ರೈಲಿಗೆ ಸಿಲುಕಿ ವ್ಯಕ್ತಿ ಸಾವು .....



ದೊಡ್ಡಬಳ್ಳಾಪುರ ಮತ್ತು ವಡ್ಡರಹಳ್ಳಿ ರೈಲು ನಿಲ್ದಾಣಗಳ ನಡುವೆ ರೈಲ್ವೆ ಕೆ ಎಂ ನಂಬರ್ 39 /700 - 800 ರ ನಡುವೆ ಒಬ್ಬ ಅಪರಿಚಿತ ಗಂಡಸು ವಯಸ್ಸು 25 ರಿಂದ 30 ವರ್ಷದವರು ರೈಲು ಗಾಡಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.


ವ್ಯಕ್ತಿಯ ಚಹರೆ : ಸುಮಾರು 172 ಸೆಂಟಿಮೀಟರ್ ಎತ್ತರ ಸಾಧಾರಣ ಎಣ್ಣೆಗೆಂಪು ಮೈಬಣ್ಣ, ಗುಂಡು ಮುಖ, ದಪ್ಪ ಮೂಗು, ಸಣ್ಣನೆ ಕಿವಿಗಳು ಎಡಗೈನ ಮೊಣಕೈನಲ್ಲಿ ಅಪ್ಪ ಎಂಬ ಅಚ್ಚೆ ಗುರುತು ಇದ್ದು ತಲೆಯಲ್ಲಿ ಎರಡುವರೆ ಇಂಚು ಉದ್ದನಯ ಕಪ್ಪನೆಯ ತಲೆ ಕೂದಲು, ಇದ್ದು ನೀಳಕಾಯ ಶರೀರವನ್ನು ಹೊಂದಿರುತ್ತಾರೆ.


 ಶವದ ಮೇಲೆ ಕಪ್ಪು ಬಣ್ಣದ ಅರ್ಧ ತೋಳಿನ ಬನಿಯನ್ನು ಕಪ್ಪು ಬಣ್ಣದ ಅರಸಿನ ಬಣ್ಣದ ಒಳಚಡ್ಡಿ ಸೊಂಟದಲ್ಲಿ ಎರಡು ಎಳೆಯ ಕಪ್ಪು ಬಣ್ಣದ ಉಡದಾರ ಇದ್ದು ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರನ್ನು ಸಂಪರ್ಕಿಸಬೇಕಾಗಿ ಕೋರಿದೆ. 

ಶ್ರೀ ಅಶ್ವಥ್. ಜಿಎನ್ ಎಎಸ್ಐ 9480802143 ಶ್ರೀ ಜಗದೀಶ್ ಆರ್ ಪಿಎಸ್ಐ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆ 9480802118

Comments