ಹಿಟ್ &ರನ್: ಮಹಿಳೆ ಸಾವು: ನಾಲ್ಕು ವರ್ಷದ ಮಗುವಿಗೆ ತೀವ್ರ ಗಾಯ
ದೊಡ್ಡಬಳ್ಳಾಪುರ ತಾಲೂಕಿನ ನಂದಿ ಮೋರಿ ಸಮೀಪ ಹಿಟ್ &ರನ್ ಆಗಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದು, ನಾಲ್ಕು ವರ್ಷದ ಮಗುವಿಗೆ ತೀವ್ರ ಗಾಯಗಳಾಗಿವೆ.
ಪಾಲನಜೋಗನಹಳ್ಳಿಯ ಸಿದ್ದರಾಮಣ್ಣಲೇಔಟ್ ನಿವಾಸಿ ಭಾನುಪ್ರೀಯಾ (25), ಮೃತ ಮಹಿಳೆ. ಮನೋಜ್ (4) ಮಗುವಿಗೆ ಗಂಭೀರ ಗಾಯಗಳಾಗಿವೆ.
ತಾಯಿ- ಮಗು ರಸ್ತೆಯ ಬದಿ ನಿಂತಿದ್ದಾಗ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
Comments