ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ಲೋಕಾಯುಕ್ತರ ಬಲೆಗೆ -ಸಾರಥಿ ಟಿವಿ ನ್ಯೂಸ್

     ಕಂದಾಯ ಅಧಿಕಾರಿ ನಾರಾಯಣ್ ಮತ್ತು ಸಿಬ್ಬಂದಿ  ಕೃಷ್ಣಮೂರ್ತಿ 50 ಸಾವಿರ ರೂಗಳಿಗೆ ಬೇಡಿಕೆ.


    ಕಚೇರಿಯಲ್ಲಿ ಫಲಾನುಭವಿಯಿಂದ 15 ಸಾವಿರ ರೂಗಳ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ.



            ಗೌರಿಬಿದನೂರು : ನಗರಸಭೆಯಲ್ಲಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಡೆಸಿದ ಕಂದಾಯ ಅಧಿಕಾರಿ ಮತ್ತು ಓರ್ವ ಸಿಬ್ಬಂಧಿ ಸೇರಿದಂತೆ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ನಗರದ ಹೊರವಲಯದಲ್ಲಿರುವ ಸಕ್ಕರೆ ಕಾರ್ಖಾನೆ ಮುಂಭಾಗದ ನಿವಾಸಿ ಜುಲೈಕಾರ್ ಆಲಿದ್ ಭುಟ್ ರವರು ತಮ್ಮ ತಾಯಿ ಮತ್ತು ಸಹೋದರಿಯ ಹೆಸರಿನಲ್ಲಿ ಇ-ಖಾತೆ ಪಡೆಯಲು ನಗರಸಭೆಯಲ್ಲಿ ಮನವಿ ಸಲ್ಲಿಸಿದ್ದರು. ಇದನ್ನು ನೀಡಲು ನಗರಸಭೆಯ ಕಂದಾಯ ಅಧಿಕಾರಿ ನಾರಾಯಣ್ ಮತ್ತು ಸಿಬ್ಬಂದಿ  ಕೃಷ್ಣಮೂರ್ತಿ 50 ಸಾವಿರ ರೂಗಳಿಗೆ ಬೇಡಿಕೆ ಇಟ್ಟಿದ್ದರು. ಗುರುವಾರ ಕಚೇರಿಯಲ್ಲಿ ಫಲಾನುಭವಿಯಿಂದ 15 ಸಾವಿರ ರೂಗಳ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಕಂದಾಯ ಅಧಿಕಾರಿ ನಾರಾಯಣ್ ಮತ್ತು ಸಿಬ್ಬಂದಿ ಕೃಷ್ಣಮೂರ್ತಿ ಸಿಲುಕಿದ್ದಾರೆ.           

                     


ಇದನ್ನೂ ಓದಿ: ಸರ್ಕಾರಿ ಕಚೇರಿ, ಆವರಣದಲ್ಲಿ ತಂಬಾಕು ಸೇವನೆಗೆ ನಿಷೇಧ ಸೇವಿಸಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ.....


           ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಜೆ.ಕೆ. ಮತ್ತು ಡಿವೈಎಸ್ಪಿ ವೀರೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಸುಮಾರು 10 ಮಂದಿ ಲೋಕಾಯುಕ್ತ ಪೊಲೀಸರಿಂದ ನಡೆದ ಈ ಕಾರ್ಯಾಚರಣೆಯು ನಗರಸಭೆಯಲ್ಲಿನ ಭ್ರಷ್ಟ ಅಧಿಕಾರಿಗಳನ್ನು ಸೆರೆ ಹಿಡಿಯಲು ಸಹಕಾರಿಯಾಗಿದೆ. 22. 2022 ರ ಶನಿವಾರ ನಗರಸಭೆಯಲ್ಲಿ ನಡೆದಿದ್ದ ಲೋಕಾಯುಕ್ತ ದಾಳಿಯಲ್ಲಿ ನಾಲ್ಕು ಮಂದಿ ಬಲಿಯಾಗಿ ಇಲ್ಲಿನ ಅವ್ಯವಸ್ಥೆ ಮತ್ತು ಲಂಚಾವತಾರದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಬೆಳಕು ಚೆಲ್ಲಿದ್ದರು. ಆರೋಪಿಗಳನ್ನು ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಟ್ಟಿದ್ದರು ಎನ್ನುವುದನ್ನು ಇಂದಿಗೂ ಮರೆಯುವಂತಿಲ್ಲ.



ಗುರುವಾರ ಮಧ್ಯಾಹ್ನದಿಂದ ನಗರಸಭೆಯಲ್ಲಿ ಮೌನ ಮನೆಮಾಡಿದ್ದು ಕಚೇರಿಯು ಸೂತಕದ ಮನೆಯಾಗಿದೆ. ನಾಗರೀಕರು ಇಲ್ಲಿನ ಅವ್ಯವಸ್ಥೆ ಮತ್ತು ಅಧಿಕಾರಿಗಳ ವರ್ತನೆ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.




ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪಿಐ ರವರಾದ ಮೋಹನ್ ಹೆಡ್ಡನ್, ಜಿ.ಶಿವಪ್ರಸಾದ್, ಪೊಲೀಸರಾದ ಕೆ.ಪಿ.ನಾಗರಾಜ್, ಚೌಡರೆಡ್ಡಿ, ಸತೀಶ್, ಅರುಣ್ ಕುಮಾರ್, ಸಂತೋಷ್ ಕುಮಾರ್, ದಿಲೀಪ್, ರಮೇಶ್, ಮೂರ್ತಿ, ಮಂಜುಳಾ ಸೇರಿದಂತೆ ಇತರರು ಭಾಗವಹಿಸಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದರು.

Comments