ಹುಲುಕುಡಿ ಬೆಟ್ಟಕ್ಕೆ ಬೈಸಿಕಲ್ ಜಾತಾ ; ಉತ್ತಮ ಅರೋಗ್ಯ, ಉತ್ತಮ ಸಮಾಜ ನಿರ್ಮಿಸುವಲ್ಲಿ ಎನ್.ಸಿ.ಸಿ(NCC) ವಿದ್ಯಾರ್ಥಿಗಳ ಪಾತ್ರ ಮುಖ್ಯ....!!

 ಹುಲುಕುಡಿ ಬೆಟ್ಟಕ್ಕೆ ಬೈಸಿಕಲ್ ಜಾತಾ ; ಉತ್ತಮ ಅರೋಗ್ಯ, ಉತ್ತಮ ಸಮಾಜ ನಿರ್ಮಿಸುವಲ್ಲಿ ಎನ್.ಸಿ.ಸಿ(NCC) ವಿದ್ಯಾರ್ಥಿಗಳ ಪಾತ್ರ ಮುಖ್ಯ....!! 




ವಿದ್ಯಾರ್ಥಿ ದೆಸೆಯಲ್ಲಿ ಕೇವಲ ಓದಿಗೆ ಸೀಮಿತವಾಗಿರದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ತಮ್ಮ ಬದುಕಿನ ಅನುಭವಗಳನ್ನ ಹೆಚ್ಚಿಸಿಕೊಂಡು ಉನ್ನತ ಚಿಂತನೆಯನ್ನು ಬೆಳಿಸಿಕೊಳ್ಳಬೇಕು. Ncc ಈ ರೀತಿಯ ಕಾರ್ಯಗಳು ವಿದ್ಯಾರ್ಥಿಗಳ  ಬದುಕಿಗೆ ಆಶಾ ಭಾವನೆಯನ್ನು ತರಲು ಸಹಕಾರಿಯಾಗಲಿವೆ. 


ಉತ್ತಮ ಅರೋಗ್ಯ, ಉತ್ತಮ ಸಮಾಜ ನಿರ್ಮಿಸುವಲ್ಲಿ ಎನ್.ಸಿ.ಸಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದು ಶ್ರೀ ಕೊಂಗಾಡಿಯಪ್ಪ ಕಾಲೇಜು ಪದವಿ ಮತ್ತು ಪದವಿ ಪೂರ್ವ ಎನ್ .ಸಿ.ಸಿ ಘಟಕ ಅಯೋಜಿಸಿದ್ದ ಹುಲುಕುಡಿ ಬೆಟ್ಟಕ್ಕೆ ಬೈಸಿಕಲ್ ಜಾತಾ ಮತ್ತು ಪರ್ವತರೋಹಣ  ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾಲೇಜಿನ ಹಿರಿಯ ಆಂಗ್ಲ ಭಾಷಾ ಉಪನ್ಯಾಸಕರು ಹಾಗೂ ಕ್ಯಾಪ್ಟನ್ ಎನ್. ಶ್ರೀನಿವಾಸ್ ರವರು 


ಕಾಲೇಜಿನ ಉಪ ಪ್ರಾಂಶುಪಾಲರು ಅದಾ ಸ್ ಸ್. ಶಿವಶಂಕರ್ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ  ಬೈಸಿಕಲ್ ಜಾತದ ಮಹತ್ವನ್ನು ತಿಳಿಸಿದರು.. ಆದುನಿಕತೆಯ ಬಳುವಳಿಯಲ್ಲಿ ಮೂಲ ಬದುಕಿನ ರೂಢಿಗಳು ಮರೆಯಾಗುತ್ತಿವೆ.



ದುಭಾರಿ ವಾಹನದ ಹುಚ್ಚು ಮನಸ್ಸನ್ನು ಬದಲಿಸುತ್ತಿದೆ.ಅದು ಬದಲಾಗಬೇಕು ಎಂದು ಆಶಯ ವ್ಯಕ್ತ ಪಡಿಸಿದರು...



ಇನ್ನೂ ಕಾರ್ಯಕರ್ಮದಲ್ಲಿ ಲೆಪ್ಟಿನೆಂಟ್ ಪ್ರವೀಣ್ ಹಾಗೂ cto. ಶ್ರೀಕಾಂತ್ ಸಿ ಕೆ. ಹಾಗೂ ಎನ್ .ಸಿ.ಸಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು 

Comments