತ್ತು ಸವಾರನ ಫೋಟೋ ಇದೆ. ಬಳಕೆದಾರರು ಟ್ರಾಫಿಕ್ ಚಲನ್ ಪಾವತಿ ಅಪ್ಲಿಕೇಶನ್‌ನಿಂದ ಸ್ಕ್ರೀನ್‌ಶಾಟ್ ಅನ್ನು ಸಹ ಲಗತ್ತಿಸಲಾಗಿತ್ತು.
https://x.com/citymarkettrps/status/1886417780024689023?t=rzMtwA5WMklGad9FuEAqaA&s=19
ಹೆಚ್ಚುತ್ತಿರುವ ದಂಡಗಳ ಹೊರತಾಗಿಯೂ ಬೆಂಗಳೂರು ನಗರ ಸಂಚಾರ ಪೊಲೀಸರು ಇನ್ನೂ ವಾಹನವನ್ನು ಏಕೆ ವಶಪಡಿಸಿಕೊಂಡಿಲ್ಲ ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ. @blrcitytraffic ಇನ್ನೂ ಅವರ ವಾಹನವನ್ನು ಯಾಕೆ ವಶಪಡಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಬೆಂಗಳೂರು ಸಂಚಾರ ಪೊಲೀಸರು Xನಲ್ಲಿ ಉತ್ತರಿಸಿದ್ದು ಸಮಸ್ಯೆಯನ್ನು ಒಪ್ಪಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅದರಂತೆ ಕ್ರಮಕ್ಕೆ ಮುಂದಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬೈಕ್ ಅನ್ನು ಸೀಜ್ ಮಾಡಿದ್ದಾರೆ.
ಈ ಘಟನೆ X ಬಳಕೆದಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅವರಲ್ಲಿ ಹಲವರು ಸಂಚಾರ ಜಾರಿ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ದಂಡದ ಮೊತ್ತವು ಸ್ಕೂಟರ್‌ನ ಮೌಲ್ಯವನ್ನು ಮೀರಿದೆ. ಹೀಗಾಗಿ ಆತ ಬೈಕ್ ಬಿಟ್ಟು ಹೋಗುತ್ತಾನೆ ಎಂದು ಕೆಲವರು ಟೀಕಿಸಿದ್ದಾರೆ. ಇತರರು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಒಬ್ಬರು FIR ದಾಖಲಿಸಬೇಕು ಮತ್ತು ವಾಹನವನ್ನು ಲೆಕ್ಕಿಸದೆ ನ್ಯಾಯಾಲಯದ ಮೂಲಕ ದಂಡವನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದರು.
Comments