"ನಮ್ಮ ಅತ್ತೆ ಬೇಗ ಸಾಯಬೇಕು ತಾಯಿ" ಅಂತ ನೋಟಿನ ಮೇಲೆ ಬರೆದು ದೇವರಿಗೆ ಕಾಣಿಕೆ ಹಾಕಿದ ಸೊಸೆ.!
ಕಲಬುರ್ಗಿ: ಜಿಲ್ಲೆಯ ಅಪಜಲಪುರ ತಳುಕಿನ ಘತ್ತರಗಿ ಗ್ರಾಮದಲ್ಲಿರುವ ಭಾಗ್ಯವಂತಿ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಇನ್ನೂ ಪ್ರತಿ ವರ್ಷ ಹುಂಡಿ ಎಣಿಕೆ ಮಾಡಲಾಗುತ್ತದೆ.
ಹುಂಡಿ ಹಣ ಎಣಿಕೆ ಸಮಯದಲ್ಲಿ ಭಕ್ತೆ ನೀಡಿರುವ ಕಾಣಿಕೆ ನೋಡಿ ಹೇಗಿದೆ ಅಂತ.....
ಭಾಗ್ಯವಂತಿ ದೇವಿಯ ಹುಂಡಿಗೆ 20 ರೂ ನೋಟನ್ನು ಹಾಕಲಾಗಿದೆ, ಈ ನೋಟಿನ ಮೇಲೆ ಬರೆದಿರುವ ಕೋರಿಕೆ ಓದಿದರೆ, ನೀವೂ ಒಂದೂ ಕ್ಷಣ ಬೆರಗುಗೊಳೋದಂತು ಗ್ಯಾರೆಂಟಿ.
ಅಂತದ್ದೇನಿದೆ ಅಂತಿರಾ? ನೀವೇ ನೋಡಿ... 20 ರೂ ನೋಟಿನ ಮೇಲೆ " ನಮ್ಮ ಅತ್ತೆ ಬೇಗ ಸಾಯಲಿ ತಾಯಿ" ಎಂದು ಬರೆಯಲಾಗಿದೆ.
ಹೀಗೆ ಸೊಸೆಯೋರ್ವಳು ನೋಟಿನ ಮೇಲೆ ಬರೆದಿರುವ ಕೋರಿಕೆ 20 ರೂಪಾಯಿಯ ನೋಟು ಹುಂಡಿಯಲ್ಲಿ ಸಿಕ್ಕಿದ್ದು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಹುಂಡಿ ತೆರೆದು ಎಣಿಕೆ ಮಾಡಲಾಗಿತ್ತು, ವಾರ್ಷಿಕ ಹುಂಡಿ ಎಣಿಕೆಯಲ್ಲಿ 60 ಲಕ್ಷ ನಗದು, ಒಂದು ಕೆಜಿ ಬೆಳ್ಳಿ ಜಮವಾಗಿದೆ ಎಂದು ತಿಳಿಸಿದರು.
Comments