ಲಾರಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು......

ಲಾರಿ  ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು......


 ಕುಣಿಗಲ್ : ತಾಲೂಕಿನ ಗವಿಮಠದ ಬಳಿ ಅಪಘಾತ ನಡೆದಿದು, ಕುಣಿಗಲ್ ಪಟ್ಟಣದಿಂದ ಹುಲಿಯೂರುದುರ್ಗಕ್ಕೆ ತೆರಳುವ ಮಾರ್ಗ ಮಧ್ಯ ಗವಿಮಠದ ಬಳಿ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ,


ಮೃತ ದುರ್ದೈವಿ ಕುಣಿಗಲ್ ಪಟ್ಟಣದ ವಾಸಿ ದಿವಂಗತ ಸತ್ಯನಾರಾಯಣ ಶೆಟ್ಟಿ ಯ ಎರಡನೇ ಮಗ ತೀರ್ಥ ಕುಮಾರ್ ಎಂದು ಗುರುತಿಸಲಾಗಿದೆ.


ಮೃತ ವ್ಯಕ್ತಿ ಪತ್ನಿ ಮಗಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿದ ಕುಣಿಗಲ್ ಪೊಲೀಸರು ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Comments