ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಶಾಸಕ ಧೀರಜ್ ಮುನಿರಾಜ್ ತಿರುಗೇಟು: ತಾಲೂಕಿನ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ: ಹಂತ ಹಂತವಾಗಿ ನಗರ ಸಭೆಯ ಅನುದಾನ ಹಂಚಿಕೆ ಮಾಡುವೆ- ನಾನು ಯಾವುದೇ ತಾರತಮ್ಯ ಮಾಡಿಲ್ಲ- ಶಾಸಕ ಧೀರಜ್ ಮುನಿರಾಜು ಸ್ಪಷ್ಟನೆ
ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಶಾಸಕ ಧೀರಜ್ ಮುನಿರಾಜ್ ತಿರುಗೇಟು: ತಾಲೂಕಿನ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ: ಹಂತ ಹಂತವಾಗಿ ನಗರ ಸಭೆಯ ಅನುದಾನ ಹಂಚಿಕೆ ಮಾಡುವೆ- ನಾನು ಯಾವುದೇ ತಾರತಮ್ಯ ಮಾಡಿಲ್ಲ- ಶಾಸಕ ಧೀರಜ್ ಮುನಿರಾಜು ಸ್ಪಷ್ಟನೆ
ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ನಗರ ಸಭೆಯ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಎಸಗಿಲ್ಲ. ಬಿಡುಡೆಯಾಗಿರುವ ಅಲ್ಪಸಂಖ್ಯಾತರ ಮೂರು ಕೋಟಿ ಅನುದಾನದಲ್ಲಿ ವಾರ್ಡ್ ವಾರು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಶಾಸಕ ಧೀರಜ್ ಮುನಿರಾಜು ತಿರುಗೇಟು ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ವಿಷ ಬೀಜ ಬಿತ್ತುವ ರಾಜಕಾರಣ ಮಾಡುತ್ತಿಲ್ಲ. ನನ್ನ ಬಗ್ಗೆ ಆರೋಪ ಮಾಡಿರುವ ನಗರ ಸಭೆ ಸದಸ್ಯ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಪಕ್ಷ ಎಲ್ಲರಿಗೂ ತಾಯಿಯಿದ್ದಂತೆ. ಆದರೆ, ನಮ್ಮ ಪಕ್ಷದ ಚಿಹ್ನೆ ಅಡಿಯಲ್ಲಿ ನಗರ ಸಭೆಗೆ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆ ಪತ್ರಿಕಾಗೋಷ್ಠಿ ನಡೆಸುವುದು ಎಷ್ಟು ಸರಿ. ಒಂದು ವೇಳೆ ಬಿಜೆಪಿಯಲ್ಲಿ ಇರುವುದಕ್ಕೆ ಆಗದಿದ್ದರೆ, ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಗೆದ್ದು ಪಕ್ಷ ನಿಷ್ಠೆ ಬಗ್ಗೆ ಮಾತನಾಬೇಕು ಎಂದು ನಗರಸಭಾ ಸದಸ್ಯ ಶಿವಶಂಕರ್ ಅವರಿಗೆ ತಿರುಗೇಟು ನೀಡಿದರು.
ನಾವು ಕಟ್ಟಿ ಬೆಳೆಸಿದ ಮನೆ(ಪಕ್ಷ)ಗೆ ಧೀರಜ್ ಸೇರಿಕೊಂಡಿದ್ದಾರೆ ಎಂಬ ಶಿವಶಂಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಮನೆ ಕಟ್ಟುವುದು? ಎಲ್.ಕೆ ಅಡ್ವಾನಿ ಕಟ್ಟಿದ ಪಕ್ಷದಲ್ಲೇ ಮೋದಿ ಪ್ರಧಾನಿಯಾಗಿದ್ದು. ನರೇಂದ್ರ ಮೋದಿ ಕಟ್ಟಿದ ಪಕ್ಷದಲ್ಲೇ ನಾನು ನಾಯಕನಾಗಿದ್ದೇನೆ. ಯಡಿಯೂರಪ್ಪ ಕಟ್ಟಿದ ಪಕ್ಷದಲ್ಲೇ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ ಮುಖ್ಯಮಂತ್ರಿಗಳಾಗಿದ್ದರು. ಅದೇ ಪಕ್ಷಕ್ಕೆ ಪ್ರಸ್ತುತ ವಿಜೇಂದ್ರಣ್ಣ ಅವರು ರಾಜ್ಯಧ್ಯಕ್ಷರಾಗಿದ್ದಾರೆ. ನನ್ನ ಬಗ್ಗೆ ಮಾತನಾಡುವಾಗಿದ್ದರೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಮಾತನಾಡಿಲಿ ಆಗ ನಾನು ಅವರ ಮಾತಿಗೆ ಉತ್ತರಿಸುವೆ ಎಂದು ಕಿಡಿಕಾರಿದರು.
ಯಾವುದೇ ಅಭಿವೃದ್ಧಿ ಕೆಲಸ ಮಾಡುವ ಮುಂಚೆ ಸೂಕ್ತವಾದ ಯೋಜನೆ ರೂಪಿಸಬೇಕಾಗುತ್ತದೆ. ತದನಂತರ ಕಾಮಗಾರಿಗಳನ್ನು ನಡೆಸಬೇಕಾಗುತ್ತದೆ. ಒಂದೇ ವರ್ಷದಲ್ಲಿ ಎಲ್ಲವನ್ನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. 5 ವರ್ಷದಲ್ಲಿ ತಾಲ್ಲೂಕಿನ ಅಭಿವೃದ್ಧಿ ಮಾಡುತ್ತೇನೆ ಎಂದರು.
ದೊಡ್ಡಬಳ್ಳಾಪುರದಲ್ಲಿ ನಾನು ಗೆದ್ದ 10 ತಿಂಗಳೊಳಗೆ 262 ಕೋಟಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ನಾನು ಯಾವುದೇ ರಾಜಕೀಯ ಮಾಡಿಲ್ಲ. ಹೊಸಕೋಟೆ, ನೆಲಮಂಗಲ, ದೇವನಹಳ್ಳಿಯಲ್ಲಿ ಗ್ಯಾರಂಟಿಗಳ ಸಮಾವೇಶ ಮಾಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಏಕೆ ಮಾಡಿಲ್ಲ. ಈ ಬಗ್ಗೆ ಯಾವ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ. ನಾಡಿನ ಮುಖ್ಯಮಂತ್ರಿಗಳಿಗೆ ಗೌರವ ಕೊಡಬೇಕೆಂದು ನಾವು ಯಾವುದೇ ಪ್ರಶ್ನೆ ಮಾಡಿಲ್ಲ. ಪ್ರತೀ ಶಂಕುಸ್ಥಾಪನೆ ಕಲ್ಲಲ್ಲೂ ಅಧ್ಯಕ್ಷತೆ ನನ್ನ ಹೆಸರಿದೆ. 36 ಕಾಮಗಾರಿಗಳು ಮತ್ತು 49 ಕಾಮಗಾರಿಗಳ ಉದ್ಘಾಟನೆ ಆಗಿದೆ. ಈ ಶಂಕುಸ್ಥಾಪನೆಯ ಕಲ್ಲುಗಳು ಕಾಣಿಸದಿದ್ದರೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ನಿನ್ನೆ ನಗರ ಹಾಗೂ ಕಸಬ ವ್ಯಾಪ್ತಿಯ ಕುಂದುಕೊರತೆ ಸಭೆ ಮಾಡಿದ್ದೇವೆ. ನಮಗೆ ಗೊತ್ತಿರುವಂತ ತಿಳುವಳಿಕೆಯಿಂದ ಎಷ್ಟು ಸಾಧ್ಯವೋ ಅಷ್ಷು ಅಭಿವೃದ್ಧಿ ಮಾಡುತ್ತಿದ್ದೇನೆ. ಅಭಿವೃದ್ಧಿ ವಿಚಾರವಾಗಿ ಸರ್ಕಾರದ ಸಂಪೂರ್ಣ ಸಹಕಾರವನ್ನು ಬೇಡುತ್ತಾ ಇದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ಬಂದರೆ ಅವರಿಗೂ ಕೊಡುತ್ತೇನೆ. ಮುಂದಿನ ವರ್ಷದಲ್ಲಿ 3 ಕೋಟಿ ಅನುದಾನ ಬಂದರೆ ಅವರಿಗೂ ಕೊಡುತ್ತೇವೆ. 3 ಕೋಟಿಯಲ್ಲಿ ಎಲ್ಲರೂ ಹಂಚಿಕೊಂಡರೆ ಯಾವುದೇ ಕಾಮಗಾರಿ ಪೂರ್ಣವಾಗಲ್ಲ ಎಂದರು.
ಕಾಮಗಾರಿಗಳ ಶಂಕುಸ್ಥಾಪನೆ ವೇಳೆ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂಬ ಕಾಂಗ್ರೆಸ್ ಸದಸ್ಯರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಶಿಷ್ಟಚಾರ ಬಿಟ್ಟು ಎಲ್ಲೂ ಹೋಗಿಲ್ಲ. ಶಿಷ್ಟಾಚಾರ ಪ್ರಕಾರ ಕರೆಯುವುದು ಅಧಿಕಾರಿಗಳ ಕೆಲಸ. ಕಾಂಗ್ರೆಸ್ ಸದಸ್ಯರ ವಾರ್ಡ್ ಗಳ ಸಮಸ್ಯೆಗಳನ್ನು ಆಲಿಸಿ ಅಷ್ಟು ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತೇನೆ. ನಾನು ಮುಕ್ತವಾಗಿದ್ದೇನೆ, ನಾನೇ ಖುದ್ದಾಗಿ ಅವರ ಸಮಸ್ಯೆಗಳನ್ನು ಕೇಳಿ ಪಡೆದು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
Comments