ದೇಶೀಯ ಕ್ರೀಡೆ ಮೈ ನೆವೆರೇಳಿಸುವ ದೃಶ್ಯ;
ನೋಡುಗರಲ್ಲಿ ಯಾರು ಗೆಲ್ತಾರೆ ಎಂಬ ಕಾತುರ;
ಪೈಪೋಟಿ ನೋಡುವ ಸಾರ್ವಜನಿಕರಿಂದ ಶಿಳ್ಳೆ ಚಪ್ಪಾಳೆ;
ಪ್ರತೀ ಕ್ಷಣವೂ ಮನಮೋಹಕ ಕ್ಷಣಕ್ಕೆ ಸಾಕ್ಷಿ........!!
ಯಲಹಂಕ: ತಾಲೂಕಿನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕುಸ್ತಿ ಪಂದ್ಯಾವಳಿ ರಾಜ್ಯ ಮಟ್ಟದ ಜಂಗಿ ಕುಸ್ತಿ ಕಾದಾಟ ಕಳೆಗಟ್ಟಿದ್ದು, ಪೈಲ್ವಾನ್ ಗಳ ಮೈನವಿರೇಳಿಸುವ ಕುಸ್ತಿಯನ್ನು ಕಣ್ಣುಂಬಿಕೊಳ್ಳಲು ಸಾವಿರಾರು ಜನ ಜಮಾಯಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಬಾಗಿಯಾಗಿ ಕುಸ್ತಿ ಪಟುಗಳ ಕಾಳಗಕ್ಕೆ ಚಾಲನೆ ನೀಡಿದರು...
ನಂತರ ಮಾತನಾಡಿದ ಅವರು ಪ್ರತಿ ವರ್ಷ ಭುವನೇಶ್ವರಿಯ ಮೆರವಣಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿದ್ದರು ಈ ವರ್ಷ ವಿಶೇಷವಾಗಿ ಕುಸ್ತಿ ಪಂದ್ಯವನ್ನು ಆಯೋಜನೆ ಮಾಡಿದರೆ ಯಲಹಂಕದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಿರುವುದು ವಿಶೇಷ, ದೇಶಿಯ ಕುಸ್ತಿ ಪುರಣದಲ್ಲಿ ಬರುವ ಕುಸ್ತಿ ನಶಿಸುವ ಸಮಯದಲ್ಲಿ ಮತ್ತೆ ಪುನರುಜ್ಜೀವನ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬೆಂಗಳೂರು ಸುತ್ತಮುತ್ತಲಿನ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಬಾಗಿಯಾಗಿದ್ದರು.
ಇನ್ನು ವಿಶೇಷವಾಗಿ ಮಹಿಳೆಯರು ಸೇರಿದಂತೆ ಕುಸ್ತಿ ಪಂದ್ಯಾವಳಿಯಲ್ಲಿ 50 ಕುಸ್ತಿ ಪಟುಗಳಿಗೂ ಹೆಚ್ಚು ಜನ ಭಾಗವಹಿಸಿದ್ದರು. ಇತ್ತ ಇದೆ ಮೊದಲ ಬಾರಿಗೆ ಯಲಹಂಕದಲ್ಲಿ ಕುಸ್ತಿ ಕಾಳಗ ಆಯೋಜಿಸಿದ್ದರಿಂದ ಸ್ಥಳೀಯರು ಮಸ್ತ್ ಎಂಜಾಯ್ ಮಾಡಿದರು.
ಅಂದಹಾಗೆ ಕೆಂಪೇಗೌಡರು ಆಳಿದ ನಾಡಿನಲ್ಲಿ ದೇಶೀ ಕುಸ್ತಿ ಕ್ರೀಡೆಯು ಕುಸ್ತಿ ಕಲೆಗೆ ಹೆಸರುವಾಸಿಯಾಗಿದ್ದು, ಕುಸ್ತಿ ಕಲೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಲಹಂಕ ಗುರು ತಿಳಿಸಿದರು.
Comments