ಕೊರಟಗೆರೆ ಬಳಿ ಕಾರಿಗೆ ಲಾರಿ ಡಿಕ್ಕಿ; ಗೋವಾದಿಂದ ವಾಪಸ್ ಬರುವಾಗ ಅಪಘಾತ; ಕಾರಿನಲ್ಲಿದ್ದ ಇಬ್ಬರು ಮೃತ

 ಕೊರಟಗೆರೆ ಬಳಿ ಕಾರಿಗೆ ಲಾರಿ ಡಿಕ್ಕಿ; ಗೋವಾದಿಂದ ವಾಪಸ್ ಬರುವಾಗ ಅಪಘಾತ; ಕಾರಿನಲ್ಲಿದ್ದ ಇಬ್ಬರು ಮೃತ.




ಕೊರಟಗೆರೆ: ಕೊರಟಗೆರೆ ತಾಲ್ಲೂಕಿನ ಕಂಬದಹಳ್ಳಿ ಬಳಿ ಸೋಮವಾರ ಬೆಳಗಿನ ಜಾವ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.


ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಪ್ರವೀಣ್ (23), ಹರ್ಷೀತ್ (22) ಮೃತರು. ಗೋವಾಗೆ ಹೋಗಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.


ಮಧುಗಿರಿ ಕಡೆಯಿಂದ ಬರುತ್ತಿದ್ದ ಇಟಿಎಸ್ ಕಾರು ಹಾಗೂ ಕಂಬದಹಳ್ಳಿ ಕಡೆಯಿಂದ ಹೊರಟಿದ್ದ ಲಾರಿ ಮುಖಾಮುಖಿಯಾಗಿವೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ. 


ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments