ಕಿಯಾ ಕಾರು ಕಂಪನಿಯ ವಿರುದ್ಧ ಗ್ರಾಹಕರ ಕೋರ್ಟ್ ಮೊರೆ ಹೋದಾಗ ಗ್ರಾಹಕ; ನ್ಯಾಯಾಲಯದ ಆದೇಶ ಬಂದರೂ ಕೂಡ ಕ್ಯಾರೆ ಅನ್ನದ ಕಂಪನಿ.....!!
ಕಿಯಾ ಕಾರು ಕಂಪನಿಯ ವಿರುದ್ಧ ಗ್ರಾಹಕರ ಕೋರ್ಟ್ ಮೊರೆ ಹೋದಾಗ ಗ್ರಾಹಕ; ನ್ಯಾಯಾಲಯದ ಆದೇಶ ಬಂದರೂ ಕೂಡ ಕ್ಯಾರೆ ಅನ್ನದ ಕಂಪನಿ.....!!
ಯಲಹಂಕ : ಕಿಯಾ ಕಂಪನಿಯ ಮೇಲೆ ಆಗಾಧವಾದ ಗೌರವದೊಂದಿಗೆ ಸಾಲ ಮಾಡಿ ನವೆಂಬರ್ 2020 ರಲ್ಲಿ ಕಿಯಾ ಸೋನೆಟ್ ಎಂಬ ಕಾರನ್ನು ಯಲಹಂಕ ಎಪಿಟೋಮ್ ಆಟೋಮೊಬೈಲ್ ಪ್ರೈ.ಲಿ, ಬೆಂಗಳೂರು ಡೀಲರ್ ಬಳಿ ಖರೀದಿಸಿದ್ದು.
ರವಿಕಾಂತ್ ಎನ್. ಖಾಸಗಿ ವಿದ್ಯಾಸಂಸ್ಥೆಯಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕಾರು ಸರ್ವಿಸ್ ಮಾಡಿಸಲು ಬಂದಾಗ ನನಗೆ ಆಶ್ಚರ್ಯದ ಸಂಗತಿ ಕಂಡು ಬಂತು ಅದೇನೆಂದರ, ಇಂಜಿನ್ ಆಯಿಲ್ ಹೆಚ್ಚಾಗಿತ್ತು. ಈ ಬಗ್ಗೆ ಕಂಪನಿಯವರು ಏನು ಆಗುವುದಿಲ್ಲ ನಾವು ಮತ್ತೆ ಹೊಸ ಆಯಿಲ್ ಹಾಕಿಕೊಡುತ್ತೇವೆ ಎಂದು ಹೇಳಿದರು,ನಾನು ಇರಬಹುದು ಎಂದು ನಂಬಿ ಬಂದೆ ಅದರೆ.
ಮುಂದಿನ ಸಲವು ಇಂಜಿನ್ ಆಯಿಲ್ ಪ್ರಮಾಣ ಲೀಟರ್ ಗಟ್ಟಲೇ ಹೆಚ್ಚಾಗಿತ್ತು. ತಕ್ಷಣ ನಾನು ಕಂಪನಿಯವರ ಗಮನಕ್ಕೆ ತಂದೆ, ಅವರು ಸಮಯ ಪಡೆದು ನೋಡಿದರು ಆದರೂ ಅ ಸಮಸ್ಯೆಗೆ ಪರಿಹಾರ ಕಂಡುಕೊಡಲಿಲ್ಲ, ನಾನು ಕೂಡಲೇ ಆ ಕಾರನ್ನು ಅವರ ಬಳಿಯೇ ಬಿಟ್ಟು ನನಗೆ ಹೊಸ ಇಂಜಿನ ಹಾಕಿ ನನಗೆ ಗ್ಯಾಂರಂಟಿ ನೀಡಬೇಕು ಇಲ್ಲ ಹೊಸ ಕಾರು ಕೊಡಬೇಕು ಎಂದು ಒತ್ತಾಯಿಸಿದೆ.
ಅದರೆ ಕಂಪನಿಯವರು ನಮ್ಮ ಅಳಲಿಗೆ ಕ್ಯಾರೇ ಅನ್ನಲಿಲ್ಲ, ಯಾರು ಸ್ಪಂದಿಸಲು ಸಿದ್ಧರಿರಲಿಲ್ಲ. ಅವರು ನಮ್ಮನ್ನ ನಿಕೃಷ್ಟವಾಗಿ ಕಂಡರು.
ಗ್ರಾಹಕರ ಕೋರ್ಟ್ ಮೊರೆ ಹೋದ ಗ್ರಾಹಕ
ಕೊನಗೆ ವಿಧಿಯಿಲ್ಲದೇ ಗ್ರಾಹಕರ ಕೋರ್ಟ್ ಮೊರೆ ಹೋದೆ ಹಲವು ವರ್ಷಗಳ ವಾದ ವಿವಾದ, ತನಿಖೆ, ಪರಿಶೀಲನೆಯ ನಂತರ ಘನ ನ್ಯಾಯಾಲಯವು ಅಂತಿಮವಾಗಿ ಆದೇಶ ನೀಡಿ, ಕಾರಿನ ಮೊತ್ತ ಹಾಗೂ ಅದಕ್ಕೆ ಶೇ ೯% ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿತು. ಇದರ ಜೊತೆಗೆ ಕೋರ್ಟ್ ವೆಚ್ಚವನ್ನು ಭರಿಸುವಂತೆ ಆದೇಶಿಸಿ ೪೫ ದಿನದೊಳಗೆ ಗ್ರಾಹಕರಿಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿತು. ಈ ಆದೇಶವು ದಿನಾಂಕ 10.09.2024 ರಂದು ಘನ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇಂದಿಗೆ 63 ದಿನ ಆಗಿದ್ದರು ಕೂಡ ಅವರಿಂದ ಯಾವುದೇ ಪ್ರತ್ಯುತ್ತರವಿಲ್ಲ ಹಾಗಾಗಿ ನ್ಯಾಯಾಲಯದ ಆದೇಶವನ್ನೇ ಉಲ್ಲಂಘನೆ ಮಾಡಿದ್ದಾರೆ. ಈಗಾಗಲೇ ಘನ ನ್ಯಾಯಾಲಯ ನೀಡಿದ ವಾಯಿದೆ ಮುಗಿದುಹೋಗಿದೆ.
ದಯಮಾಡಿ ನಾನು ಎಲ್ಲಾ ಪರ್ತಕರ್ತರಲ್ಲಿ ಮನವಿ ಮಾಡುವುದು ಇಷ್ಟೇ, ನಾನು ಪಟ್ಟ ಕಷ್ಟ ಇನ್ನಾರಿಗೂ ಬರಬಾರದು, ಅದಕ್ಕಾಗಿ ನಾನು ನಿಮ್ಮ ಮುಂದೆ ಬಂದಿದ್ದೇನೆ, ನಾನು ಅನುಭವಿಸುತ್ತಿರುವ ನೋವು ನನಗಷ್ಟೇ ಗೊತ್ತು, ಮಾನಸಿಕವಾಗಿ ಪಟ್ಟ ವೇದನೆ ನಿಮ್ಮ ಮುಂದೆ ವರ್ಣಿಸಲು ಅಸಾಧ್ಯ. ವರ್ಷಾನುಗಟ್ಟಲೇ ಟ್ಯಾಕ್ಸಿಯಲ್ಲಿ ಹಾಗೂ ಅವರಿವರ ಗಾಡಿಯಲ್ಲಿ ಕೆಲಸಕ್ಕೆ ತೆರಳಿದ್ದೇನೆ, ಆರೋಗ್ಯ ಸಮಸ್ಯೆಯನ್ನು ಎದುರಿಸಿದ್ದೇನೆ, ಸಂಸಾರದಲ್ಲಿ ತೊಂದರೆ ಅನುಭವಿಸಿದ್ದೇನೆ. ಮಕ್ಕಳೊಡನೆ ಸಂತಸದಿಂದ ಬೆರೆಯುವುದನ್ನು ಮರೆತಿದ್ದೇನೆ.
ನಿಶ್ಚಿಂತೆಯಿಂದ ೫ ನಿಮಿಷ ಒಂದು ಜಾಗದಲ್ಲಿ ಕೂರುವಂತಹ ಮನಸ್ಥಿತಿ ಇಂದಿಗೂ ನನ್ನಲಿಲ್ಲ. ಇವೆಲ್ಲದಕ್ಕೂ ಆ ಕಾರು, ಡೀಲರ್ (ಎಪಿಟೋಮ್ ಆಟೋಮೊಬೈಲ್ ಪ್ರೈ. ಲಿ, ಯಲಹಂಕ, ಬೆಂಗಳೂರು) ಹಾಗೂ ಈ ಕಿಯಾ ಕಾರು ಕಂಪನಿ ಕಾರಣ.
ಕೈ ಮುಗಿದು ಬೇಡುತ್ತೇನೆ ಇಂತಹ ಗ್ರಾಹಕ ವಿರೋಧಿಗಳಿಗೆ ಬುದ್ಧಿ ಕಲಿಸಬೇಕು, ಅದಕ್ಕಾಗಿ ಇಂತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .
ಸತ್ಯ ಸಾಯದಂತೆ ನೋಡಿಕೊಳ್ಳುವ ಒಂದೇ ಒಂದು ಅಂಗ ಎಂದರೆ ಅದು ಮಾಧ್ಯಮ, ಇಂದು ನಾನು ಮಾಧ್ಯಮದ ಮೊರೆ ಬಂದಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡರು.
Comments