ಕೆಲಸದಿಂದ ತೆಗೆದಿದ್ದಕ್ಕೆ ಕೊಲ್ಲೆ ಮಾಡಿದ ಕಿರಾತಕ | ಮದ್ಯಪಾನ ಮಾಡಿಸಿ ತಲೆಯ ಮೇಲೆ ಹಾಲೋಬ್ರಿಕ್ಸ್ ಎತ್ತಿ ಹಾಕಿ ಕೊಲೆ - sarathitvnews
ಕೆಲಸದಿಂದ ತೆಗೆದಿದ್ದಕ್ಕೆ ಕೊಲ್ಲೆ ಮಾಡಿದ ಕಿರಾತಕ |ಮದ್ಯಪಾನ ಮಾಡಿಸಿ ತಲೆಯ ಮೇಲೆ ಹಾಲೋಬ್ರಿಕ್ಸ್ ಎತ್ತಿ ಹಾಕಿ ಕೊಲೆ.
ಯಲಹಂಕ:ಶ್ರೀಮತಿ ರೂಪ ಸೂದ್ 23 ವರ್ಷ ರವರು ಮೂಲತಃ ನೇಪಾಳದವರಾಗಿದ್ದು, ತನ್ನ ಸಂಸಾರ ಸಮೇತವಾಗಿ ಸುಮಾರು ಮೂರು ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರು ನಗರಕ್ಕೆ ಬಂದು ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರದ ಹತ್ತಿರವಿರುವ ತಿರುಪತಿಯ ಹೋಟೇಲ್‌ನ ಹಿಂಭಾಗದಲ್ಲಿ ವಾಸವಾಗಿರುತ್ತಾರೆ. ಪಿರ್ಯಾದುದಾರರ ಗಂಡನಾದ ಮೃತ ಗಜೇಂದ್ರ ಸೌದ್ 32 ವರ್ಷ ರವರು ತಿರುಪತಿ ಹೋಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು. ಇದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ ಎಂಬಾತನು ಕೆಲಸದ ವಿಚಾರವಾಗಿ ಆಗಾಗ ಗಜೇಂದ್ರ ಸೌದ್ ನೊಂದಿಗೆ ಜಗಳ ಮಾಡುತ್ತಿದ್ದರಿಂ ಹೋಟೇಲ್ ಮಾಲೀಕರು ಸಂತೋಷನನ್ನು ಕೆಲಸದಿಂದ ತೆಗೆದು ಹಾಕಿರುತ್ತಾರೆ.
ಹೋಟೆಲ್ ಮಾಲಿಕರು ಸಂತೋಷನನ್ನು ಕೆಲಸದಿಂದ ತೆಗೆದು ಹಾಕಿದ್ದ ಹಿನ್ನೆಲೆಯಲ್ಲಿ ಸಂತೋಷ್ ದ್ವೇಷದಿಂದ ದಿನಾಂಕ 17.05.2024 ರಂದು ಸಂಜೆ 7.00 ಗಂಟೆಯ ಸಮಯಲ್ಲಿ ಗಜೇಂದ್ರ ಸೌದ್ 32 ವರ್ಷ ರವರನ್ನು ಅವರ ಮನೆಯಿಂದ ಕರೆದುಕೊಂಡು ಹೋಗಿ ಡೈರಿ ಸರ್ಕಲ್ ನಲ್ಲಿರುವ ಬಿಂದಾಸ್ ಬಾರ್ ನಲ್ಲಿ ಮದ್ಯಪಾನ ಮಾಡಿಸಿ, ಬಾರ್ ಪಕ್ಕದಲ್ಲಿರುವ ಬಾಗಿಲು ಮುಚ್ಚಿರುವ ಅಂಗಡಿ ಮುಂಭಾಗದಲ್ಲಿ ಗಜೇಂದ್ರ ಸೌದ್ ನ ತಲೆಯ ಮೇಲೆ ಹಾಲೋಬ್ರಿಕ್ಸ್ ಎತ್ತಿ ಹಾಕಿ ಕೊಲೆ ಮಾಡಿರುತ್ತಾನೆ ಎಂಬಾ ಖಚಿತ ಮಾಹಿತಿಯ ಮೇರೆಗೆ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 252/2024 ಕಲಂ 302 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ಆರೋಪಿತನ ಪತ್ತೆಯ ಸಲುವಾಗಿ ತನಿಖೆ ನಡೆಸುತ್ತಿದ್ದಾರೆ.
Comments