ಸತ್ಯನಾರಾಯಣ ವ್ರತ !

 ಸತ್ಯನಾರಾಯಣ ವ್ರತ ! 

ಸತ್ಯನಾರಾಯಣ ವಿಷ್ಣುವಿನ ಒಂದು ರೂಪ. ಸತ್ಯನಾರಾಯಣನು ನವಗ್ರಹಗಳಿಗೆ ಅಧಿಪತಿ, ನವಗ್ರಹಗಳನ್ನು ನಿಯಂತ್ರಿಸುತ್ತಾನೆ.  ನಮ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಇದೆ.



ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ. ಆದ್ದರಿಂದ ಸತ್ಯನಾರಾಯಣ ವ್ರತವನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ.




 ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ ಕೆಲಸ/ವ್ಯಾಪಾರ ಶುರು ಮಾಡುವ ಮುನ್ನ, ವಿದ್ಯಾಭ್ಯಾಸ/ಪರೀಕ್ಷೆಯ ಸಮಯ ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು ಮಾಡುತ್ತಾರೆ.


ತಮ್ಮ ಕಾರ್ಯಗಳಲ್ಲಿ ಯಶಸ್ಸು ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ. ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ ಮಾಡಬೇಕುಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ ಪೂಜೆಯನ್ನು ಮಾಡಬಹುದು.



ಪೂಜಾ ವಿಧಿ ಮತ್ತು ಸಾಮಗ್ರಿಗಳು: 

ಮೊದಲು ಗಣಪತಿ ಪೂಜೆ ಮಾಡಬೇಕು . ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ ಸತ್ಯನಾರಾಯಣನ ಪೂಜೆ ಮಾಡಬೇಕು. ಶ್ರೀ ಸತ್ಯನಾರಾಯಣ ಅಷ್ಟೋತ್ತರ ಇಲ್ಲ


. ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ ಪೂಜೆಯನ್ನು ಮಾಡಬೇಕು. ನೈವೇದ್ಯಕ್ಕೆ ಸಪಾತ ಭಕ್ಷ್ಯ/ಸಪಾದ ಭಕ್ಷ್ಯ(ಕೇಸರಿ ಭಾತ್ /ಸಜ್ಜಿಗೆ)ಮಾಡಿಕೊಳ್ಳಬೇಕು.ಸಪಾದ ಭಕ್ಷ್ಯ ಮಾಡುವ ವಿಧಾನ ಇಲ್ಲಿದೆ. ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು, ಬಾಳೆಹಣ್ಣು ಉಪಯೋಗಿಸಿ ಮಾಡಬೇಕು.

ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ ಪ್ರಾಸದ ಸ್ವೀಕಾರ ಮಾಡಿ. ಪೂಜೆಗೆ ಇಟ್ಟಿರುವ ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಡಬೇಕು.


ಶ್ರೀ ಸತ್ಯನಾರಾಯಣ ಅಷ್ಟೋತ್ತರ ಶತನಾಮಾವಳಿಃ :

ಓಂ ಸತ್ಯದೇವಾಯ ನಮಃ |

ಓಂ ಸತ್ಯಾತ್ಮನೇ ನಮಃ |

ಓಂ ಸತ್ಯಭೂತಾಯ ನಮಃ |

ಓಂ ಸತ್ಯಪುರುಷಾಯ ನಮಃ |

ಓಂ ಸತ್ಯನಾಥಾಯ ನಮಃ |

ಓಂ ಸತ್ಯಸಾಕ್ಷಿಣೇ ನಮಃ |

ಓಂ ಸತ್ಯಯೋಗಾಯ ನಮಃ |

ಓಂ ಸತ್ಯಜ್ಞಾನಾಯ ನಮಃ |

ಓಂ ಸತ್ಯಜ್ಞಾನಪ್ರಿಯಾಯ ನಮಃ | ೯


ಓಂ ಸತ್ಯನಿಧಯೇ ನಮಃ |

ಓಂ ಸತ್ಯಸಂಭವಾಯ ನಮಃ |

ಓಂ ಸತ್ಯಪ್ರಭವೇ ನಮಃ |

ಓಂ ಸತ್ಯೇಶ್ವರಾಯ ನಮಃ |

ಓಂ ಸತ್ಯಕರ್ಮಣೇ ನಮಃ |

ಓಂ ಸತ್ಯಪವಿತ್ರಾಯ ನಮಃ |

ಓಂ ಸತ್ಯಮಂಗಳಾಯ ನಮಃ |

ಓಂ ಸತ್ಯಗರ್ಭಾಯ ನಮಃ |

ಓಂ ಸತ್ಯಪ್ರಜಾಪತಯೇ ನಮಃ | ೧೮


ಓಂ ಸತ್ಯವಿಕ್ರಮಾಯ ನಮಃ |

ಓಂ ಸತ್ಯಸಿದ್ಧಾಯ ನಮಃ |

ಓಂ ಸತ್ಯಾಽಚ್ಯುತಾಯ ನಮಃ |

ಓಂ ಸತ್ಯವೀರಾಯ ನಮಃ |

ಓಂ ಸತ್ಯಬೋಧಾಯ ನಮಃ |

ಓಂ ಸತ್ಯಧರ್ಮಾಯ ನಮಃ |

ಓಂ ಸತ್ಯಾಗ್ರಜಾಯ ನಮಃ |

ಓಂ ಸತ್ಯಸಂತುಷ್ಟಾಯ ನಮಃ |

ಓಂ ಸತ್ಯವರಾಹಾಯ ನಮಃ | ೨೭


ಓಂ ಸತ್ಯಪಾರಾಯಣಾಯ ನಮಃ |

ಓಂ ಸತ್ಯಪೂರ್ಣಾಯ ನಮಃ |

ಓಂ ಸತ್ಯೌಷಧಾಯ ನಮಃ |

ಓಂ ಸತ್ಯಶಾಶ್ವತಾಯ ನಮಃ |

ಓಂ ಸತ್ಯಪ್ರವರ್ಧನಾಯ ನಮಃ |

ಓಂ ಸತ್ಯವಿಭವೇ ನಮಃ |

ಓಂ ಸತ್ಯಜ್ಯೇಷ್ಠಾಯ ನಮಃ |

ಓಂ ಸತ್ಯಶ್ರೇಷ್ಠಾಯ ನಮಃ |

ಓಂ ಸತ್ಯವಿಕ್ರಮಿಣೇ ನಮಃ | ೩೬


ಓಂ ಸತ್ಯಧನ್ವಿನೇ ನಮಃ |

ಓಂ ಸತ್ಯಮೇಧಾಯ ನಮಃ |

ಓಂ ಸತ್ಯಾಧೀಶಾಯ ನಮಃ |

ಓಂ ಸತ್ಯಕ್ರತವೇ ನಮಃ |

ಓಂ ಸತ್ಯಕಾಲಾಯ ನಮಃ |

ಓಂ ಸತ್ಯವತ್ಸಲಾಯ ನಮಃ |

ಓಂ ಸತ್ಯವಸವೇ ನಮಃ |

ಓಂ ಸತ್ಯಮೇಘಾಯ ನಮಃ |

ಓಂ ಸತ್ಯರುದ್ರಾಯ ನಮಃ | ೪೫


ಓಂ ಸತ್ಯಬ್ರಹ್ಮಣೇ ನಮಃ |

ಓಂ ಸತ್ಯಾಽಮೃತಾಯ ನಮಃ |

ಓಂ ಸತ್ಯವೇದಾಂಗಾಯ ನಮಃ |

ಓಂ ಸತ್ಯಚತುರಾತ್ಮನೇ ನಮಃ |

ಓಂ ಸತ್ಯಭೋಕ್ತ್ರೇ ನಮಃ |

ಓಂ ಸತ್ಯಶುಚಯೇ ನಮಃ |

ಓಂ ಸತ್ಯಾರ್ಜಿತಾಯ ನಮಃ |

ಓಂ ಸತ್ಯೇಂದ್ರಾಯ ನಮಃ |

ಓಂ ಸತ್ಯಸಂಗರಾಯ ನಮಃ | ೫೪


ಓಂ ಸತ್ಯಸ್ವರ್ಗಾಯ ನಮಃ |

ಓಂ ಸತ್ಯನಿಯಮಾಯ ನಮಃ |

ಓಂ ಸತ್ಯಮೇಧಾಯ ನಮಃ |

ಓಂ ಸತ್ಯವೇದ್ಯಾಯ ನಮಃ |

ಓಂ ಸತ್ಯಪೀಯೂಷಾಯ ನಮಃ |

ಓಂ ಸತ್ಯಮಾಯಾಯ ನಮಃ |

ಓಂ ಸತ್ಯಮೋಹಾಯ ನಮಃ |

ಓಂ ಸತ್ಯಸುರಾನಂದಾಯ ನಮಃ |

ಓಂ ಸತ್ಯಸಾಗರಾಯ ನಮಃ | ೬೩


ಓಂ ಸತ್ಯತಪಸೇ ನಮಃ |

ಓಂ ಸತ್ಯಸಿಂಹಾಯ ನಮಃ |

ಓಂ ಸತ್ಯಮೃಗಾಯ ನಮಃ |

ಓಂ ಸತ್ಯಲೋಕಪಾಲಕಾಯ ನಮಃ |

ಓಂ ಸತ್ಯಸ್ಥಿತಾಯ ನಮಃ |

ಓಂ ಸತ್ಯದಿಕ್ಪಾಲಕಾಯ ನಮಃ |

ಓಂ ಸತ್ಯಧನುರ್ಧರಾಯ ನಮಃ |

ಓಂ ಸತ್ಯಾಂಬುಜಾಯ ನಮಃ |

ಓಂ ಸತ್ಯವಾಕ್ಯಾಯ ನಮಃ | ೭೨


ಓಂ ಸತ್ಯಗುರವೇ ನಮಃ |

ಓಂ ಸತ್ಯನ್ಯಾಯಾಯ ನಮಃ |

ಓಂ ಸತ್ಯಸಾಕ್ಷಿಣೇ ನಮಃ |

ಓಂ ಸತ್ಯಸಂವೃತಾಯ ನಮಃ |

ಓಂ ಸತ್ಯಸಂಪ್ರದಾಯ ನಮಃ |

ಓಂ ಸತ್ಯವಹ್ನಯೇ ನಮಃ |

ಓಂ ಸತ್ಯವಾಯುವೇ ನಮಃ |

ಓಂ ಸತ್ಯಶಿಖರಾಯ ನಮಃ |

ಓಂ ಸತ್ಯಾನಂದಾಯ ನಮಃ | ೮೧


ಓಂ ಸತ್ಯಾಧಿರಾಜಾಯ ನಮಃ |

ಓಂ ಸತ್ಯಶ್ರೀಪಾದಾಯ ನಮಃ |

ಓಂ ಸತ್ಯಗುಹ್ಯಾಯ ನಮಃ |

ಓಂ ಸತ್ಯೋದರಾಯ ನಮಃ |

ಓಂ ಸತ್ಯಹೃದಯಾಯ ನಮಃ |

ಓಂ ಸತ್ಯಕಮಲಾಯ ನಮಃ |

ಓಂ ಸತ್ಯನಾಲಾಯ ನಮಃ |

ಓಂ ಸತ್ಯಹಸ್ತಾಯ ನಮಃ |

ಓಂ ಸತ್ಯಬಾಹವೇ ನಮಃ | ೯೦


ಓಂ ಸತ್ಯಮುಖಾಯ ನಮಃ |

ಓಂ ಸತ್ಯಜಿಹ್ವಾಯ ನಮಃ |

ಓಂ ಸತ್ಯದಂಷ್ಟ್ರಾಯ ನಮಃ |

ಓಂ ಸತ್ಯನಾಸಿಕಾಯ ನಮಃ |

ಓಂ ಸತ್ಯಶ್ರೋತ್ರಾಯ ನಮಃ |

ಓಂ ಸತ್ಯಚಕ್ಷಸೇ ನಮಃ |

ಓಂ ಸತ್ಯಶಿರಸೇ ನಮಃ |

ಓಂ ಸತ್ಯಮುಕುಟಾಯ ನಮಃ |

ಓಂ ಸತ್ಯಾಂಬರಾಯ ನಮಃ | ೯೯


ಓಂ ಸತ್ಯಾಭರಣಾಯ ನಮಃ |

ಓಂ ಸತ್ಯಾಯುಧಾಯ ನಮಃ |

ಓಂ ಸತ್ಯಶ್ರೀವಲ್ಲಭಾಯ ನಮಃ |

ಓಂ ಸತ್ಯಗುಪ್ತಾಯ ನಮಃ |

ಓಂ ಸತ್ಯಪುಷ್ಕರಾಯ ನಮಃ |

ಓಂ ಸತ್ಯಧೃತಾಯ ನಮಃ |

ಓಂ ಸತ್ಯಭಾಮಾರತಾಯ ನಮಃ |

ಓಂ ಸತ್ಯಗೃಹರೂಪಿಣೇ ನಮಃ |

ಓಂ ಸತ್ಯಪ್ರಹರಣಾಯುಧಾಯ ನಮಃ | ೧೦೮


ಇತಿ ಸತ್ಯನಾರಾಯಣಾಷ್ಟೋತ್ತರಶತ ನಾಮಾವಳಿಃ ||

ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವುದೇಕೆ ? ಇದರ ಮಹತ್ವವೇನು ?

ದೇವರ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ. ಹಲವು ಆಚರಣೆಗಳ ಪೈಕಿ ಪ್ರಾರ್ಥನೆ, ಪೂಜೆ, ವ್ರತ ಕೂಡ ಒಂದು ಮಾರ್ಗ. ಕಷ್ಟ-ಸುಖ ಎಂತಹ ಸಮಯವಾದರೂ ಅದಕ್ಕೆ ದೇವರ ಕೃಪೆ ಬೇಕು. ಕೆಟ್ಟ ಸಮಯವಿದ್ದರೆ ಅದನ್ನು ದೂರ ಮಾಡುವಂತೆ. ಹಾಗೂ ಒಳ್ಳೆಯ ಕಾರ್ಯಕ್ಕೂ ಮುನ್ನ ಯಾವುದೇ ಅಡೆ-ತಡೆಗಳು ಬಾರದಿರಲು ಹಿಂದೂಗಳು ಹೆಚ್ಚಾಗಿ ನಡೆಸುವ ಪೂಜೆಯೆಂದರೆ ಸತ್ಯನಾರಾಯಣ ಸ್ವಾಮಿ ಪೂಜೆ. ಇದನ್ನು ಇದೇ ವೇಳೆ ನಡೆಸಬೇಕು ಎಂಬ ಯಾವುದೇ ಷರತ್ತುಗಳಿಲ್ಲ. ಸಾಮಾನ್ಯವಾಗಿ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸುತ್ತಾರೆ. ಏಕಾದಶಿ ತಿಥಿ ಮತ್ತು ಪೂರ್ಣಿಮಾ ತಿಥಿ ದಿನವನ್ನು ಸತ್ಯನಾರಾಯಣ ದೇವರಿಗೆ ಪೂಜೆ ಸಲ್ಲಿಸಲು ಸೂಕ್ತವೆಂದು ಪರಿಗಣಿಸಲಾಗಿದೆ.        ‌      ‌    ‌      


ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಒಮ್ಮೆ ಈ ಪೂಜೆಯನ್ನು ಮಾಡಬೇಕು. ಹಾಗೂ ಕೆಲವರು ದೇವರಲ್ಲಿ ಬೇಡಿಕೆ ಇಟ್ಟು ಅದು ಒಳ್ಳೆ ಫಲ ಕೊಟ್ಟಾಗಲು ಸತ್ಯನಾರಾಯಣ ಪೂಜೆಯನ್ನು ಮಾಡಿಸುತ್ತಾರೆ.   


         ‌                                                                                                                                                     ಸತ್ಯನಾರಾಯಣ ಎನ್ನುವುದು ಶ್ರೀ ವಿಷ್ಣುವಿನ ಇನ್ನೊಂದು ಹೆಸರು. ಯಾವಾಗಲೂ ಸತ್ಯವನ್ನೇ ಸಂಕೇತಿಸುವ ನಾರಾಯಣ ಎಂದೂ ಸಹ ಹೇಳಲಾಗುತ್ತದೆ. ಭಗವಂತನ ಈ ಸಾಕಾರವು ಸತ್ಯ ಮತ್ತು ಸತ್ಯವನ್ನು ಮಾತ್ರ ಪ್ರತಿನಿಧಿಸುತ್ತದೆ. ಆದ್ದರಿಂದ, ಸುಳ್ಳು, ವಂಚನೆ ಅಥವಾ ದ್ವೇಷವನ್ನು ಅಳವಡಿಸಿಕೊಳ್ಳುವ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.


ಸತ್ಯನಾರಾಯಣ ಸ್ವಾಮಿ ಪೂಜೆ ವಿಧಾನ

ಜ್ಯೋತಿಷಿಗಳ ಪ್ರಕಾರ ಸತ್ಯನಾರಾಯಣ ಪೂಜೆಯ ದಿನಕ್ಕೂ ಮೊದಲು ಉಪವಾಸವನ್ನು ಮಾಡಬೇಕು. ಹಾಗೂ ಪೂಜೆಯ ದಿನದಂದು ಪೂಜಾ ಸ್ಥಳವನ್ನು ಹಸುವಿನ ಸಗಣಿಯ ಮೂಲಕ ಪವಿತ್ರಗೊಳಿಸಿಕೊಳ್ಳಬೇಕು. ಬಳಿಕ ಮೇಜನಿಟ್ಟು ಅದರ ಮೇಲೆ ವಿಷ್ಟುವಿನ ಫೋಟೋ ಅಥವಾ ಪ್ರತಿಮೆಯನ್ನಾಗಲಿ ಇಡಬೇಕು. ನಾಲ್ಕೂ ಬದಿಗಳಲ್ಲಿ ಬಾಳೆಗಿಡವನ್ನು ಕಟ್ಟಬೇಕು.


ಸತ್ಯನಾರಾಯಣ ಪೂಜೆಯನ್ನು ಮಾಡುವ ಮೊದಲು ಗಣಪತಿಯನ್ನು ಪೂಜಿಸಿ, ನಂತರ ಇಂದ್ರಾದಿ, ದಶದಿಕ್ಪಾಲಕರನ್ನು, 5 ಲೋಕಪಾಲರನ್ನು, ರಾಮ, ಲಕ್ಷ್ಮಣ, ಸೀತೆಯನ್ನು ಸೇರಿದಂತೆ ರಾಧಾ, ಕೃಷ್ಣರನ್ನೂ ಕೂಡ ಪೂಜಿಸಬೇಕು. ತದನಂತರ ಸತ್ಯನಾರಾಯಣ ಅಥವಾ ವಿಷ್ಣುವನ್ನು ಪೂಜಿಸಿ. ಸತ್ಯನಾರಾಯಣನನ್ನು ಪೂಜಿಸಿದ ನಂತರ ಲಕ್ಷ್ಮೀ ಮಾತೆಯನ್ನು ಹಾಗೂ ಪೂಜೆಯ ಕೊನೆಯಲ್ಲಿ ಪರಶಿವನನ್ನು ಮತ್ತು ಬ್ರಹ್ಮದೇವನನ್ನು ಪೂಜಿಸಬೇಕು. ಪೂಜೆ ಮುಗಿದ ನಂತರ ಎಲ್ಲಾ ದೇವರಿಗೆ ಆರತಿ ಬೆಳಗಿ, ಚರಣಾಮೃತವನ್ನು ನೀಡಬೇಕು.


ಒಂದುವೇಳೆ ಸತ್ಯನಾರಾಯಣ ಪೂಜೆಯಲ್ಲಿ ಪುರೋಹಿತರು ಭಾಗಿಯಾಗಿದ್ದರೆ ಅವರಿಗೆ ದಕ್ಷಿಣೆ ಮತ್ತು ಬಟ್ಟೆಗಳನ್ನು ದಾನಮಾಡುವುದರೊಂದಿಗೆ ಆಹಾರ ಪದಾರ್ಥಗಳನ್ನು ನೀಡಬೇಕು. ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡವರು ತಾವು ಪ್ರಸಾದ ಊಟವನ್ನು ಸ್ವೀಕರಿಸುವ ಮೊದಲು ಪುರೋಹಿತರ ಚರಣಗಳಿಗೆ ಎರಗಿ ಆಶೀರ್ವಾದವನ್ನು ಪಡೆಯಬೇಕು.


ಸತ್ಯನಾರಾಯಣ ಪೂಜೆಯನ್ನು ಮಾಡುವ ಮಹತ್ವ

ಮೇಲೆ ಹೇಳಿದಂತೆ, ಯಾವುದೇ ವ್ಯಕ್ತಿಯು ಯಾವುದೇ ದಿನದಂದು ಸತ್ಯನಾರಾಯಣ ಪೂಜೆಯನ್ನು ಮಾಡಬಹುದು. ಈ ಪೂಜೆಯ ವೇಳೆ ಸಾಧ್ಯವಾದಷ್ಟು ಜನರನ್ನು ಆಹ್ವಾನಿಸಿ, ಸತ್ಯನಾರಾಯಣ ಕಥೆಯನ್ನು ಪಠಿಸುವುದು ಮತ್ತು ಭಗವಂತನಿಗೆ ನೈವೇದ್ಯವಿಟ್ಟು ಅದನ್ನು ಭಕ್ತರಿಗೆ ನೀಡುವ ಕಾಯಕವಾಗಿದೆ.


ಒಂದು ವ್ರತವನ್ನು ಇಟ್ಟುಕೊಂಡು ಭಕ್ತಿಯಿಂದ ಪೂಜೆಯನ್ನು ಮಾಡುವುದರಿಂದ ಎಲ್ಲಾ ತೊಂದರೆಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಿಕೆ ಇದೆ. ಹೀಗೆ ಮಾಡುವ ಮೂಲಕ, ಭಕ್ತರು ದೇವರ ಕರುಣೆಗೆ ಪಾತ್ರರಾಗುತ್ತಾರೆ. ಸತ್ಯನಾರಾಯಣ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸುತ್ತದೆ. ಪ್ರತೀ ಶುಭ ಕಾರ್ಯಕ್ಕೂ ಮುನ್ನ ಒಮ್ಮೆ ಈ ಪೂಜೆಯನ್ನು ಮಾಡಬೇಕು. ಹಾಗೂ ಕೆಲವರು ದೇವರಲ್ಲಿ ಬೇಡಿಕೆ ಇಟ್ಟು ಅದು ಒಳ್ಳೆ ಫಲ ಕೊಟ್ಟಾಗಲು ಸತ್ಯನಾರಾಯಣ ಪೂಜೆಯನ್ನು ಮಾಡಿಸುತ್ತಾರೆ.


ಜಾತಿ, ಮತ, ವಯಸ್ಸು ಮತ್ತು ಲಿಂಗ ಭೇದವಿಲ್ಲದ ಯಾರಾದರೂ ತಮ್ಮ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಪೂಜೆಯನ್ನು ನಡೆಸಬಹುದು. ನಿಶ್ಚಿತಾರ್ಥ ಸಮಾರಂಭ ಅಥವಾ ಮದುವೆಗೂ ಮುನ್ನವೂ ಕಾರ್ಯ ಸಫಲವಾಗಿ ನಡೆಯಲಿ ಎಂದೂ ಸಹ ಈ ಪೂಜೆಯನ್ನು ಮಾಡುತ್ತಾರೆ.


ಸತ್ಯನಾರಾಯಣ ಪೂಜೆ ಹಿಂದಿರುವ ಕಥೆ

ಒಮ್ಮೆ ನಾರದ ಮುನಿಗಳು ಭೂಮಿಯ ಮೇಲಿನ ಜನರು ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಯಾವುದಾದರೂ ಉತ್ತಮ ಮಾರ್ಗವಿದೆಯೇ ಎಂದು ವಿಷ್ಣುವಿನಲ್ಲಿ ಕೇಳುತ್ತಾರೆ. ಆಗ ಮಹಾವಿಷ್ಣು, ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಕಷ್ಟವು ದೂರಾಗುತ್ತದೆಂದು ಹೇಳುತ್ತಾರಂತೆ. ಹೀಗಾಗಿ ಅಂದಿನಿಂದ ಇಂದಿನ ವರೆಗೂ ಸತ್ಯನಾರಾಯಣ ಪೂಜೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗಿದೆ.



ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದರೆ ದೊರೆಯುವ ಪ್ರಯೋಜನಗಳು

ಹಿಂದೂ ಧರ್ಮದಲ್ಲಿ ಸತ್ಯನಾರಾಯಣ ಪೂಜೆಗೆ ತುಂಬಾನೇ ಮಹತ್ವವಿದೆ. ಮನೆ ಗೃಹ ಪ್ರವೇಶವಿರಲಿ, ಯಾವುದೇ ಶುಭ ಕಾರ್ಯವಿರಲಿ ಸತ್ಯನಾರಾಯಣ ಪೂಜೆ ಮಾಡಲಾಗುವುದು. ಪ್ರತಿ ತಿಂಗಳು ಸತ್ಯನಾರಾಯಣ ಪೂಜೆ ಬರುತ್ತದೆ, ಅದನ್ನು ಆಚರಣೆ ಮಾಡುವುದರಿಂದ ಮನೆಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು. ಪ್ರತಿ ತಿಂಗಳು ಹುಣ್ಣಿಮೆಗೆ ಸತ್ಯನಾರಾಯಣ ಪೂಜೆ ಮಾಡಲಾಗುವುದು. ಹಾಗಂತ ಅದೇ ದಿನ ಮಾಡಬೇಕೆಂದೇನಿಲ್ಲ.


ಯಾವುದೇ ದಿನದಲ್ಲೂ ಸತ್ಯನಾರಾಯಣ ಪೂಜೆ ಮಾಡಬಹುದು. ಸತ್ಯನಾರಾಯಣ ಪೂಜೆ ಮಾಡುವವರು ಉಪವಾಸವಿದ್ದು ವ್ರತ ನಿಯಮಗಳನ್ನು ಪಾಲಿಸಿ ಸತ್ಯನಾರಾಯಣನಿಗೆ ಪೂಜೆ ಸಲ್ಲಿಸಬೇಕು. ಮನೆಯಲ್ಲಿ ವರ್ಷಕ್ಕೊಮ್ಮೆಯಾದರೂ ಪುರೋಹಿತರನ್ನು ಕರೆಸಿ ಸತ್ಯನಾರಾಯಣ ಪೂಜೆ ಮಾಡಿಸುವುದು ಒಳ್ಳೆಯದು ಎಂದು ಹೇಳಲಾಗುವುದು.


                ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ:


             ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳು :-


               ಯಾವುದೇ ಶುಭ ಕಾರ್ಯಕ್ಕೆ ಮುನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ.


             ಮನೆಗೆ ಬಂದ ಅತಿಥಿಗಳಿಗೆ ಸತ್ಯನಾರಾಯಣ ಪೂಜೆಯ ಪ್ರಸಾದ ಹಂಚುವುದರಿಂದ ಅವರೂ ಕೂಡ ಒಳ್ಳೆಯ ಮನಸ್ಸಿನಿಂದ ನಮ್ಮನ್ನು ಹರಸುತ್ತಾರೆ ಹಾಗೂ ಶುಭ ಹಾರೈಸುತ್ತಾರೆ.


             ಮದುವೆ, ನಿಶ್ಚಿತಾರ್ಥ ಈ ರೀತಿಯ ಕಾರ್ಯಕ್ರಮದ ಮುಂಚೆ ಸತ್ಯನಾರಾಯಣ ಪೂಜೆ ಮಾಡಿಸುವುದರಿಂದ ಹೊಸ ಜೋಡಿಯ ಬದುಕಿಗೆ ಒಳಿತಾಗುತ್ತದೆ.


            ಗೃಹ ಪ್ರವೇಶ ಮಾಡುವಾಗ ಈ ಪೂಜೆ ಮಾಡುವುದರಿಂದ ಮನೆಗೆ ಒಳಿತಾಗುತ್ತದೆ.


          ಯಾವುದಾದರೂ ವ್ಯವಹಾರ ಮಾಡುವ ಮುನ್ನ ಸತ್ಯನಾರಾಯಣ ಪೂಜೆ ಮಾಡಿಸಿದರೆ ಅದರಿಂದ ಮಾಡುವ ವ್ಯವಹಾರದಲ್ಲಿ ಯಶಸ್ಸು ಲಭಿಸುವುದು.


         ಗಣಪತಿ ಪೂಜೆ ಮಾಡಿದ ಬಳಿಕವಷ್ಟೇ ಸತ್ಯನಾರಾಯಣ ಪೂಜೆ ಮಾಡಿಸಬೇಕು.


"ಸತ್ಯನಾರಾಯಣ ವ್ರತ ಮಾಡುವುದರಿಂದ ಧಾರ್ಮಿಕ ಹಾಗೂ ಆರೋಗ್ಯಕರ ಪ್ರಯೋಜನಗಳಿವೆ.."


    ಸತ್ಯನಾರಾಯಣ ಪೂಜೆ ಮಾಡುವುದರಿಂದ ದೊರೆಯುವ ಧಾರ್ಮಿಕ ಪ್ರಯೋಜನಗಳು ‌:-  ‌     ‌                                                                                                                                               

 ಸತ್ಯವಂತರಾಗಿ ಬಾಳುವಂತೆ ಪ್ರೇರೇಪಿಸುತ್ತದೆ.


 ಒಳ್ಳೆಯದು-ಕೆಟ್ಟದು ನಡುವಿನ ವ್ಯತ್ಯಾಸ ತಿಳಿಯುವಷ್ಟು ಪಕ್ವತೆ ಬೆಳೆಯುತ್ತದೆ. ನಮ್ಮಲ್ಲಿ ಒಳ್ಳೆಯತನ ಹೆಚ್ಚಾಗುತ್ತದೆ.


 ನಾವು ಪೂಜೆ ಮಾಡುವಾಗ ಸಂಪೂರ್ಣವಾಗಿ ದೇವರಿಗೆ ಶರಣಾಗುತ್ತೇವೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.


 ತಪ್ಪು-ಸರಿಗಳ ಬಗ್ಗೆ ನಮ್ಮಲ್ಲಿರುವ ಗೊಂದಲ ಕಡಿಮೆ ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು.


 ಬದುಕಿನಲ್ಲಿ ಸತ್ಯಕ್ಕೆ ಹೆಚ್ಚು ಬೆಲೆ ಕೊಡುತ್ತೇವೆ, ಸತ್ಯವಂತರಾಗಿ ಬಾಳಲು ಬಯಸುತ್ತೇವೆ.


 ಸತ್ಯವಂತರಾದರೆ ಮಾತ್ರ ಆ ನಾರಾಯಣ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಬಲವಾಗುವುದು.


ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ :


ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡುವ ಮನೆಯವರೆಲ್ಲಾ ವ್ರತ ನಿಯಮಗಳನ್ನು ಪಾಲಿಸುತ್ತಾರೆ, ಆದ್ದರಿಂದ ಈ ಮನೆ ಸದಸ್ಯರೆಲ್ಲರಿಗೂ ಈ ಪ್ರಮುಖ ಪ್ರಯೋಜನಗಳು ದೊರೆಯುತ್ತದೆ.


 ಸತ್ಯನಾರಾಯಣ ವ್ರತ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡೂ ಶುದ್ಧವಾಗುವುದು. ದೇಹ ಶುದ್ಧವಾದರೆ ಆರೋಗ್ಯ ವೃದ್ಧಿಸುವುದು.


 ಮಾನಸಿಕ ಆರೋಗ್ಯ ಹೆಚ್ಚುವುದು ನಮ್ಮ ಗುರಿ ಕಡೆ ನಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದು. ಮನಸ್ಸಿನಲ್ಲಿರುವ ಗೊಂದಲಗಳು ದೂರಾಗುವುದು.


 ಮನೆಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ.


 ನಿಮ್ಮ ಬಯಕೆಗಳು ಈಡೇರುವುದು.

(ಸಂಗ್ರಹ )



!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!

ಸರ್ವೇ ಜನಾಃ ಸುಖಿನೋ ಭವಂತುಸರ್ವೇ

ಸಂತು  ನಿರಾಮಯಾಃ 

!! ಧರ್ಮೋ ರಕ್ಷತಿ ರಕ್ಷಿತಃ !!

ಹರಿ ಸರ್ವೋತ್ತಮ ವಾಯು ಜೀವೋತ್ತಮ 

(ಸಂಗ್ರಹ)



Comments