ಹೆತ್ತ ತಾಯಿಯನ್ನೇ ಕೊಲೆಗೈದ ಮಗ ; ಕತ್ತು ಸೀಳಿ ಬರ್ಬರವಾಗಿ ಕೊಲೆ ..
ದೊಡ್ಡಬಳ್ಳಾಪುರ :ಹೆತ್ತ ಮಗನಿಂದಲೆ ತಾಯಿಯ ಕತ್ತು ಕೊಯ್ದು ಕೊಲೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದ ರಾಗರಾಳ್ಳಗುಟ್ಟ ಬಳಿ ನಡೆದಿದೆ.
ರತ್ನಮ್ಮ (56) ಕೊಲೆಯಾದ ತಾಯಿ. ಮಗ ಗಂಗರಾಜು ಎಂಬುವವನಿಂದ ಕೊಲೆಯಾದ ತಾಯಿ. ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ತಾಯಿ ಮಗನ ನಡುವೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಾತಿನ ಜಗಳ ವಿಕೋಪಕ್ಕೆ ತಿರುಗಿ ಮಗನಿಂದ ತಾಯಿಯ ಕೊಲೆಯಾಗಿದೆ.
ಇನ್ನೂ ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಂತರ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ...
ಮನೋಜ್ ಹನಿಯೂರು ಸಾರಥಿ ಟಿವಿ ನ್ಯೂಸ್ ದೊಡ್ಡಬಳ್ಳಾಪುರ
Comments