ಅತ್ಯಾಚಾರ ಕೇಸ್‌ನಲ್ಲಿ ಶಾಸಕ ಮುನಿರತ್ನಗೆ ಜಾಮೀನು! ಪರಪ್ಪನ ಅಗ್ರಹಾರದಿಂದ ಇದೇ ರಿಲೀಸ್?
ಬೆಂಗಳೂರು: ಅತ್ಯಾಚಾರ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಎದುರಿಸಿ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಬಿಜೆಪಿ ಶಾಸಕ (BJP MLA) ಮುನಿರತ್ನಗೆ (Muniratna) ರಿಲೀಫ್ ಸಿಕ್ಕಿದೆ. ಅತ್ಯಾಚಾರ ಕೇಸ್‌ನಲ್ಲಿ ಮುನಿರತ್ನಗೆ ಕೋರ್ಟ್ ಜಾಮೀನು (Bail) ಮಂಜೂರು ಮಾಡಿದೆ. ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ (Bengaluru) 42ನೇ ಎಸಿಎಂಎಂ ಕೋರ್ಟ್ (ACMM Court) ಬೇಲ್ ನೀಡಿದೆ. ಇನ್ನು ಇಂದೇ ಜಾಮೀನು ಪ್ರಕ್ರಿಯೆ ನಡೆಯಲಿದ್ದು, ಇಂದೇ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗೋ ಸಾಧ್ಯತೆ ಇದೆ.
ಸಾಕ್ಷಿಗಳ ವಿಚಾರಣೆ ಮುಂದುವರೆಸಿದ ಎಸ್‌ಐಟಿ
ಮುನಿರತ್ನ ವಿರುದ್ಧ ದೂರು ನೀಡಿರುವ ಸಂತ್ರಸ್ತ ಮಹಿಳೆಯಿಂದಲೇ ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ದಾರೆ ಅನ್ನೋ ಆರೋಪ ಇದೆ. ಈ ಹಿನ್ನೆಲೆ SIT ಸಾಕ್ಷ್ಯಗಳ ವಿಚಾರಣೆ ಮುಂದುವರೆಸಿದೆ. ಮತ್ತೊಂದೆಡೆ DNA ಪರೀಕ್ಷೆಗೆ ರಕ್ತದ ಮಾದರಿ ಸಂಗ್ರಹಿಸಲು SIT ಅರ್ಜಿ ಸಲ್ಲಿಸಿದರೆ, ಮುನಿರತ್ನ ಪರ ವಕೀಲರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದಾರೆ.
ಇಂದೇ ರಿಲೀಸ್ ಆಗ್ತಾರಾ ಮುನಿರತ್ನ?
ಶಾಸಕ ಮುನಿರತ್ನ ವಿರುದ್ದ ರೇಪ್ ಕೇಸ್‌ನಲ್ಲಿ ಜಾಮೀನು ಮಂಜೂರು ಬೆನ್ನಲ್ಲೇ ಶ್ಯೂರಿಟಿ ಪ್ರಕ್ರಿಯೆ ಶುರುವಾಗಿದೆ. ಬಹುತೇಕ ಮುನಿರತ್ನ ಇಂದೇ ಜೈಲಿಂದ ಬಿಡುಗಡೆ ಆಗೋ ಸಾಧ್ಯತೆ ಇದೆ.
ಡಿಎನ್‌ಎ ಪರೀಕ್ಷೆ ಆದೇಶ ಅಕ್ಟೋಬರ್ 21ಕ್ಕೆ
ಇನ್ನು ಮುನಿರತ್ನ ಡಿಎನ್ ಎ ಸ್ಯಾಂಪಲ್ ಪರೀಕ್ಷೆಗೆ ಪಡೆಯುವ ಅರ್ಜಿ ಆದೇಶ ಇದೇ ಅಕ್ಟೋಬರ್ 21ನೇ ತಾರೀಖು ನಡೆಯಲಿದೆ.. 42ನೇ ಎಸಿಎಂಎಂ ಕೋರ್ಟ್ ನಲ್ಲಿ ಅರ್ಜಿ ಆದೇಶ ಹೊರಬೀಳಲಿದೆ.. ಡಿಎನ್ ಎ ಸ್ಯಾಂಪಲ್ ಪಡೆಯಲು ಎಸ್‌ಐಟಿ ಅರ್ಜಿ ಹಾಕಿದ್ದರೆ, ಈ ಅರ್ಜಿಗೆ ಮುನಿರತ್ನ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಸದ್ಯ ವಾದ ಪ್ರತಿವಾದ ಮುಗಿದಿದ್ದು, ಇದೇ ಅಕ್ಟೋಬರ್ 21ನೇ ತಾರೀಖು ಅರ್ಜಿ ಆದೇಶ ಬರಲಿದೆ.
ಈಗಾಗಲೇ ಮೂವರಿಗೆ ನಿರೀಕ್ಷಣಾ ಜಾಮೀನು
ಇನ್ನು, ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ. ಲೋಹಿತ್, ಕಿರಣ್ ಹಾಗೂ ಮಂಜುನಾಥ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ಅವರು ಮುನಿರತ್ನ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದರು. ರಾಜರಾಜೇಶ್ವರಿನಗರ ಶಾಸಕರು ಗುತ್ತಿಗೆದಾರನಿಂದ ಲಂಚ ಕೇಳುವ ಸಂದರ್ಭದಲ್ಲಿ ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದರು.
ಇನ್ನು, ಈ ಪ್ರಕರಣದಲ್ಲಿ ಮುನಿರತ್ನ ಅವರಿಗೆ ಜಾಮೀನು ಮಂಜೂರು ಆಗಿದ್ದು, ಸದ್ಯ ಅವರು ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದು, ಕೋರ್ಟ್ ನ್ಯಾಯಾಂಗ ವಶಕ್ಕೆ ನೀಡಿತ್ತು. ಕಗ್ಗಲೀಪರ ಪೊಲೀಸ್ ಠಾಣೆಯಲ್ಲಿ ಸುಮಾರು 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಶಾಸಕರ ಮೇಲೆ ಎಫ್ಐಆರ್ ದಾಖಲಾಗಿತ್ತು.
Comments