UPI Transaction Limit: ಗುಡ್‌ನ್ಯೂಸ್‌! UPI ವಹಿವಾಟು ಮಿತಿ ಹೆಚ್ಚಳ! 1 ದಿನದಲ್ಲಿ ಎಷ್ಟು ಲಕ್ಷ ವರ್ಗಾಯಿಸಬಹುದು ಗೊತ್ತಾ?

 UPI Transaction Limit: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ UPI ವಹಿವಾಟುಗಳ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿವೆ. ಸ್ಮಾರ್ಟ್‌ಫೋನ್ ಬಳಸುವ ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ಸಣ್ಣ ಮತ್ತು ದೊಡ್ಡ ವಹಿವಾಟು ಮತ್ತು ಹಣ ವರ್ಗಾವಣೆಗಾಗಿ UPI ಅನ್ನೇ ಬಳಸುತ್ತಿದ್ದಾರೆ.




ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ UPI ವಹಿವಾಟುಗಳ ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿವೆ. ಸ್ಮಾರ್ಟ್‌ಫೋನ್ ಬಳಸುವ ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ಸಣ್ಣ ಮತ್ತು ದೊಡ್ಡ ವಹಿವಾಟು ಮತ್ತು ಹಣ ವರ್ಗಾವಣೆಗಾಗಿ UPI ಅನ್ನೇ ಬಳಸುತ್ತಿದ್ದಾರೆ.




ದೊಡ್ಡ ವ್ಯಾಪಾರಿಗಳಿಂದ ಹಿಡಿದು ರಸ್ತೆ ಬದಿಯ ಸಣ್ಣ ಅಂಗಡಿಗಳವರೆಗೆ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡುವ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ, ಅದರ ದೈನಂದಿನ ಮಿತಿಯ ಬಗ್ಗೆ ಯಾವಾಗಲೂ ಅನೇಕ ಮಂದಿಗೆ ಗೊಂದಲಗಳಿರುತ್ತದೆ.




ಇದೀಗ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ಸಮಸ್ಯೆಗೆ ಸಹ ಮುಕ್ತಿ ನೀಡಿದೆ. ಅಂದರೆ ಇಂದಿನಿಂದ (ಸೋಮವಾರ, ಸೆಪ್ಟೆಂಬರ್ 16) UPI ವಹಿವಾಟುಗಳ ದೈನಂದಿನ ಮಿತಿಯು ಅನೇಕ ವಿಷಯಗಳಿಗಾಗಿ ಹೆಚ್ಚಾಗಲಿದೆ. ಇದರ ಬಗ್ಗೆ ಎಲ್ಲಾ ವಿವರಗಳು ಇಲ್ಲಿದೆ.




ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚನೆಗಳ ಪ್ರಕಾರ, ಸೆಪ್ಟೆಂಬರ್ 16 ರಿಂದ ಅನೇಕ ಸ್ಥಳಗಳಲ್ಲಿ ಯುಪಿಐ ವಹಿವಾಟು ಮಿತಿಯನ್ನು ಹೆಚ್ಚಿಸಲು ಎನ್‌ಪಿಸಿಐ (National Payments Corporation of India) ನಿರ್ಧರಿಸಿದೆ. ಆಗಸ್ಟ್ 8 ರಂದು ನಡೆದ ಹಣಕಾಸು ನೀತಿ ಸಭೆಯ ನಂತರ RBI ಯುಪಿಐ ವಹಿವಾಟಿನ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿತ್ತು.




ಈ ನಿಟ್ಟಿನಲ್ಲಿ, NPCI ಎಲ್ಲಾ UPI ಅಪ್ಲಿಕೇಶನ್‌ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದೆ. ಹೊಸ ಸೂಚನೆಗಳ ಪ್ರಕಾರ ತಮ್ಮ ಸಿಸ್ಟಂ ಅನ್ನು ನವೀಕರಿಸಲು ಸಹ ವಿನಂತಿಸಲಾಗಿದೆ.



NPCI ಪ್ರಕಾರ, ಹೊಸ ನಿಯಮಗಳ ಅಡಿಯಲ್ಲಿ, ನೀವು ಇಂದಿನಿಂದ ತೆರಿಗೆ ಪಾವತಿಸಲು UPI ಮೂಲಕ 5 ಲಕ್ಷದವರೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಆಸ್ಪತ್ರೆ ಬಿಲ್, ಶೈಕ್ಷಣಿಕ ಶುಲ್ಕ, ಐಪಿಒ ಮತ್ತು ಆರ್‌ಬಿಐನ ರಿಟೇಲ್ ಡೈರೆಕ್ಟ್ ಸ್ಕೀಮ್‌ಗಳಲ್ಲಿ ರೂ 5 ಲಕ್ಷದವರೆಗಿನ ವಹಿವಾಟುಗಳು ಸಹ ಸಾಧ್ಯವಾಗುತ್ತದೆ. ಅಂದ್ರೆ ಈ ಮೂರು ವಹಿವಾಟುಗಳಿಗೆ ಮಾತ್ರ ಇದು ಅನ್ವಯವಾಗಲಿದೆ.



ಆದರೆ ಅದಕ್ಕಿಂತ ಅಂದರೆ 5 ಲಕ್ಷಕ್ಕಿಂತ ಹೆಚ್ಚಿದ ಮಿತಿಯನ್ನು ಪ್ರತಿ ವಹಿವಾಟಿನಲ್ಲಿ ಮಾಡಲಾಗುವುದಿಲ್ಲ. ಈ ಹಿಂದೆ, NPCI ಯುಪಿಐ ವಹಿವಾಟಿನ ಮಿತಿಯನ್ನು ಡಿಸೆಂಬರ್ 2021 ಮತ್ತು ಡಿಸೆಂಬರ್ 2023 ರಲ್ಲಿ ಬದಲಾಯಿಸಿತ್ತು. ಇದಲ್ಲದೆ, ಒಂದೇ ಖಾತೆಯಿಂದ ಅನೇಕ ಜನರು ವಹಿವಾಟು ಮಾಡುವ ಸೌಲಭ್ಯ, ಯುಪಿಐ ಸರ್ಕಲ್ ಅನ್ನು ಸಹ ಪ್ರಾರಂಭಿಸಲಾಗಿದೆ.



ನಿನ್ನೆತನಕ ಎಲ್ಲಾ ಇತರ ರೀತಿಯ UPI ವಹಿವಾಟುಗಳಿಗೆ ದೈನಂದಿನ ಮಿತಿ 1 ಲಕ್ಷ ರೂಪಾಯಿ ಇತ್ತು. ಆದರೆ ವಿವಿಧ ಬ್ಯಾಂಕ್‌ಗಳು ಈ ಮಿತಿಯನ್ನು ತಮ್ಮದೇ ಆದ ರೀತಿಯಲ್ಲಿ ಹೊಂದಿಸಬಹುದು. ಅಲಹಾಬಾದ್ ಬ್ಯಾಂಕ್‌ನ UPI ವಹಿವಾಟಿನ ಮಿತಿ 25,000 ರೂ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ 1 ಲಕ್ಷದವರೆಗಿನ ವಹಿವಾಟುಗಳನ್ನು ಸ್ವೀಕರಿಸುತ್ತವೆ. ಇದರ ಹೊರತಾಗಿ, ಬಂಡವಾಳ ಮಾರುಕಟ್ಟೆ, ಸಂಗ್ರಹಣೆ, ವಿಮೆ ಮತ್ತು ವಿದೇಶಿ ವಹಿವಾಟುಗಳಿಗೆ (ವಿದೇಶಿ ಒಳಗಿನ ರವಾನೆ) ಒಂದೇ ಮಿತಿ ದಿನಕ್ಕೆ 2 ಲಕ್ಷ ರೂ ಇದೆ.



Comments