ಭಾರತೀಯ ಕಿಸಾನ್ ಸಂಘದ ನೂತನ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳನ್ನು ಕರ್ನಾಟಕ ದಕ್ಷಿಣಾ ಪ್ರಾಂತ್ಯ ಪ್ರಮುಖ ನಾರಾಯಣ ಸ್ವಾಮಿ ರವರ ಮಾರ್ಗದರ್ಶನದಲ್ಲಿ ಅಯ್ಕೆ
ದೊಡ್ಡಬಳ್ಳಾಪುರ :ನಗರದ ಪ್ರವಾಸಿ ಮಂದಿರದಲ್ಲಿ ಅಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪದಾಧಿಕಾರಿಗಳನ್ನು ಸಂಘದ ಬೈಲ ಪ್ರಕಾರ ಮೂರು ವರ್ಷಗಳಿಗೊಮ್ಮೆ ಹೂಸ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಚುನಾವಣೆ ಅಧಿಕಾರಿಯಾಗಿ ಭಾರತೀಯ ಕಿಸಾನ್ ಸಂಘ ಪ್ರಮುಖ್ ಅಂಜಿನಪ್ಪ ಸಂಘದ ಸದಸ್ಯರ ಕೈ ಮೇಲೆ ಎತ್ತುವ ಮೂಲಕ ಆಯ್ಕೆ ಮಾಡಲಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ತಾಲ್ಲೂಕು ಅಧ್ಯಕ್ಷರಾಗಿ ದಡಘಟ್ಟ ಮಡುಗು ಗ್ಎಅಮದ ಡಿ.ಕೆ ಸಂಪತ್ ಕುಮಾರ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಗುಂಡಪ್ಪನಾಯಕನಹಳ್ಳಿಯ ರಾಜಕುಮಾರ್ ಜಿ.ಕೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜ ಘಟ್ಟ ಗಣೇಶ , ಸಹ ಕಾರ್ಯದರ್ಶಿಯಾಗಿ ಲಕ್ಷ್ಮೀದೇವಿ, ರಾಧಮಣಿ ಮಹಿಳಾ ಪ್ರಮುಖರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಕಿಸಾನ್ ಸಂಘದ ಚುನಾವಣೆ ಅಧಿಕಾರಿಯಾಗಿ ಅಂಜಿನಪ್ಪ ಪದಾಧಿಕಾರಿಗಳ ಪ್ರಕ್ರಿಯೆಯಲ್ಲಿ ಅಯ್ಕೆ ಮಾಡಲಾಯಿತು.
ಕರ್ನಾಟಕ ದಕ್ಷಿಣಾ ಪ್ರಾಂತ್ಯ ಪ್ರಮುಖ್ ನಾರಾಯಾಣ ಸ್ವಾಮಿ ರವರು ಮಾತನಾಡಿ ಭಾರತ ದೇಶದಲ್ಲಿ ಇಪ್ಪತೈದು ಸಾವಿರಕೂ ಸಂಘಟನೆ ಗಳಿಗಿಂತ ಹೆಚ್ಚು ಇವೆ ಅದರೆ ಅವುಗಳೆಲ್ಲಾ ವ್ಯಕ್ತಿ ಆಧಾರಿತ ಸಂಘಗಳಾಗಿದ್ದು ಸ್ಥಾಪನೆ ಮಾಡಿದ ವ್ತಕ್ತಿ ಇರುವವರೆಗೂ ಅ ಸಂಘ ಕಾರ್ಯ ರೂಪದಲ್ಲಿ ಇರುತ್ತೆ ಅ ವ್ಯಕ್ತಿ ಸಾವನ್ನಪ್ಪಿದ ನಂತರ ಅ ಸಂಘ ಅಸ್ಥಿತ್ವವನ್ನು ಕಳೆದು ಕೊಳ್ಳುತ್ತವೆ.ಆದರೆ ಭಾರತೀಯ ಕಿಸಾನ್ ಸಂಘ ಯಾರೆ ಇರಲಿ ಯಾರೆ ಬರಲಿ ಇದು ಕಾರ್ಯ ರೂಪದಲ್ಲಿ ಇರುತ್ತದೆ. ಈ ಸಂಘ ಸ್ಥಾಪನೆ ಯಾಗಿದ್ದು 1979 ಮಾರ್ಚ್ 4 ರಂದು ರಾಜಸ್ಥಾನದ ಕೋಟಾದಲ್ಲಿ. ಇಂದಿನ ದಿನಗಳಲ್ಲಿ ದೇಶ ಮೂಲೆ ಮೂಲೆಗಳಲ್ಲಿ ಗ್ರಾಮ ತಾಲ್ಲೂಕು ಜಿಲ್ಲೆಗಳಲ್ಲಿ ತಂಡಗಳನ್ನು ರಚನೆ ಮಾಡಿ ರೈತ ಸಮಸ್ಯೆ ಸೂಕ್ತ ಪರಿಹಾರ ಮಾಡುವುದು ಈ ಸಂಘದ ಉದ್ದೇಶವಾಗಿದೆ ಎಂದು ಹೇಳಿದರು.
ನಂತರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ ಸಂಪತ್ ಕುಮಾರ್ ಮಾತನಾಡಿ ನನ್ನನ್ನು ಗುರುತಿಸಿ ಭಾರತೀಯ ಕಿಸಾನ್ ಸಂಘದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರೈತರ ಸೇವೆ ಮಾಡಲು ಅನುವು ಮಾಡಿಕೊಟ್ಟಂತಹ ಭಾರತೀಯ ಕಿಸಾನ್ ಸಂಘದ ಎಲ್ಲಾ ಪ್ರಮುಖರಿಗೂ ಧನ್ವಾದಗಳು. ನನಗೆ ನೀಡಿದ ಜವಾಬ್ದಾರಿಯನ್ನು ಶ್ರದ್ಧಾಪೂರ್ವಕವಾಗಿ ನಿಭಾಯಿಸುತ್ತೇನೆ. ಸದಾ ರೈತರ ಪರವಾಗಿ ಇರುತ್ತೇನೆ ಎಂದು ಹೇಳಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಜಿ.ಕೆ ರಾಜ್ ಕುಮಾರ್ ಮಾತನಾಡಿ ನನಗೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಎಲ್ಲಾ ಪ್ರಮುಖರಿಗೂ ಧನ್ಯವಾದಗಳು. ಭಾರತೀಯ ಕಿಸಾನ್ ಸಂಘ ಒಂದು ಹೆಮ್ಮರ. ಇಂತಹ ಸಂಘದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟ.ಇನ್ನು ಮುಂದೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಗೂಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಭಾರತೀಯ ಕಿಸಾನ್ ಸಂಘ ಮೊಳಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ದಕ್ಷಿಣಾ ಪ್ರಾಂತ್ಯದ ಪ್ರಮುಖ್ ಪುಟ್ಟಸ್ವಾಮಿ ಗೌಡ, ದೊಡ್ಡಬಳ್ಳಾಪುರದ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಯದರ್ಶಿ ಹರಿಕುಮಾರ್ ,ಜಿಲ್ಲಾ ಮಹಿಳ ಪ್ರಮುಖ್ ಅಂಬಿಕಾ ಹಾಗು ಜಿಲ್ಲಾ ತಾಲ್ಲೂಕು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
Comments