ಹರೀಶ್ ಗೌಡರ ಕೊಡುಗೆ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಜೆಡಿಎಸ್ ಮುಖಂಡರು.....

 ಹರೀಶ್ ಗೌಡರ ಕೊಡುಗೆ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಜೆಡಿಎಸ್ ಮುಖಂಡರು



ದೊಡ್ಡಬಳ್ಳಾಪುರಇತ್ತೀಚೆಗೆ ಬಿಜೆಪಿ ಹಾಗೂ ಜೆಡಿಎಸ್ ನ ಕೆಲ ಮುಖಂಡರಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಹರೀಶ್ ಗೌಡರ ಸ್ಥಾನ ಮತ್ತು ತಾಲೂಕಿಗೆ ನೀಡಿದ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.


 ನಮ್ಮ ಗ್ರಾಮಕ್ಕೆ ಹರೀಶ್ ಗೌಡರನ್ನು ಮೊದಲು ಕರೆತಂದಿದ್ದು ಪ್ರಶ್ನೆ ಮಾಡಿದ್ದ ವಸಂತ್ ರವರು ಆದರೆ, ಈಗ ಅವರೇ ಹರೀಶ್ ಗೌಡರ ಕೊಡುಗೆ ಏನು ಎಂದು ಪ್ರಶ್ನೆ ಮಾಡುವುದು ಹಾಸ್ಯಸ್ಪದವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಅವರು ಗ್ರಾಮದ ದೇವಸ್ಥಾನಗಳ ಅಭಿವೃದ್ಧಿ, ಗ್ರಾಮಸ್ಥರ ಆರೋಗ್ಯ ಸಮಸ್ಯೆಗಳಾದಲ್ಲಿ ಹಲವರು ಬಾರಿ ಧನ ಸಹಾಯವನ್ನು ಮಾಡಿದ್ದಾರೆ ಎಂದು ದೊಡ್ಡತುಮಕೂರು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಪ್ರಭಾಕರ್ ಹೇಳಿದರು



ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಹರೀಶ್ ಗೌಡರು ಅಧಿಕಾರ ಸ್ವೀಕರಿಸಿ ತಾಲ್ಲೂಕಿನಲ್ಲಿ ಜೆಡಿಎಸ್ ಬಲವರ್ಧನೆ ಹಾಗೂ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿರುವುದು ನಮಗೆಲ್ಲ ತಿಳಿದಿದೆ ಎಂದು ಪ್ರಶ್ನೆ ಮಾಡಿದವರಿಗೆ ತಿರುಗೇಟು ಕೊಟ್ಟರು.



ಜೆಡಿಎಸ್ ನಲ್ಲಿ ಇಬ್ಬಾಗವಾಗಿದೆ ಎಂದು ಬಿಜೆಪಿ ಮುಖಂಡ ಮಂಜುನಾಥ್ ಮಾತುಗಳಿಗೆ ಉತ್ತರಿಸುತ್ತಾ… ಜೆಡಿಎಸ್ ಇಬ್ಬಾಗವಾಗಿಲ್ಲ… ಜೆಡಿಎಸ್ ಕಾರ್ಯಕರ್ತರು ಸದಾ ಒಮ್ಮತದ ನಿರ್ಧಾರದಿಂದ ಜೊತೆಯಲ್ಲಿದ್ದೇವೆ ಎಂದರು. ಹರೀಶ್ ಗೌಡರ ಮುಖಕ್ಕೆ ಮಸಿ ಬಳಿಯುತ್ತವೆ ಎಂಬ ಹೇಳಿಕೆ ಸಲ್ಲದು. ಹರೀಶ್ ಗೌಡರ ಮುಖಕ್ಕೆ ಮಸಿ ಬಳಿಯುತ್ತೇವೆ ಎನ್ನುವ ಮನಸ್ಥಿತಿ ಕುರಿತು ಶಾಸಕರು ತಮ್ಮ ಹಿಂಬಾಲಕರಿಗೆ ಬುದ್ದಿ ಹೇಳಬೇಕಿದೆ. ಈ ಕುರಿತು ಹೇಳಿಕೆ ನೀಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೆವೆ. ಶಾಸಕರು ತಮ್ಮ ಹಿಂಬಾಲಕರಿಗೆ ಈ ಮನಸ್ಥಿತಿಯನ್ನು ಕೈಬಿಡುವಂತೆ ಬುದ್ದಿ ಹೇಳಬೇಕಿದೆ ಎಂದು ಆಗ್ರಹಿಸಿದರು.



ಜೆಡಿಎಸ್ ಮುಖಂಡ ದೀಪು ಮಾತನಾಡಿ, ಇದು ನಮ್ಮ ದೊಡ್ಡತುಮಕೂರಿನ ಮೊದಲ ಚುನಾವಣೆ. ಈ ಚುನಾವಣೆಯಲ್ಲಿ ಸತತವಾಗಿ ಮೈತ್ರಿಗೆ ಪ್ರಯತ್ನ ಮಾಡಿದ್ದೇವು. ಆದರೆ, ಬಿಜೆಪಿ ಒಪ್ಪದ ಕಾರಣ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆಗೆ ವೆಚ್ಚ ಮಾಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿದ್ದರೆ ಅದೆಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು. ಚುನಾವಣೆ ನಡೆಸಲು ಇದ್ದ ಬದ್ಧತೆ ಗ್ರಾಮದ ಅಭಿವೃದ್ಧಿಗೆ ಬಳಸಿ ಎಂದರು.



 ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ಸಾಲ ಸುಳಿಯಲ್ಲಿದ್ದು, ಇದರ ನಡುವೆ ರಾಜಕೀಯ ಬಣಗಳ ಕಿತ್ತಾಟದಿಂದ ಸಂಘ ಹಳ್ಳ ಹಿಡಿಯುತ್ತಿದೆ, ಸಹಕಾರಿ ಸಂಘ ಕನಿಷ್ಠ 10 ಸಾವಿರ ಲಾಭ ಗಳಿಸದಿದ್ದಲ್ಲಿ ಸಂಘವು ಸೂಪರ್ ಸೀಡ್ ಆಗುವ ಆತಂಕ ಸಹ ಇದೆ, ಮತ್ತೆ ಸಂಘವನ್ನ ಕಟ್ಟುವುದು ಅಸಾಧ್ಯವಾದ ಮಾತು, ರಾಜಕೀಯ ಕಿತ್ತಾಟ ಬಿಟ್ಟು ಗ್ರಾಮದ ಅಭಿವೃದ್ಧಿಗಾಗಿ ದುಡಿಯೋಣ ಎಂದು ಕೆಪಿಸಿಸಿ ಎಸ್ ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ತಿಳಿಸಿದರು. 



ಸಂಘ ಪ್ರಾರಂಭವಾದ ಸಮಯದಲ್ಲಿ ಸರ್ವ ಪಕ್ಷಗಳಿಗೆ ಸಮಪಾಲು ನೀಡಿ ಪ್ರಾರಂಭಿಸಿದೆವು, ಆದರೆ, ಈ ಒಪ್ಪಂದವನ್ನು ಬಿಜೆಪಿ ಪರಿಪಾಲನೆ ಮಾಡದ ಕಾರಣ ಚುನಾವಣೆಗೆ ಮುಂದಾಗಬೇಕಾಯಿತು. ಚುನಾವಣೆ ಫಲಿತಾಂಶ ವೇಳೆ ಗಲಾಟೆಯಾದಾಗ ಸ್ಥಳಕ್ಕೆ ಬಂದ ಶಾಸಕರು, ಷೇರುದಾರರ ಅಹವಾಲುಗಳನ್ನು ಅಲಿಸದೇ ಬಿಜೆಪಿ ಪಕ್ಷದ ಪರ ನಿಂತು ಪ್ರತಿಭಟನೆಗೆ ಮುಂದಾಗುತ್ತಾರೆ. ಶಾಸಕರು ಕೇವಲ ಒಂದು ಪಕ್ಷದ ಶಾಸಕರಲ್ಲ, ತಾಲ್ಲೂಕಿನ ಪ್ರಥಮ ಪ್ರಜೆ, ಸರ್ವರಿಗೂ ಹಿತ ಕಾಯುವ ಕಾರ್ಯ ಕೆಲಸ ಮಾಡುವುದನ್ನ ಅವರು ಅರಿಯಬೇಕಿದೆ ಎಂದರು.



ಸುದ್ದಿಗೊಷ್ಟಿಯಲ್ಲಿ ಮುಖಂಡರಾದ ಚೈತ್ರ ಭಾಸ್ಕರ್, ವಿರೇಗೌಡ, ಅಜಯ್, ಮಂಜುನಾಥ್, ಚೈತ್ರ ಶ್ರೀಧರ್, ಪ್ರವೀಣ್ ಶಾಂತಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Comments