ಸರಳ ವಿವಾಹವದ ನವ ಜೋಡಿ; 26 ಶಾಲೆಗಳಿಗೆ ಶುದ್ಧ ನೀರಿನ ಯಂತ್ರಗಳನ್ನು ದಾನ ಮಾಡಿದ ಜೋಡಿ....
ಹಾಸನ : ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇಂಜಿನಿಯರ್ ಶಿವಕುಮಾರ್ ಮತ್ತು ಮಂಡ್ಯದ ಸಂಗೀತಾ ಅವರು ಸರಳ ವಿವಾಹದಿಂದ 5 ಲಕ್ಷ ರೂಪಾಯಿ ಉಳಿಸಿ, 26 ಶಾಲೆಗಳಿಗೆ ಶುದ್ಧ ನೀರಿನ ಯಂತ್ರಗಳನ್ನು ದಾನ ಮಾಡಿದ್ದಾರೆ. ಹೊ.ತಿ.ಹುಚ್ಚಪ್ಪ ಅವರ ಪ್ರೇರಣೆಯಿಂದ ಈ ಕಾರ್ಯ ಮಾಡಿದ್ದಾರೆ ಎಂದು ನವಜೋಡಿ ತಿಳಿಸಿದ್ದಾರೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅತ್ಯಂತ ಅದ್ದೂರಿ ಮತ್ತು ಆಡಂಭರದ ಈ ಕಾಲದಲ್ಲಿ ಇಲ್ಲೊಂದು ಜೋಡಿ ಸರಳ ಮದುವೆಯಾಗಿದ್ದಾರೆ. ಜೊತೆಗೆ ತಮಗೆ ಬಂದ ಹಣದಿಂದ ವಿಷೇಶ ಕೊಡುಗೆ ಕೂಡ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಇಂಜಿನಿಯರ್ ಆಗಿರುವ ವಧು ಶಿವಕುಮಾರ್ ಮತ್ತು ಮಂಡ್ಯ ನಿವಾಸಿ ಸಂಗೀತಾ ಅವರು ನವೆಂಬರ್ 11ರಂದು ಸರಳ ವಿವಾಹವಾಗಿದ್ದಾರೆ. ಆ ಮೂಲಕ ರೂ. 5 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿದ್ದಾರೆ, ಈ ನವಜೋಡಿ ಉಳಿಸಿದ 5 ಲಕ್ಷಕ್ಕೂ ಹೆಚ್ಚಿನ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ್ದಾರೆ. ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕೆಲಸ ಮಾಡಲು ನವಜೋಡಿಗೆ ರೈತಪರ ಹೋರಾಟಗಾರರಾದ ತಾತ ಹೊ.ತಿ.ಹುಚ್ಚಪ್ಪ ಅವರು ಪ್ರೇರಣೆ ಎಂದಿದ್ದಾರೆ.ಹೊನ್ನವಳ್ಳಿ ಗ್ರಾಮದಲ್ಲಿ ಹೊ.ತಿ.ಹುಚ್ಚಪ್ಪ ತಾತ ದತ್ತು ಪಡೆದಿದ್ದ ಶಾಲೆ ಸೇರಿದಂತೆ ತಾಲೂಕಿನ ಕಸಬ ಹೋಬಲಿಯ 26 ಶಾಲೆಗಳಿಗೆ ಉಚಿತವಾಗಿ ಶುದ್ಧ ನೀರಿನ ಯಂತ್ರವನ್ನು ನೀಡಿದ್ದಾರೆ.
Comments