ಲಾರಿ ಚಾಲಕನ ಅಜಾಗರೂಕತೆಗೆ ಓರ್ವ ಸ್ಥಳದಲ್ಲೆ ಬಲಿ.
ದೊಡ್ಡಬಳ್ಳಾಪುರ: ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಟೀ ಕುಡಿಯುತ್ತಿದ್ದವರಿಗೆ ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿವ ಘಟನೆ ಗೊಲ್ಲಹಳ್ಳಿ ಬಳಿ ಸಂಭವಿಸಿದೆ.
ಇಂದು ಮುಂಜಾನೆ 5ರ ಸಮಯದಲ್ಲಿ ದೊಡ್ಡಬಳ್ಳಾಪುರ – ಗೌರಿಬಿದನೂರು ನಡುವಿನ ರಾಜ್ಯ ಹೆದ್ದಾರಿ ಗೊಲ್ಲಹಳ್ಳಿ ಬಳಿಯ ಅಂಗಡಿಯಲ್ಲಿ ಟೀ ಕುಡಿಯಲು ಸ್ಕೂಟರ್ ನಿಲ್ಲಿಸಿದ್ದ ವೇಳೆ, ಗೌರಿಬಿದನೂರು ಕಡೆಯಿಂದ ಬಂದ ಸಿಮೆಂಟ್ ಬಲ್ಕರ್ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ.
ತಪ್ಪಸಿಹಳ್ಳಿ ನಿವಾಸಿ ಕಂಬಿ ನಾಗರಾಜ್, ಭದ್ರಾವತಿಯ ಅಜೀಜ್ ಎನ್ನುವವರಿಗೆ ತೀವ್ರ ಗಾಯಗಳಾಗಿವೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.
ಈ ವೇಳೆ ಸ್ಕೂಟರ್ ಬಳಿಯೇ ಇದ್ದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಲ್ಲಾರೆಡ್ಡಿ ಪಲ್ಲಿ ಗ್ರಾಮದ ಬಾಬು 35 ವರ್ಷ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Comments