BPL ರೇಷನ್ ಕಾರ್ಡ್ ರದ್ದತಿಯ ಬಗ್ಗೆ ಆಹಾರ ಸಚಿವರು ಹೇಳಿಕೆ......
ದೇವನಹಳ್ಳಿ : ಬಡವರ ಬದುಕಿಗೆ ಆಧಾರವಾಗಿರುವ ಬಿಪಿಎಲ್ (BPL) ಪಡಿತರ ಚೀಟಿ ರದ್ದತಿ ರಾಜ್ಯಾದ್ಯಂತ ಗೊಂದಲ ಮೂಡಿಸಿದೆ. ಬಿಪಿಎಲ್ ಪಡಿತರ ಚೀಟಿ ರದ್ದತಿಯಿಂದ ಕೆಲ ಅರ್ಹ ಫಲಾನುಭವಿಗಳು ಕಂಗಾಲಾಗಿದ್ದಾರೆ. Cancel ಆದ ಕಾರ್ಡ್ಗಳ ಪಟ್ಟಿ ನೋಡಿ ಪಡಿತರ ಅಂಗಡಿಗೆ ಬಂದವರು ಅಳಲು ತೋಡಿಕೊಂಡಿದ್ದಾರೆ.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ಆಗಲಿ, ಎಪಿಎಲ್ ಕಾರ್ಡ್ ಆಗಲಿ ಯಾವುದೇ ಕಾರ್ಡ್ ರದ್ದು ಮಾಡಿಲ್ಲ.
ಬಿಪಿಎಲ್ ಕಾರ್ಡ್ ಪಡೆದವರಲ್ಲಿ ಅರ್ಹತೆ ಇಲ್ಲದವರಲ್ಲಿ ಶೇ.20-25ರಷ್ಟು ಮಂದಿ ಸೇರಿದ್ದಾರೆ. ಅಂದರೆ ಬಡವರಲ್ಲದವರು, ಅರ್ಹತೆ ಇಲ್ಲದವರೂ ಸೇರಿಕೊಂಡಿದ್ದಾರೆ. ಜನರು ಭಯಪಡುವ ಅಗತ್ಯವಿಲ್ಲ, ಯಾವುದೇ ಕಾರ್ಡ್ ರದ್ದು ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಈಗ ಬಿಪಿಎಲ್ಗೆ ಅರ್ಹತೆ ಇಲ್ಲದವರೂ ಎಪಿಎಲ್ನಲ್ಲಿರುತ್ತಾರೆ. ಯಾರಾದರೂ ಬಿಪಿಎಲ್ ಕಾರ್ಡ್ ಕಳೆದುಕೊಂಡರೆ ಮತ್ತೆ ಸೇರಿಸುತ್ತೇವೆ. ಯಾರೂ ಭಯಪಡುವ ಅಗತ್ಯವಿಲ್ಲ. ಯಾವುದೇ ಕಾರ್ಡ್ ರದ್ದುಗೊಳ್ಳುವುದಿಲ್ಲ.
ಮುಂದಿನ 15-20 ದಿನಗಳಲ್ಲಿ ಬಿಪಿಎಲ್ ಕಾರ್ಡ್ ಅನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು ಹೊಸ ಕಾರ್ಡ್ ಕೂಡ ನೀಡಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಬಿಪಿಎಲ್ ಪಡಿತರ ಚೀಟಿ ರದ್ದು ವಿಚಾರಕ್ಕೂ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ಬಗ್ಗೆ ಬಡವರು ಆತಂಕ ಪಡುವ ಅಗತ್ಯವಿಲ್ಲ. ಅರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಮುನಿಯಪ್ಪ ಅವರಿಗೆ ಸೂಚಿಸಿದ್ದೇನೆ.
ಬಡವರಿಗೆ ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡಬಾರದು. ಬಿಪಿಎಲ್ ನವರು ಬಿಟ್ಟರೆ ಅರ್ಜಿ ಸಲ್ಲಿಸಿದರೆ ಕಾರ್ಡ್ ಕೊಡುತ್ತೇವೆ. ನಮ್ಮ ಸರ್ಕಾರ ಯಾವಾಗಲೂ ಬಡವರ ಪರವಾಗಿರುತ್ತದೆ ಎಂದು CM ಸಿದ್ದರಾಮಯ್ಯ ಹೇಳಿದರು.
Comments