ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಅಂತರಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ; ಇಂದು ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ...!!

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಅಂತರಹಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ; ಇಂದು ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ...!! 


ದೊಡ್ಡಬಳ್ಳಾಪುರ: "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಅವರು ನೆರವೇರಿಸಿದರು.


ನಂತರ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯು 48 ಕಾರ್ಯಕ್ರಮಗಳಿವೆ ಅದರಲ್ಲಿ ವಿಶೇಷವಾಗಿ ನಮ್ಮೂರು ನಮ್ಮ ಕೆರೆ ಕೆರೆಗಳ ಪುನರ್ ಚೇತನ ಕಾರ್ಯಕ್ರಮವನ್ನು 2016 ರಿಂದ ಜಾರಿಗೆ ತರಲಾಯಿತು. ಅನೇಕ ರೈತ  ಕುಟುಂಬಗಳು ಧರ್ಮಸ್ಥಳಕ್ಕೆ ಬಂದು  ಪೂಜ್ಯರಲ್ಲಿ  ಮತ್ತು ಬರಗಾಲದ ಬಗ್ಗೆ ಅಳಲನ್ನು ತೋಡಿಕೊಂಡಿರುತ್ತಾರೆ ಅದರಂತೆ ಪೂಜ್ಯರು ಈ ಬಗ್ಗೆ ಯೋಜನೆಯ ಕಾರ್ಯಕರ್ತರ ಮೂಲಕ ಅಧ್ಯಯನ ನಡೆಸಿ ಕೆರೆಗಳ ಸದುಪಯೋಗ, ಉಪಯೋಗ ಪಡೆದು ರೈತರು ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನ ನಡೆಸುವಂಥಾಗಲು, ಜನರಲ್ಲಿ ಜಲ ಸಮೃದ್ಧಿಯಾಗಲು ಕೆರೆ ಹೂಳೆತ್ತಿ ಅಭಿವೃದ್ಧಿ ಮಾಡಲು ಮಾರ್ಗದರ್ಶನ ಮಾಡುತ್ತಿದ್ದಾರೆ.


 ನಿರ್ಗತಿಕ ಕುಟುಂಬಗಳಿಗೆ ಮಾಸಿಕ 1000 ರೂ ಮಸಾಸನ ವನ್ನು ಸುಮಾರು ರಾಜ್ಯದಲ್ಲಿ 15,000 ಕುಟುಂಬಗಳಿಗೆ ನೀಡಲಾಗುತಿದೆ ಅಲ್ಲದೆ ವಾತ್ಸಲ್ಯ ಕಾರ್ಯಕ್ರಮದಿಂದ ಇವರಿಗೆ ಮನೆ ಕಟ್ಟಿಕೊಡಗುಲಾಗುತಿದೆ,  ವೃತ್ತಿಪರ  ಕೋರ್ಸ್ ಗಳಿಗೆ  ಸುಜ್ಞಾನ ನಿಧಿ ಶಿಷ್ಯವೇತನ  ಮಾಸಿಕ 700 ರಿಂದ 1000 ರೂ ಸುಮಾರು 55000 ಸಾವಿರ ಕೋಟಿ ರೂ ವಿನಿಯೋಗಿಸಲಾಗಿದೆ, ಸಮುದಾಯ ಅಭಿವೃದ್ಧಿಗಳಾದ ದೇವಸ್ಥಾನ ಜೀರ್ಣೋದ್ಧಾರ, ಹಿಂದೂ ರುದ್ರ ಭೂಮಿಯ ಅಭಿವೃದ್ಧಿ, ಶುದ್ಧಗಂಗಾ ಕುಡಿಯುವ ನೀರು, ಶಾಲೆಗಳಿಗೆ ಬೆಂಚು ಡೆಸ್ಕ್ , ಜನಮಂಗಳ ಕಾರ್ಯಕ್ರಮದ ಮೂಲಕ ವಿಕಲಚೇತನರಿಗೆ ವಿವಿಧ  ಉಪಕರಣಗಳ ಒದಗಿಸಲಾಗುತ್ತಿದೆ ಇತ್ಯಾದಿ ಧರ್ಮಸ್ಥಳ ಯೋಜನೆಯು ಸೌಲಭ್ಯ ನೀಡಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ   ಜಿಲ್ಲಾ ನಿರ್ದೇಶಕರು ಮಾಹಿತಿ ನೀಡಿದರು.


ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯ್ಕ್ ಮಾತನಾಡಿ  ಜೀವಜಲ ಕಾಪಾಡಿದರೆ ಮಾತ್ರ ನಮ್ಮ ಜೀವವೈವಿಧ್ಯವನ್ನು ಉಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸಿಕೊಂಡು ರಾಜ್ಯದಂತ ಕೆರೆಗಳಿಗೆ ಕಾಯಕಲ್ಪ ನೀಡುವ ಧರ್ಮಸ್ಥಳ ಯೋಜನೆಯ ದಿಟ್ಟ ಹೆಜ್ಜೆ ಇದಾಗಿದೆ  ಎಂದು ತಿಳಿಸಿದರು.



ಕೆರೆ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಮಾತನಾಡಿ ನೀರು ಅತ್ಯ ಅಮೂಲ್ಯವಾದದ್ದು ಜೀವ ಜಲವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ ಕಾರ್ಯಾ ಶ್ಲಾಘನೀಯವಾದದ್ದು ಎಂದರು.



ಕಾರ್ಯಕ್ರಮದಲ್ಲಿ ಕೆರೆ ಸಮಿತಿಯ ಪದಾಧಿಕಾರಿಗಳು,ಊರಿನ ಗಣ್ಯರು, ಉಪಸ್ಥಿತರಿದ್ದರು  ವಲಯ ಮೇಲ್ವಿಚಾರಕರಾದ ಗಿರೀಶ್ ಮತ್ತು ಕೃಷಿ ಮೇಲ್ವಿಚಾರಕರಾದ ಲೋಹಿತ್, ಸೇವಾಪ್ರತಿನಿಧಿಗಳು,ಊರಿನ ಗಣ್ಯರಾದ ಪ್ರಕಾಶ್, ಶಿವಣ್ಣ,ಬೈಯಣ್ಣ,ಮುನಿರತ್ನಮ್ಮ,ಪುಟ್ಟರಾಜು,ಮುನಿರಾಜು,ಚನ್ನಾರಾಮಯ್ಯ ಗ್ರಾಮಸ್ಥರು ಹಾಗೂ ಪ್ರಗತಿ ಬಂದು ಸ್ವ ಸಹಾಯ  ಸಂಘದ ಸದಸ್ಯರು ಉಪಸ್ಥಿತರಿದ್ದರು.

Comments