ಮಳೆಗಾಗಿ ವಿಭಿನ್ನ ಪ್ರಾರ್ಥನೆ; ಇಬ್ಬರು ಯುವಕರ ಮದುವೆ ಮಾಡಿಸಿದ ಗ್ರಾಮಸ್ಥರು.....

 ಮಳೆಗಾಗಿ ವಿಭಿನ್ನ ಪ್ರಾರ್ಥನೆ; ಇಬ್ಬರು ಯುವಕರ ಮದುವೆ ಮಾಡಿಸಿದ ಗ್ರಾಮಸ್ಥರು.....



ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಯುವಕರಿಗೆ ಮದುವೆ ಮಾಡಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆಯ ಮೇಲೆ ಗ್ರಾಮದಲ್ಲಿ ಇಬ್ಬರು ಯುವಕರಿಗೆ ಮದುವೆ ಮಾಡಿಸಿ ಪ್ರಾರ್ಥನೆ ಮಾಡುತ್ತಿರುವ ಗ್ರಾಮಸ್ಥರು.




ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ.




ಒಬ್ಬ ಯುವಕನಿಗೆ ಯುವತಿಯ ರೀತಿ ಅಲಂಕಾರ ಮಾಡಿ ಮದುವೆ ಮಾಡಿಸಿದ್ದಾರೆ, ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ, ಹುಡುಗಿಗೆ ರೇಷ್ಮೆ ಸೀರೆ, ಉಡಿಸಿ ಅಲಂಕಾರ ಮಾಡಿ ವದು ವರರ ರೀತಿ ಅಲಂಕರಿಸಿ ಸಾಂಪ್ರದಾಯಿಕವಾಗಿ ಮದುವೆ ಮಾಡಿಸಿದ್ದಾರೆ.



ವರದಿ: ಶಿವರಾಜ್ ನೇಸರ

Comments