ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಿರ್ದೇಶಕ ಗುರುಪ್ರಸಾದ್ ಶವ ಪತ್ತೆ..!
ಬೆಂಗಳೂರು : ಬೆಂಗಳೂರಿನ ಮಾದನಾಯಕನಹಳ್ಳಿಯ ಟಾಟಾ ನ್ಯೂ ಹೆವನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ನಟ, ನಿರ್ದೇಶಕ ಗುರುಪ್ರಸಾದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದ್ದು, ಅವರ ಎರಡನೇ ಪತ್ನಿ ಸುಮಿತ್ರಾ ಅವರನ್ನು ಮನೆಗೆ ಕರೆಸಿ, ಬೀಗ ತೆಗೆದು ನೋಡಿದಾಗ, ಅವರ ಶವ ಕೊಳೆತ ಸ್ಥಿತಿಯಲ್ಲಿತ್ತು. ಶವವನ್ನು ಕೆಳಗೆ ಇಳಿಸಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಪೋಸ್ಟ್ ಮಾರ್ಟಂ ಮಾಡಲು ರವಾನಿಸಲಾಗಿದೆ.
ಸಾಲ ಕೊಟ್ಟವರಿಗೆ ಮರಳಿ ಸಕಾಲಕ್ಕೆ ಸಾಲ ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಕೆಲವೊಂದು ಚೆಕ್ ಬೌನ್ಸ್ ಆಗಿದ್ದಕ್ಕೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಾಕಿಯಿವೆ. ಅಂದಾಜು ಮೂರುಕೋಟಿಗೂ ಅಧಿಕ ಸಾಲವಿದೆ ಎನ್ನಲಾಗಿದೆ.
ನಾಯಕ ನಟನಾಗಿ ನಟಿಸಿದ್ದ ಏದ್ದೇಳು ಮಂಜುನಾಥ-2 ಸಿನಿಮಾ ಚಿತ್ರೀಕರಣ ಮುಗಿದು ಎರಡು ವರ್ಷ ಕಳೆದರೂ ಬಿಡುಗಡೆ ಮಾಡಲು ಆಗಿರಲಿಲ್ಲ. ಅಲ್ಲದೆ, ರಂಗನಾಯಕ ಸಿನಿಮಾ ಕೂಡ ನಿರ್ದೇಶನ ಮಾಡಿದ್ದರು.
ಇವರು ನಿರ್ದೇಶನ ಮಾಡಿರುವ ಮಠ ಸಿನಿಮಾ ಸುಪರ್ ಹಿಟ್ ಆಗಿತ್ತು, ಜೊತೆಗೆ ರಾಜ್ಯ ಪ್ರಶಸ್ತಿ ಬಂದಿತ್ತು, ಇದಲ್ಲದೆ, ಇವರ ನಿರ್ದೇಶನದ ಡೆರೆಕ್ಟರ್ ಸ್ಪೇಶಲ್, ಬುದ್ದಿವಂತ, ಏರಡನೇ ಸಲ, ಏದ್ದೇಳು ಮಂಜುನಾಥ ಸಿನಿಮಾ ಅತ್ಯುತ್ತಮವಾಗಿ ಹೊರಬಂದಿದ್ದವು.
ಮದ್ಯದಲ್ಲಿಯೇ ವಿಷ ಬೆರಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಹತ್ತು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಗೊತ್ತಾಗಿದೆ. ಇವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಾದನಾಯಕನಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕುಡಿತದ ಚಟಕ್ಕೆ ಬಿದ್ದಿದ್ದ ಗುರುಪ್ರಸಾದ ಅವರಿಗೆ ಚರ್ಮರೋಗಕ್ಕೆ ಚಿಕಿತ್ಸೆ ಪಡೆಯಲು ಕೂಡ ಹಣದ ಕೊರತೆಯಿತ್ತು ಎಂದು ಹೇಳಲಾಗುತ್ತಿದೆ. ಎರಡನೇ ಪತ್ನಿ ಸುಮಿತ್ರಾ ಸದ್ಯ ಗರ್ಭೀಣಿಯಾಗಿದ್ದು, ಅವರಿಗೆ ಒಂದು ಮಗು ಇದೆ.
ಸಾಲಗಾರರ ಕಾಟಕ್ಕೆ ಕಳೆದ ಎರಡು ಮೂರು ವರ್ಷಗಳಲ್ಲಿ ಮೂರು ನಾಲ್ಕು ಮನೆ ಚೇಂಜ್ ಮಾಡಿದ್ದರು. ಮೊದಲ ಪತ್ನಿ ಅರುಂಧತಿ ಅವರಿಗೊಂದೊಗೆ ವಿಚ್ಛೇಧನ ಪಡೆದಿದ್ದರು. ಗುರುಪ್ರಸಾದ ಅವರಿಗೆ ನಿನ್ನೆಯಷ್ಟೇ ಹುಟ್ಟಹಬ್ಬ ಇತ್ತು. ಫಿಲ್ಮಪೇರ್ ಗೌರವ ಪಡೆದಿದ್ದ ಗುರುಪ್ರಸಾದ ಆತ್ಮಹತ್ಯೆ ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ನಟ ಜಗ್ಗೇಶ, ನಟಿ ಉಮಾಶ್ರೀ, ನಾಯಕ ನಟಿ ರಚಿತಾ ಮಹಾಲಕ್ಷ್ಮಿ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
Comments